ಆಸ್ಟ್ರೇಲಿಯಾ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!
ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್, ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹಾಗೂ ಕ್ಯಾಮರಾನ್ ಬೆನ್‌ಕ್ರಾಫ್ಟ್ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧದ ಶಿಕ್ಷೆ ಅನುಭವಿಸುತ್ತಿದ್ದಾರೆ. ಪ್ರಕರಣ ತಣ್ಣಗಾಗುತ್ತಿದ್ದಂತೆ, ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅಷ್ಟಕ್ಕೂ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಿಕ್ಕಿರೋ ಟ್ವಿಸ್ಟ್ ಏನು? ಇಲ್ಲಿದೆ ವಿವರ.
ಸಿಡ್ನಿ(ಜು.27): ಆಸ್ಟ್ರೇಲಿಯಾ ತಂಡದ ಚೆಂಡು ವಿರೂಪಗೊಳಿಸಿದ ಪ್ರಕರಣ ತಣ್ಣಗಾಗುತ್ತಿದ್ದಂತೆ, ಇದೀಗ ಹೊಸ ತಿರುವು ಪಡೆದುಕೊಂಡಿದೆ. ಬಾಲ್ ಟ್ಯಾಂಪರಿಂಗ್ ನಡೆಸಿದ ಆಸಿಸ್ ನಾಯಕ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರಾನ್ ಬೆನ್‌ಕ್ರಾಫ್ಟ್ ನಿಷೇಧ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಆಸಿಸ್ ತಂಡ ಬಾಲ್‌ಟ್ಯಾಂಪರಿಂಗ್ ನಡೆಸಿಲ್ಲ. ವಿಶ್ವದೆಲ್ಲೆಡೆ ಬಿತ್ತರಿಸಿರುವ ವೀಡಿಯೋ ತಿರುಚಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಪೀಟರ್ ಹ್ಯಾಂಡ್ಸ್‌ಕಾಂಬ್ ಹೇಳಿದ್ದಾರೆ. ಈ ಮೂಲಕ ಚೆಂಡು ವಿರೂಪ ಪ್ರಕರಣಕ್ಕೆ ಹೊಸ ಹಾದಿ ಹಿಡಿದಿದೆ.
ಚೆಂಡು ವಿರೂಪ ಪ್ರಕರಣದ ವೀಡಿಯೋದಲ್ಲಿ 2 ತುಣುಕಗಳನ್ನ ಬಳಸಲಾಗಿದೆ. ಈ ಎರಡು ವೀಡಿಯೋ ತುಣುಕಗಳ ಮಧ್ಯೆ 20 ನಿಮಿಷಗಳ ಅಂತರವಿದೆ. ಎರಡು ಬೇರೆ ಬೇರೆ ವೀಡಿಯೋ ತುಣುಕುಗಳನ್ನ ಎಡಿಟ್ ಮಾಡಿ ಬಿತ್ತರಿಸಲಾಗಿದೆ ಎಂದು ಪೀಟರ್ ಹ್ಯಾಂಡ್ಸ್‌ಕಾಂಬ್ ಆರೋಪಿಸಿದ್ದಾರೆ.
ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರಾನ್ ಬೆನ್‌ಕ್ರಾಫ್ಟ್ ಈಗಾಗಲೇ ಚೆಂಡು ವಿರೂಪ ಪ್ರಕರಣ ನಡೆಸಿರೋದನ್ನ ಒಪ್ಪಿಕೊಂಡಿದ್ದಾರೆ. ಆದರೆ ಪೀಟರ್‌ಹ್ಯಾಂಡ್ಸ್‌ಕಾಂಬ್ ಹೇಳಿಕೆ ಇದೀಗ ಗೊಂದಲ ಸೃಷ್ಟಿಸಿದೆ.