ಇಂತಹ ವಿಷಯಗಳು ಸಂಭವಿಸಿದಾಗ ನೀವು ಅದನ್ನು ಒಪ್ಪಿಕೊಳ್ಳಬೇಕು. ಆದರೆ, ತಂಡ ಇದನ್ನೆಲ್ಲಾ ಬದಿಗೊತ್ತಿ ಮುಂದುವರಿಯಬೇಕು. ಇಲ್ಲವಾದರೆ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ

ಪೋರ್ಟ್ ಆಫ್ ಸ್ಪೇನ್(ಜೂ.25): ಅನಿಲ್ ಕುಂಬ್ಳೆ ಅವರು ಕೋಚ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ತಂಡದಲ್ಲಿ ಕೊಂಚ ನಿರಾಸೆ ಮೂಡಿದ್ದು, ಅವರ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ನಾವೆಲ್ಲ ವೃತ್ತಿಪರರು. ಯಾವುದೇ ಸಂಸ್ಥೆಗಳಲ್ಲಿ ಬದಲಾವಣೆ ಹಾಗೂ ಇಂತಹ ಸನ್ನಿವೇಶಗಳು ಸಾಮಾನ್ಯ. ಬೆಂಬಲಿಗ ಸಿಬ್ಬಂದಿ ಹಾಗೂ ಆಟಗಾರರು ಸಾಕಷ್ಟು ವೃತ್ತಿಪರತೆ ಪ್ರದರ್ಶಿಸಿದ್ದಾರೆ’ ಎಂದಿದ್ದಾರೆ.

‘ಇಂತಹ ವಿಷಯಗಳು ಸಂಭವಿಸಿದಾಗ ನೀವು ಅದನ್ನು ಒಪ್ಪಿಕೊಳ್ಳಬೇಕು. ಆದರೆ, ತಂಡ ಇದನ್ನೆಲ್ಲಾ ಬದಿಗೊತ್ತಿ ಮುಂದುವರಿಯಬೇಕು. ಇಲ್ಲವಾದರೆ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ’ ಎಂದು ಬಾಂಗರ್ ಹೇಳಿದ್ದಾರೆ.