ಸೆಹ್ವಾಗ್ ಜತೆಗೆ ಪೃಥ್ವಿ ಹೋಲಿಕೆ: ಅಚ್ಚರಿಯ ಹೇಳಿಕೆ ನೀಡಿದ ಗಂಭೀರ್..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Oct 2018, 4:30 PM IST
Think twice before comparing Prithvi Shaw to Virender Sehwag Says Gambhir
Highlights

‘ಪೃಥ್ವಿ ಶಾ ರನ್ನು ವಿರೇಂದ್ರ ಸೆಹ್ವಾಗ್‌ಗೆ ಹೋಲಿಸುವುದಕ್ಕೂ ಮೊದಲು ಯೋಚಿಸಬೇಕು. ಇಂತಹ ಆಟಗಾರರ ನಡುವಿನ ಹೋಲಿಕೆಯಲ್ಲಿ ನನಗೆ ನಂಬಿಕೆಯಿಲ್ಲ’ ಎಂದು ಗಂಭೀರ್ ಹೇಳಿದ್ದಾರೆ.

ಮುಂಬೈ(ಅ.11): ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿಯೇ ಶತಕ ಬಾರಿಸಿ ಗಮನ ಸೆಳೆದಿದ್ದ ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾರನ್ನು, ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್’ಗೆ ಹೋಲಿಸಿದ್ದಕ್ಕೆ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಪೃಥ್ವಿ ಶಾ ರನ್ನು ವಿರೇಂದ್ರ ಸೆಹ್ವಾಗ್‌ಗೆ ಹೋಲಿಸುವುದಕ್ಕೂ ಮೊದಲು ಯೋಚಿಸಬೇಕು. ಇಂತಹ ಆಟಗಾರರ ನಡುವಿನ ಹೋಲಿಕೆಯಲ್ಲಿ ನನಗೆ ನಂಬಿಕೆಯಿಲ್ಲ’ ಎಂದು ಗಂಭೀರ್ ಹೇಳಿದ್ದಾರೆ. ಪೃಥ್ವಿ ಶಾ ಹಾಗೂ ಸೆಹ್ವಾಗ್ ಸೇರಿದಂತೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಐಡೆಂಟಿಟಿ ಇರುತ್ತದೆ. ಸೆಹ್ವಾಗ್ ನೂರಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಫೃಥ್ವಿ ಈಗತಾನೆ ಟೆಸ್ಟ್ ವೃತ್ತಿಜೀವನ ಆರಂಭಿಸಿದ್ದಾರೆ. ಹೀಗಾಗಿ ಪೃಥ್ವಿಯನ್ನು ಸೆಹ್ವಾಗ್’ಗೆ ಹೋಲಿಸುವವರು ಎರೆಡೆರಡು ಬಾರಿ ಯೋಚಿಸಬೇಕು ಎಂದು ಗೌತಿ ಹೇಳಿದ್ದಾರೆ.

ಇದನ್ನು ಓದಿ: ಶತಕ ವೀರ ಪೃಥ್ವಿ ಶಾ ಕಾಲೆಳೆದ ಕಾಂಡೋಮ್ ಕಂಪೆನಿ!

ಈ ಮೊದಲು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ಪೃಥ್ವಿಯನ್ನು ಸೆಹ್ವಾಗ್’ಗೆ ಹೋಲಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನು ಓದಿ: ಪೃಥ್ವಿ ಶಾರನ್ನು ಇಬ್ಬರು ಸಾರ್ವಕಾಲಿಕ ದಿಗ್ಗಜರಿಗೆ ಹೋಲಿಸಿದ ಶಾಸ್ತ್ರಿ

ವೆಸ್ಟ್ ಇಂಡೀಸ್ ವಿರುದ್ಧ ರಾಜ್’ಕೋಟ್’ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಪೃಥ್ವಿ ಶಾ, ತಾನಾಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಹಲವಾರು ದಾಖಲೆಗಳನ್ನು ಬರೆದರು. ಹಲವಾರು ಮಾಧ್ಯಮಗಳು ಪೃಥ್ವಿಯನ್ನು ದಿಗ್ಗಜ ಕ್ರಿಕೆಟಿಗರಿಗೆ ಹೋಲಿಕೆ ಮಾಡಿ ವರದಿ ಮಾಡಿವೆ.   

loader