ಚಿತ್ತಗಾಂಗ್[ಸೆ.09]: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಆಫ್ಘಾನಿಸ್ತಾನ ಗೆಲುವಿನತ್ತ ಹೆಜ್ಜೆ ಹಾಕಿದೆ. ಆಫ್ಘನ್ ಇನ್ನು ಕೇವಲ 4 ವಿಕೆಟ್ ಪಡೆದರೆ ಜಯದ ನಗೆ ಬೀರಲಿದೆ. ಆದರೆ ಆಫ್ಘನ್ ಗೆಲುವಿಗೆ ಶಕೀಬ್ ಅಡ್ಡಿಯಾಗಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ. 

ಟೆಸ್ಟ್‌: ಬಾಂಗ್ಲಾ ವಿರುದ್ಧ ಜಯದ ನಿರೀಕ್ಷೆಯಲ್ಲಿ ಆಫ್ಘನ್

4ನೇ ದಿನವಾದ ಭಾನುವಾರ 8 ವಿಕೆಟ್‌ಗೆ 237 ರನ್‌ಗಳಿಂದ 2ನೇ ಇನ್ನಿಂಗ್ಸ್ ಮುಂದುವರೆಸಿದ ಆಫ್ಘನ್ 260 ರನ್‌ಗಳಿಗೆ ಆಲೌಟ್ ಆಯಿತು. 398 ರನ್‌ಗಳ ಬೃಹತ್ ಸವಾಲನ್ನು ಬೆನ್ನತ್ತಿದ ಬಾಂಗ್ಲಾ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದ್ದು, 5ನೇ ಹಾಗೂ ಕೊನೆಯ ದಿನದಾಟದಲ್ಲಿ ಉಳಿದ 4 ವಿಕೆಟ್‌ಗಳಿಂದ 262 ರನ್‌ಗಳಿಸಬೇಕಿದೆ. 4ನೇ ದಿನದಾಟದಲ್ಲಿ ಕೆಲ ಹೊತ್ತು ಮಳೆ ಅಡ್ಡಿಪಡಿಸಿತು. 

ಮಹಿಳಾ ಟಿ20 ವಿಶ್ವಕಪ್‌ಗೆ ಥಾಯ್ಲೆಂಡ್, ಬಾಂಗ್ಲಾ

ನಾಯಕ ಶಕೀಬ್ (39), ಸೌಮ್ಯ ಸರ್ಕಾರ್ (೦) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ಇನಿಂಗ್ಸ್’ನಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದ ಆಫ್ಘನ್ ನಾಯಕ ರಶೀದ್ ಖಾನ್ ಎರಡನೇ ಇನಿಂಗ್ಸ್’ನಲ್ಲೂ 3 ವಿಕೆಟ್ ಪಡೆದು ಬಾಂಗ್ಲಾ ತಂಡಕ್ಕೆ ಆಘಾತ ನೀಡಿದ್ದಾರೆ. ಜಹೀರ್ ಖಾನ್ 2 ಹಾಗೂ ವೃತ್ತಿ ಜೀವನದ ಕಡೆಯ ಟೆಸ್ಟ್ ಪಂದ್ಯವನ್ನಾಡುತ್ತಿರುವ ಮೊಹಮ್ಮದ್ ನಬೀ 1 ವಿಕೆಟ್ ಪಡೆದಿದ್ದಾರೆ. 

ಸ್ಕೋರ್: 
ಆಫ್ಘನ್ 342 ಹಾಗೂ 260/10, 
ಬಾಂಗ್ಲಾ 205 ಹಾಗೂ 136/6 (4ನೇ ದಿನದಂತ್ಯಕ್ಕೆ)