Asianet Suvarna News Asianet Suvarna News

ಸ್ವಾತಂತ್ರ್ಯ ದಿನಾಚರಣೆ; ಶುಭಕೋರಿದ ಟೀಂ ಇಂಡಿಯಾ!

73ನೇ ಸ್ವಾತಂತ್ರ್ಯ ದಿನಾಚರಣೆಗೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಶುಭಕೋರಿದ್ದಾರೆ. ವಿಡಿಯೋ ಮೂಲಕ ಕ್ರಿಕೆಟಿಗರು ಭಾರತೀಯರಿಗೆ ಶುಭಕೋರಿದ್ದಾರೆ.

Team India players wish indians on 73rd independence day
Author
Bengaluru, First Published Aug 15, 2019, 2:31 PM IST
  • Facebook
  • Twitter
  • Whatsapp

ಪೋರ್ಟ್ ಆಫ್ ಸ್ಪೇನ್(ಆ.15): ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸ್ವಾತಂತ್ರ್ಯ ದಿನಾಚರಣಗೆ ಭರ್ಜರಿ ಉಡುಗೊರೆ ನೀಡಿದೆ. ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸೋ ಮೂಲಕ ಸರಣಿ ಗೆದ್ದುಕೊಂಡಿದೆ. 73ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸರಣಿ ಗೆದ್ದ ಟೀಂ ಇಂಡಿಯಾ ಇದೀಗ ಸಮಸ್ತ ಭಾರತೀಯರಿಗೆ ಶುಭಕೋರಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ; ಅತ್ಯಂತ ಅಪಾಯಕಾರಿ ಸಿಯಾಚಿನ್‌ಗೆ ಧೋನಿ ಭೇಟಿ!

ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಕೋಚ್ ರವಿ ಶಾಸ್ತ್ರಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ್ದಾರೆ. ಕ್ರಿಕೆಟಿಗ ವಿಡಿಯೋ  ಶುಭ ಹಾರೈಕೆಯನ್ನು ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

 

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ; ಲಡಾಕ್‌ಗೆ ಧೋನಿ ಭೇಟಿ; ಕೇಂದ್ರಾಡಳಿತದಲ್ಲಿ ಹೊಸ ಸಂಚಲನ!

ಟಿ20 ಸರಣಿ ಬಳಿಕ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ ಇದೀಗ 2 ಪಂದ್ಯದ ಟೆಸ್ಟ್ ಸರಣಿಗೆ ಸಜ್ಜಾಗಲಿದೆ. ಆಗಸ್ಟ್ 17 ರಿಂದ 19ರ ವರೆಗೆ 3 ದಿನದ ಅಭ್ಯಾಸ ಪಂದ್ಯ ಆಡಲಿರುವ ಟೀಂ ಇಂಡಿಯಾ, ಆಗಸ್ಟ್ 22 ರಿಂದ ಟೆಸ್ಟ್ ಸರಣಿ ಆರಂಭಿಸಲಿದೆ.
 

Follow Us:
Download App:
  • android
  • ios