ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್’ನಲ್ಲಿ 31 ರನ್’ಗಳಿಂದ ಮುಗ್ಗರಿಸಿದ್ದರೆ, ಲಾರ್ಡ್ಸ್’ನಲ್ಲಿ ನಡೆದ ಎರಡನೇ ಟೆಸ್ಟ್’ನಲ್ಲಿ ಇನ್ನಿಂಗ್ಸ್ 159 ರನ್’ಗಳಿಂದ ಹೀನಾಯ ಸೋಲು ಕಂಡು ಟೀಕೆಗೆ ಗುರಿಯಾಗಿತ್ತು. 

ನವದೆಹಲಿ[ಆ.15]: ಭಾರತ ತಂಡದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್, ಕೋಚ್ ರವಿಶಾಸ್ತ್ರಿಯನ್ನು ಬಹಿರಂಗವಾಗಿ ಟೀಕಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಭಜ್ಜಿ, ‘ಕೋಚ್ ತುಟಿ ಬಿಚ್ಚಬೇಕು. ತಂಡದ ಕಳಪೆ ಪ್ರದರ್ಶನದಲ್ಲಿ ಅವರ ಪಾಲು ಸಹ ಇದೆ. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಆಗಲಿಲ್ಲ ಎನ್ನುವುದನ್ನು ಅವರು ಒಪ್ಪಿಕೊಳ್ಳಬೇಕು’ ಎಂದಿದ್ದಾರೆ.

ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್’ನಲ್ಲಿ 31 ರನ್’ಗಳಿಂದ ಮುಗ್ಗರಿಸಿದ್ದರೆ, ಲಾರ್ಡ್ಸ್’ನಲ್ಲಿ ನಡೆದ ಎರಡನೇ ಟೆಸ್ಟ್’ನಲ್ಲಿ ಇನ್ನಿಂಗ್ಸ್ 159 ರನ್’ಗಳಿಂದ ಹೀನಾಯ ಸೋಲು ಕಂಡು ಟೀಕೆಗೆ ಗುರಿಯಾಗಿತ್ತು.