ಹರ್ಯಾಣ(ಸೆ.01): ಯುಎಸ್ ಒಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸುಮಿತ್ ನಗಾಲ್ ಹೋರಾಟಕ್ಕೆ ಎಲ್ಲರು ಭೇಷ್ ಎಂದಿದ್ದರು. ಕಾರಣ ಟೆನಿಸ್ ದಿಗ್ಗಜ ಸ್ವಿಸ್‌ನ ರೋಜರ್‌ ಫೆಡರರ್ ವಿರುದ್ಧ ಮೊದಲ ಸೆಟ್ ಗೆದ್ದು ತಾನೊಬ್ಬ ಹೋರಾಟಗಾರ ಅನ್ನೋದನ್ನು ಸಾಬೀತು ಪಡಿಸಿದ್ದರು. ಫೆಡರರ್ ವಿರುದ್ಧ ಕಣಕ್ಕಿಳಿಯುವುದೇ ಅದೃಷ್ಠ. ಅದರಲ್ಲೂ ಮೊದಲ ಸೆಟ್ ಗೆದ್ದರೆ ಕೇಳುವುದೇ ಬೇಡ. ಇನ್ನುಳಿದ 2 ಸೆಟ್‌ಗಳಲ್ಲಿ ನಗಾಲ್ ಸೋತರೂ ಎಲ್ಲರ ಹೃದಯ ಗೆದ್ದಿದ್ದರು. ಇದೇ ನಗಾಲ್ ಯಸಶಸ್ಸಿನ ಹಿಂದೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ನೆರವಿದೆ.

ಇದನ್ನೂ ಓದಿ: ದಿಗ್ಗಜ ಫೆಡರರ್‌ಗೆ ಶಾಕ್ ನೀಡಿದ ಭಾರತದ ಸುಮಿತ್!

ಸುಮಿತ್ ನಗಾಲ್ ದಿಟ್ಟ ಹೋರಾಟ, ಧರ್ಯ, ಟೆಕ್ನಿಕ್ ಎಲ್ಲರೂ ಗಮಿಸಿದ್ದಾರೆ.  ಆದರೆ ನಗಾಲ್ ಕಷ್ಟದ ದಿನಗಳು ಹೆಚ್ಚಿನವರಿಗೆ ತಿಳಿದಿಲ್ಲ. ಕಳಪೆ ಪ್ರದರ್ಶನದಿಂದ ಸುಮಿತ್ ನಗಾಲ್ ಪ್ರತಿಷ್ಠಿತ ಟೂರ್ನಿಗಳಿಗೆ ಆಯ್ಕೆಯಾಗುತ್ತಿರಲಿಲ್ಲ. ಇದರಿಂದ ನಗಾಲ್ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿತು. ಇನ್ನೇನು ಟೆನಿಸ್ ಬಿಟ್ಟು ಉದ್ಯೋಗ ಅರಸಿಕೊಳ್ಳಬೇಕು ಅನ್ನುವಷ್ಟರಲ್ಲಿ ನೆರವಿಗೆ ಬಂದಿದ್ದು ಇದೇ ವಿರಾಟ್ ಕೊಹ್ಲಿ. 

ಇದನ್ನೂ ಓದಿ: ಟೆನಿಸ್ ದಿಗ್ಗಜ ಫೆಡರರ್ ಹೃದಯ ನಿಲ್ಲಿಸಿದ್ದ ಭಾರತದ ನಗಾಲ್!

ವಿರಾಟ್ ಕೊಹ್ಲಿ ಫೌಂಡೇಶನ್ ಸುಮಿತ್ ನಗಾಲ್‌ಗೆ ಆರ್ಥಿಕ ಸಹಾಯದ ಜೊತೆ ಪ್ರಾಯೋಜಕತ್ವ ಸೇರಿದಂತೆ ಹಲವು ರೀತಿಯ ನೆರವು ನೀಡಿ ಆತ್ಮವಿಶ್ವಾಸ ತುಂಬಿತು. 2017ರಿಂದ ನಗಾಲ್‌ಗೆ ವಿರಾಟ್ ಕೊಹ್ಲಿ ಫೌಂಡೇಶನ್ ನೆರವು ನೀಡುತ್ತಿದೆ. " ವರ್ಷ ಆರ್ಥಿಕವಾಗಿ ಕುಸಿದು ಹೋಗಿದ್ದೆ. 2017ರಿಂದ ವಿರಾಟ್ ಕೊಹ್ಲಿ ಫೌಂಡೇಶನ್ ನನ್ನ ನೆರವಿಗೆ ಬಂತು. ಕೊಹ್ಲಿ ಫೌಂಡೇಶನ್ ಇಲ್ಲದಿದ್ದರೆ ನಾನೇನಾಗುತ್ತಿದ್ದೆ ಅನ್ನೋದೇ ಗೊತ್ತಿಲ್ಲ ಎಂದು ನಗಾಲ್ ಹೇಳಿದ್ದಾರೆ.