ಚಿತ್ತಗಾಂಗ್‌[ಸೆ.08]: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಆಫ್ಘಾನಿಸ್ತಾನ ಬಿಗಿ ಹಿಡಿತ ಸಾಧಿಸಿದೆ. 3ನೇ ದಿನದಂತ್ಯಕ್ಕೆ ಆಫ್ಘಾನಿಸ್ತಾನ 2ನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 237 ರನ್‌ ಕಲೆಹಾಕಿದ್ದು, ಒಟ್ಟು 374 ರನ್‌ ಮುನ್ನಡೆ ಪಡೆ​ದಿದೆ. 

ಟೆಸ್ಟ್‌: ಬಾಂಗ್ಲಾ ಮೇಲೆ ಆಫ್ಘಾ​ನಿ​ಸ್ತಾನ ಸವಾ​ರಿ!

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 205 ರನ್‌ಗೆ ಆಲೌಟಾಯಿತು. ರಶೀದ್‌ ಖಾನ್‌ 5 ವಿಕೆಟ್‌ ಕಿತ್ತರು. ಆಫ್ಘನ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ 28 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿ​ದ್ದಾಗ ಇಬ್ರಾಹಿಂ ಜದ್ರಾನ್‌ ಹಾಗೂ ಅಸ್ಗರ್‌ ಆಫ್ಘನ್‌ 4ನೇ ವಿಕೆಟ್‌ಗೆ 108 ರನ್‌ ಜೊತೆಯಾಟವಾಡಿ ತಂಡಕ್ಕೆ ನೆರ​ವಾ​ದರು.

ಆಫ್ಘನ್ ಮಾಜಿ ನಾಯಕ ಅಸ್ಗರ್‌ ಆಫ್ಘನ್‌[50] ಮತ್ತೊಂದು ಅರ್ಧಶತಕ ಸಿಡಿಸಿದರು. ಇಬ್ರಾಹಿಂ ಜದ್ರಾನ್ 87 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೊದಲ ಇನಿಂಗ್ಸ್’ನಲ್ಲಿ ಅರ್ಧಶತಕ ಸಿಡಿಸಿದ್ದ ನಾಯಕ ರಶೀದ್ ಖಾನ್ 6 ಬೌಂಡರಿ ನೆರವಿನಿಂದ 24 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಅಫ್ಸರ್ ಜಝೈ[34] ಹಾಗೂ ಯಾಮಿನ್ ಅಹಮ್ಮದ್’ಝೈ [0] ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಸ್ಕೋರ್‌: ಆಫ್ಘನ್‌ 342 ಹಾಗೂ 237/8 (3ನೇ ದಿನದಂತ್ಯಕ್ಕೆ), 

ಬಾಂಗ್ಲಾ 205