ಇಂಗ್ಲೆಂಡ್ ವಿರುದ್ಧ ಸರಣಿಗೆ ಭಾರತ ವನಿತಾ ತಂಡ ಪ್ರಕಟ,ಕೆಲವು ಬದಲಾವಣೆ

First Published 27, Mar 2018, 5:57 PM IST
Team Women India Select For England tour
Highlights

ಭಾರತ ತಂಡವನು ಮಿಥಾಲಿ ರಾಜ್ ಮುನ್ನಡೆಸಲಿದ್ದು, ಆರಂಭಿಕ ಆಟಗಾರ್ತಿ ಪೂನಮ್ ರಾವತ್ ಬದಲಿಗೆ ದಯಾಲನ್ ಹೇಮಲತಾ ಸ್ಥಾನ ನೀಡಲಾಗಿದೆ.

ನವದೆಹಲಿ(ಮಾ.27): ಇದೇ ಏ.3ರಿಂದ ಇಂಗ್ಲೆಂಡ್ ವಿರುದ್ಧ ಆರಂಭಗೊಳ್ಳಲಿರುವ 4 ಏಕದಿನ ಪಂದ್ಯಗಳ ಸರಣಿಗೆ 15 ಆಟಗಾರ್ತಿಯರನ್ನು ಒಳಗೊಂಡ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಸೋಮವಾ ಪ್ರಕಟಿಸಲಾಗಿದೆ. ಏ.3, 6, 9 ಹಾಗೂ 12ರಂದು ನಾಗ್ಪುರದಲ್ಲಿ ಪಂದ್ಯಗಳು ನಡೆಯಲಿವೆ.

ಭಾರತ ತಂಡವನು ಮಿಥಾಲಿ ರಾಜ್ ಮುನ್ನಡೆಸಲಿದ್ದು, ಆರಂಭಿಕ ಆಟಗಾರ್ತಿ ಪೂನಮ್ ರಾವತ್ ಬದಲಿಗೆ ದಯಾಲನ್ ಹೇಮಲತಾ ಸ್ಥಾನ ನೀಡಲಾಗಿದೆ. ಉಳಿದಂತೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದ ತಂಡವನ್ನೇ ಉಳಿಸಿಕೊಳ್ಳಲಾಗಿದೆ. ಇದೇ ವೇಳೆ ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿರುವ ಭಾರತ ‘ಎ’ ತಂಡವನ್ನು ಸಹ ಪ್ರಕಟಿಸಲಾಗಿದೆ.

loader