ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಉಮೇಶ್ ಯಾದವ್ ಹಾಗೂ ಕೆ.ಎಲ್ ರಾಹುಲ್ ಹೊರಗುಳಿದಿದ್ದು ಅವರ ಬದಲಿಗೆ ಮೊಹಮ್ಮದ್ ಶಮಿ ಹಾಗೂ ಶಿಖರ್ ಧವನ್ ಸ್ಥಾನ ಗಿಟ್ಟಿಸಿದ್ದಾರೆ.
ನವದೆಹಲಿ(ಡಿ.02): ಭಾರತ-ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆ ಕಾಯ್ದುಕೊಂಡಿರುವ ಟೀಂ ಇಂಡಿಯಾ ಸತತ 9ನೇ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಉಮೇಶ್ ಯಾದವ್ ಹಾಗೂ ಕೆ.ಎಲ್ ರಾಹುಲ್ ಹೊರಗುಳಿದಿದ್ದು ಅವರ ಬದಲಿಗೆ ಮೊಹಮ್ಮದ್ ಶಮಿ ಹಾಗೂ ಶಿಖರ್ ಧವನ್ ಸ್ಥಾನ ಗಿಟ್ಟಿಸಿದ್ದಾರೆ. ಇನ್ನು ಶ್ರೀಲಂಕಾ ತಂಡದಲ್ಲಿ 3 ಬದಲಾವಣೆ ಮಾಡಲಾಗಿದ್ದು, ರಂಗನಾ ಹೆರಾತ್, ತಿರುಮನ್ನೆ ಮತ್ತು ಸನಕ ಬದಲಿಗೆ ಸಂದಕನ್, ಧನಂಜಯ್ ಡಿಸಿಲ್ವಾ ಮತ್ತು ರೋಶೆನ್ ಸ್ಥಾನ ಪಡೆದಿದ್ದಾರೆ.
ರೋಶೆನ್ ಸಿಲ್ವಾ ಇಂದು ತಿಲಾನ್ ಸಮರವೀರ ಅವರಿಂದ ಕ್ಯಾಪ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದರು.
ತಂಡಗಳು ಹೀಗಿವೆ:
ಭಾರತ: ಧವನ್, ವಿಜಯ್, ಪೂಜಾರ, ಕೊಹ್ಲಿ(ನಾಯಕ), ರಹಾನೆ, ರೋಹಿತ್ ಶರ್ಮಾ, ಅಶ್ವಿನ್, ಸಾಹಾ, ಶಮಿ, ಇಶಾಂತ್ ಶರ್ಮಾ.
ಶ್ರೀಲಂಕಾ: ಸಮರವಿಕ್ರಮ, ಕರುಣಾರತ್ನೆ, ರೋಶೆನ್ ಸಿಲ್ವಾ, ಮ್ಯಾಥ್ಯೂಸ್, ಚಾಂಡಿಮಲ್(ನಾಯಕ), ಡಿಕ್'ವೆಲ್ಲಾ, ಧನಂಜಯ್ ಡಿ ಸಿಲ್ವಾ, ದಿಲ್ರುವಾನ್ ಪೆರೆರಾ, ಲಕ್ಮಲ್, ಸಂದಕನ್, ಗಮಾಗೆ
