IPL ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಶುಬಮನ್ ಗಿಲ್ ಪ್ರದರ್ಶನ ಹೇಗಿದೆ? ಯಾರು ಬೆಸ್ಟ್?
ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಹಾಗು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿದೆ. ಐಪಿಎಲ್ ಫೈನಲ್ ಪಂದ್ಯಗಳಲ್ಲಿ ಆರ್‌ಸಿಬಿಯ ವಿರಾಟ್ ಕೊಹ್ಲಿ ಹಾಗು ಗುಜರಾತ್ ತಂಡದ ಶುಬಮನ್ ಗಿಲ್ ಪರ್ಫಾಮೆನ್ಸ್ ಹೇಗಿದೆ?

ಐಪಿಎಲ್ ಫೈನಲ್ ಹೋರಾಟ
IPL ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಹೋರಾಟಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಯಾರು ಟ್ರೋಫಿ ಗೆಲ್ಲುತ್ತಾರೆ ಅನ್ನೋ ಕುತೂಹಲ ಒಂದೆಡೆಯಾದರೆ, ಮತ್ತೊಂಡೆದೆ ಅಭಿಮಾನಿಗಳಿಗೆ ಕ್ರಿಕೆಟ್ ಹಬ್ಬ. ಟ್ರೋಫಿ ಗೆಲ್ಲುವ ಫೇವರಿಟ್ ಯಾರು ಅನ್ನೋದು ಕೀ ಪ್ಲೇಯರ್ ಪರ್ಫಾಮೆನ್ಸ್ ನೋಡಿದರೆ ಸ್ಪಷ್ಟವಾಗುತ್ತೆ.
ಫೈನಲ್ ಪಂದ್ಯದಲ್ಲಿ ಕೊಹ್ಲಿ ಪರ್ಫಾಮೆನ್ಸ್
ಆರ್‌ಸಿಬಿ ಇದುವರೆಗೆ ನಾಲ್ಕು ಫೈನಲ್ ಪಂದ್ಯ ಆಡಿದೆ. ಈ ನಾಲ್ಕು ಫೈನಲ್ ಪಂದ್ಯದಲ್ಲಿ ಕೊಹ್ಲಿ ಪ್ರದರ್ಶನ ಹೀಗಿದೆ
- 2009, ಡೆಕ್ಕನ್ ಚಾರ್ಜಸ್ ವಿರುದ್ಧ, 7 ರನ್, ಆರ್‌ಸಿಬಿಗೆ 6 ರನ್ ಸೋಲು
- 2011, ಸಿಎಸ್‌ಕೆ ವಿರುದ್ಧ, 35 ರನ್, ಆರ್‌ಸಿಬಿಗೆ 58 ರನ್ ಸೋಲು
- 2016, ಸನ್‌ರೈಸರ್ಸ್ ವಿರುದ್ಧ, 54 ರನ್, ಆರ್‌ಸಿಬಿಗೆ 8ರನ್ ಸೋಲು
- 2025, ಪಂಜಾಬ್ ಕಿಂಗ್ಸ್ ವಿರುದ್ಧ, 43 ರನ್, ಆರ್‌ಸಿಬಿಗೆ 6 ರನ್ ಗೆಲುವು
ಫೈನಲ್ ಪಂದ್ಯದಲ್ಲಿ ಶುಬಮನ್ ಗಿಲ್ ಪರ್ಫಾಮೆನ್ಸ್
ಶುಬಮನ್ ಗಿಲ್ ಮೂರು ಐಪಿಎಲ್ ಫೈನಲ್ ಪಂದ್ಯ ಆಡಿದ್ದಾರೆ. ಈ ಪೈಕಿ ಒಂದು ಪೈನಲ್ ಕೆಕೆಆರ್ ಪರವಾಗಿ ಆಡಿದರೆ ಇನ್ನೆರಡು ಗುಜರಾತ್ ಟೈಟಾನ್ಸ್ ಪರವಾಗಿ ಆಡಿದ್ದಾರೆ.
- 2021, ಸಿಎಸ್‌ಕೆ ವಿರುದ್ಧ, 51 ರನ್, ಕೆಕೆಆರ್‌ಗೆ 27 ರನ್ ಸೋಲು
- 2022, ರಾಜಸ್ಥಾನ ವಿರುದ್ಧ, 45 ರನ್, ಗುಜರಾತ್‌ಗೆ 7 ವಿಕೆಟ್ ಗೆಲುವು
- 2023,ಸಿಎಸ್‌ಕೆ ವಿರುದ್ಧ, 39 ರನ್, ಗುಜರಾತ್‌ಗೆ ಸೋಲು
ಕೊಹ್ಲಿ ಪ್ಲೇ ಆಫ್ ಪರ್ಪಾಮೆನ್ಸ್
ಐಪಿಎಲ್ ಫ್ಲೇಆಫ್ ಪಂದ್ಯಗಲ್ಲಿ ಕೊಹ್ಲಿ ಬ್ಯಾಟ್‌ನಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಸದ್ಯ ಆರ್‌ಸಿಬಿ ತಂಡ ಒಬ್ಬ ಆಟಗಾರನ ನೆಚ್ಚಿಕೊಂಡಿಲ್ಲ. ತಂಡದ ಎಲ್ಲರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಆರ್‌ಸಿಬಿ ಆತ್ಮವಿಶ್ವಾಸ ಹೆಚ್ಚಾಗಿದೆ.
ಗಿಲ್ ಶತಕದಲ್ಲಿ ಅಡಗಿದೆಯಾ ಗೆಲುವು
2022ರಲ್ಲಿ ಗುಜರಾತ್ ಚೊಚ್ಚಲ ಟ್ರೋಫಿ ಗೆದ್ದಾಗ ಪ್ಲೇ ಆಫ್ ಪಂದ್ಯದಲ್ಲಿ ಶುಬಮನ್ ಗಿಲ್ ಶತಕ ಸಿಡಿಸಿದ್ದರು. ಇದೀಗ ಪ್ಲೇ ಆಪ್ ಹಂತದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಶುಬಮ್ ಗಿಲ್ ಸೆಂಚುರಿ ಸಿಡಿಸಿದ್ದಾರೆ. ಹೀಗಾಗಿ ಗಿಲ್ ಶತಕದಲ್ಲಿ ತಂಡದ ಟ್ರೋಫಿ ಗೆಲುವಿನ ಸೀಕ್ರೆಟ್ ಅಡಗಿದೆಯಾ ಅನ್ನೋ ಚರ್ಚೆಗಳು ಶುರುವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

