ನವದೆಹಲಿ(ಸೆ.10): ಭಾರತದ ಯುವ ಟೆನಿಸ್‌ ತಾರೆ ಸುಮಿತ್‌ ನಗಾಲ್‌ ಎಟಿಪಿ ರಾರ‍ಯಂಕಿಂಗ್‌ನಲ್ಲಿ ವೃತ್ತಿಜೀವನದ ಶ್ರೇಷ್ಠ 174ನೇ ಸ್ಥಾನ ಪಡೆ​ದಿ​ದ್ದಾರೆ. ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂನ ಪ್ರಧಾನ ಸುತ್ತಿಗೆ ಪ್ರವೇ​ಶಿ​ಸಿದ್ದ ನಗಾಲ್‌, ಮೊದಲ ಸುತ್ತಿ​ನಲ್ಲಿ ದಿಗ್ಗಜ ರೋಜರ್‌ ಫೆಡ​ರರ್‌ ವಿರುದ್ಧ ವೀರೋ​ಚಿತ ಸೋಲು ಕಂಡಿ​ದ್ದರು. 

ಇದನ್ನೂ ಓದಿ: ಕೊಹ್ಲಿ ನೆರವಿಲ್ಲದಿದ್ದರೆ, ನಾನೇನಾಗುತ್ತಿದ್ದೆ ಗೊತ್ತಿಲ್ಲ; ಸುಮಿತ್ ನಗಾಲ್!

ಪ್ರಜ್ನೇಶ್‌ ಗುಣೇ​ಶ್ವ​ರನ್‌ 3 ಸ್ಥಾನ​ಗಳ ಏರಿಕೆ ಕಂಡಿದ್ದು 85ನೇ ಸ್ಥಾನದ​ಲ್ಲಿ​ದ್ದಾರೆ. ಪುರು​ಷರ ವಿಭಾಗದಲ್ಲಿ ನೋವಾಕ್‌ ಜೋಕೋವಿಚ್‌, ರಾಫೆಲ್‌ ನಡಾಲ್‌, ರೋಜರ್‌ ಫೆಡ​ರರ್‌ ಮೊದಲ 3 ಸ್ಥಾನ​ಗ​ಳಲ್ಲಿ ಮುಂದು​ವ​ರಿ​ದಿದ್ದು, ಯುಎಸ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಆದ ರಷ್ಯಾದ ಡಾನಿಲ್‌ ಮೆಡ್ವೆ​ಡೆವ್‌ 4ನೇ ಸ್ಥಾನ​ಕ್ಕೇ​ರಿ​ದ್ದಾರೆ. 

ಇದನ್ನೂ ಓದಿ: ಟೆನಿಸ್ ದಿಗ್ಗಜ ಫೆಡರರ್ ಹೃದಯ ನಿಲ್ಲಿಸಿದ್ದ ಭಾರತದ ನಗಾಲ್!

ಮಹಿಳಾ ಸಿಂಗಲ್ಸ್‌ನಲ್ಲಿ ಜಪಾನ್‌ನ ನವೊಮಿ ಒಸಾಕರನ್ನು ಹಿಂದಿಕ್ಕಿ ಆಸ್ಪ್ರೇ​ಲಿ​ಯಾದ ಆಶ್ಲೆ ಬಾರ್ಟಿ ಅಗ್ರ​ಸ್ಥಾ​ನ ಪಡೆ​ದಿದ್ದು, ಯುಎಸ್‌ ಓಪನ್‌ ವಿಜೇತೆ ಕೆನ​ಡಾದ ಬಿಯಾಂಕ ಆಂಡ್ರೀಸ್ಕು 5ನೇ ಸ್ಥಾನಕ್ಕೇರಿ​ದ್ದಾರೆ.