ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್ ಅನ್ನು ಬಾಲ್ಡ್ ಪಿಚ್ ಇಲ್ಲವೇ ಹಸಿರು ಹುಲ್ಲಿನಿಂದ ಮುಕ್ತವಾಗಿರುವ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿ ರೂಪಿಸುವಂತೆ ಕ್ಯುರೇಟರ್‌ಗಳಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಮನವಿ ಮಾಡಿದ್ದಾರೆ.
ಮುಂಬೈ(ಡಿ.03): ತವರಿನಲ್ಲಿ ಯಾವಾಗಲೂ ಸ್ಪಿನ್ ಸ್ನೇಹಿ ಪಿಚ್ಗಳನ್ನು ತಯಾರಿಸುವ ಮೂಲಕ ಗೆಲುವಿನ ಸರದಾರ ಎನಿಸಿಕೊಳ್ಳಲು ಟೀಂ ಇಂಡಿಯಾ ಹವಣಿಸುತ್ತದೆ ಎಂಬ ಆರೋಪದಿಂದ ಮುಕ್ತವಾಗಲು ಟೀಂ ಇಂಡಿಯಾ ನಿರ್ಧರಿಸಿದೆ.
ಪ್ರಸಕ್ತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೇ ಈ ಆರೋಪದಿಂದ ಮುಕ್ತವಾಗಲು ಯತ್ನಿಸಿರುವ ಅದು, ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಅಣಿಗೊಳ್ಳುತ್ತಿರುವ ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್ ಅನ್ನು ಬಾಲ್ಡ್ ಪಿಚ್ ಇಲ್ಲವೇ ಹಸಿರು ಹುಲ್ಲಿನಿಂದ ಮುಕ್ತವಾಗಿರುವ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿ ರೂಪಿಸುವಂತೆ ಕ್ಯುರೇಟರ್ಗಳಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಮನವಿ ಮಾಡಿದ್ದಾರೆ.
ಅಂದಹಾಗೆ ಮೊದಲ ಟೆಸ್ಟ್ ನಡೆದಿದ್ದ ರಾಜ್ಕೋಟ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದರೆ, 2ನೇ ಪಂದ್ಯ ನಡೆದಿದ್ದ ವಿಶಾಖಪಟ್ಟಣದಲ್ಲಿನ ಪಿಚ್ ನಿಧಾನಗತಿಯದ್ದಾಗಿತ್ತಲ್ಲದೆ, ಬೌನ್ಸಿಯದ್ದಾಗಿರಲಿಲ್ಲ. ಇನ್ನು ಮೊಹಾಲಿಯಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ತಯಾರಾಗಿದ್ದ ಪಿಚ್ ನಿರ್ಜೀವವಾಗಿತ್ತಲ್ಲದೆ, ಮೂರನೇ ದಿನದಾಂತ್ಯಕ್ಕೆ ತಿರುವು ಪಡೆಯುವಂತಿತ್ತು.
