ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದರಿಂದ 15 ತಿಂಗಳುಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದ ಶೆರಪೋವಾ ಏಪ್ರಿಲ್ 2016ರಿಂದ ಸ್ಪರ್ಧಾತ್ಮಕ ಟೆನಿಸ್'ಗೆ ವಾಪಾಸಾಗಿದ್ದಾರೆ.

ಇಸ್ತಾನ್‌'ಬುಲ್(ಡಿ.01): 5 ಗ್ರ್ಯಾಂಡ್'ಸ್ಲ್ಯಾಂ ಒಡತಿ, ಮಾದಕ ಟೆನಿಸ್ ಬೆಡಗಿ ರಷ್ಯಾದ ಆಟಗಾರ್ತಿ ಮರಿಯಾ ಶೆರಪೋವಾಗೆ ಅಭಿಮಾನಿಯೊಬ್ಬ ಟೆನಿಸ್ ಕೋರ್ಟ್'ನಲ್ಲೇ ಮದುವೆ ಪ್ರಸ್ತಾಪ ಮಾಡಿದ್ದಾನೆ.

ಹೌದು, ಜಗತ್ತಿನಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಶೆರ್ಫಿ'ಗೆ ಅಭಿಮಾನಿಯೊಬ್ಬ ಅಚ್ಚರಿಯಂತೆ ಮದುವೆ ಆಫರ್ ನೀಡಿದ್ದಾನೆ.

ಇಲ್ಲಿನ ಪ್ರದರ್ಶನ ಪಂದ್ಯವೊಂದರಲ್ಲಿ ಶೆರಫೋವಾ ಆಡುತ್ತಿದ್ದಾಗ ಅಭಿಮಾನಿಯೊಬ್ಬ, 'ಶೆರಪೋವಾ ನನ್ನನ್ನು ಮದುವೆಯಾಗುತ್ತೀಯಾ? ಎಂದು ಕೂಗಿದ.

ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಶೆರಪೋವಾ, 'ನೋಡೋಣ' ಎಂದು ಹೇಳುವ ಮೂಲಕ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ನಗೆಗಡಲಿನಲ್ಲಿ ತೇಲುವಂತೆ ಮಾಡಿದರು.

ಹೀಗಿತ್ತು ಆ ಕ್ಷಣ..

Scroll to load tweet…

ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದರಿಂದ 15 ತಿಂಗಳುಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದ ಶೆರಪೋವಾ ಏಪ್ರಿಲ್ 2016ರಿಂದ ಸ್ಪರ್ಧಾತ್ಮಕ ಟೆನಿಸ್'ಗೆ ವಾಪಾಸಾಗಿದ್ದಾರೆ.