ಭಾರತ-ವೆಸ್ಟ್ ಇಂಡೀಸ್ ನಡುವೆ ರಾಜ್’ಕೋಟ್’ನಲ್ಲಿ ನಡೆದ ಮೊದಲ ಟೆಸ್ಟ್’ನಲ್ಲಿ ಕೆರಿಬಿಯನ್ ಪಡೆ ಇನ್ನಿಂಗ್ಸ್ ಹಾಗೂ 272 ರನ್’ಗಳ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಭಜ್ಜಿ, ವೆಸ್ಟ್ ಇಂಡೀಸ್ ಕ್ರಿಕೆಟ್ ಬಗ್ಗೆ ಎಲ್ಲಾ ಗೌರವವನ್ನು ಇಟ್ಟುಕೊಂಡೇ ಈ ಮಾತನ್ನು ಹೇಳುತ್ತಿದ್ದೇನೆ.

ನವದೆಹಲಿ[ಅ.09]: ಭಾರತ ಎದುರಿನ ಮೊದಲ ಟೆಸ್ಟ್’ನಲ್ಲಿ ಹೀನಾಯವಾಗಿ ಸೋತ ವೆಸ್ಟ್ ಇಂಡೀಸ್ ತಂಡವನ್ನು ರಣಜಿ ತಂಡಕ್ಕೆ ಹೋಲಿಸಿದ್ದ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್’ಗೆ ವೆಸ್ಟ್ ಇಂಡೀಸ್ ಮಾಜಿ ವೇಗಿ ಟಿನೋ ಬೆಸ್ಟ್ ಟ್ವೀಟರ್’ನಲ್ಲೇ ತಿರುಗೇಟು ನೀಡಿದ್ದಾರೆ.

ಇದನ್ನು ಓದಿ: ವಿಂಡೀಸ್ ಪ್ರದರ್ಶನ ಗೇಲಿ ಮಾಡಿದ ಹರ್ಭಜನ್‌ಗೆ ಅಭಿಮಾನಿಗಳಿಂದ ತರಾಟೆ!

ಭಾರತ-ವೆಸ್ಟ್ ಇಂಡೀಸ್ ನಡುವೆ ರಾಜ್’ಕೋಟ್’ನಲ್ಲಿ ನಡೆದ ಮೊದಲ ಟೆಸ್ಟ್’ನಲ್ಲಿ ಕೆರಿಬಿಯನ್ ಪಡೆ ಇನ್ನಿಂಗ್ಸ್ ಹಾಗೂ 272 ರನ್’ಗಳ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಭಜ್ಜಿ, ವೆಸ್ಟ್ ಇಂಡೀಸ್ ಕ್ರಿಕೆಟ್ ಬಗ್ಗೆ ಎಲ್ಲಾ ಗೌರವವನ್ನು ಇಟ್ಟುಕೊಂಡೇ ಈ ಮಾತನ್ನು ಹೇಳುತ್ತಿದ್ದೇನೆ. ಈಗಿರುವ ವೆಸ್ಟ್ ಇಂಡೀಸ್ ತಂಡ ರಣಜಿ ಕ್ವಾರ್ಟರ್ ಹಂತಕ್ಕೂ ಅರ್ಹತೆ ಪಡೆಯಲ್ಲ. ಅಲ್ಲದೇ ರಣಜಿ ಪ್ಲೇಟ್ ಗ್ರೂಪ್ ಹಂತಕ್ಕೂ ಪ್ರವೇಶ ಗಿಟ್ಟಿಸುವುದು ಅನುಮಾನ ಎಂದು ಟ್ವೀಟ್ ಮಾಡಿದ್ದರು.

Scroll to load tweet…
Scroll to load tweet…

ಹರ್ಭಜನ್ ಸಿಂಗ್ ಮಾಡಿದ ಈ ಟ್ವೀಟ್’ಗೆ ಪ್ರತಿಕ್ರಿಯಿಸಿರುವ ಬೆಸ್ಟ್, ಹೇ ಬ್ರೋ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನಿಮ್ಮ ತಂಡ ಹೀನಾಯ ಪ್ರದರ್ಶನ ತೋರಿದಾಗ ನಿಮ್ಮಿಂದ ಈ ರೀತಿಯ ಜಂಬದ ಟ್ವೀಟ್’ಗಳು ನಮಗೆ ಕಾಣಿಸಿಲ್ಲ. ಇನ್ನಾದರು ನೀವು ಕಲಿಯುತ್ತೀರ ಎಂದು ಭಾವಿಸುತ್ತೇನೆ ಎಂದು ಕಾಲೆಳೆದಿದ್ದಾರೆ.

ಇದನ್ನು ಓದಿ:ರವಿಶಾಸ್ತ್ರಿ ಮೇಲೆ ಮುಗಿಬಿದ್ದ ಹರ್ಭಜನ್ ಸಿಂಗ್

ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 4-1 ಅಂತರದ ಹೀನಾಯ ಸೋಲು ಕಂಡಿತ್ತು.