ದುಬೈ(ಸೆ.09): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಅಂತಿಮ ವೇಳಾಪಟ್ಟಿ ಭಾನುವಾರ ಪ್ರಕಟವಾಗಿದೆ. ಮಹಿಳಾ ಟಿ20 ಅರ್ಹತಾ ಸುತ್ತಿನ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ಮೂಲಕ ಬಾಂಗ್ಲಾದೇಶ ಹಾಗೂ ಥಾಯ್ಲೆಂಡ್ ಟಿ20  ವಿಶ್ವಕಪ್‌ನಲ್ಲಿ ಸ್ಥಾನ ಗಿಟ್ಟಿಸಿದವು. 

ಟಿ20 ವಿಶ್ವ​ಕಪ್‌: 'A' ಗುಂಪಿನಲ್ಲಿ ಸ್ಥಾನ ಪಡೆದ ಟೀಂ ಇಂಡಿಯಾ

ಅಂತಾರಾಷ್ಟ್ರೀಯ ಮಾನ್ಯತೆ ಪಡೆದ 12 ವರ್ಷಗಳ ಬಳಿಕ ಥಾಯ್ಲೆಂಡ್ ಮೊದಲ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ. ‘ಎ’ ಗುಂಪಿನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಸ್ಥಾನ ಪಡೆದರೆ, ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ದ.ಆಫ್ರಿಕಾ, ಪಾಕಿಸ್ತಾನ ಹಾಗೂ ಥಾಯ್ಲೆಂಡ್ ತಂಡಗಳಿವೆ. ಟಿ20 ವಿಶ್ವಕಪ್ ಟೂರ್ನಿಗೆ ಅಗ್ರ 8 ಶ್ರೇಯಾಂಕದ ತಂಡಗಳು ನೇರ ಅರ್ಹತೆ ಪಡೆದುಕೊಂಡಿದ್ದವು. ಇದೀಗ ಬಾಂಗ್ಲಾ ಹಾಗೂ ಥಾಯ್ಲೆಂಡ್ ಅರ್ಹತಾ ಪಂದ್ಯಗಳನ್ನಾಡಿ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮಕ್ಕೆ ಲಗ್ಗೆಯಿಟ್ಟಿವೆ. 

ಕ್ರಿಕೆಟಿಗ ಮೈಕಲ್ ಕ್ಲಾರ್ಕ್‌ಗೆ ಚರ್ಮ ಕ್ಯಾನ್ಸರ್‌; ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡ!

2020ರ ಫೆಬ್ರವರಿ 21 ರಿಂದ ಮಾರ್ಚ್ 8 ರವರೆಗೆ ಟೂರ್ನಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಫೈನಲ್ ಪಂದ್ಯ ವಿಶ್ವ ಮಹಿಳಾ ದಿನಾಚರಣೆಯ ದಿನವಾದ ಮಾರ್ಚ್ 8ರಂದು ಮೆಲ್ಬರ್ನ್ ಮೈದಾನದಲ್ಲಿ ನಡೆಯಲಿದೆ.