Asianet Suvarna News Asianet Suvarna News

2007 to 2019: ಇಲ್ಲಿದೆ ಟೀಂ ಇಂಡಿಯಾ ಕೋಚ್ ಸ್ಯಾಲರಿ ಸ್ಲಿಪ್!

ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ, ಟೀಂ ಇಂಡಿಯಾ ಕ್ರಿಕೆಟಿಗರಿಗೆ, ಕೋಚ್‌ಗಳಿಗೆ ಗರಿಷ್ಠ ವೇತನ ನೀಡುತ್ತಿದೆ. 2007 ರಿಂದ ಇಲ್ಲೀವರೆಗೆ ಭಾರತ ತಂಡ ಐವರು ಕೋಚ್‌ಗಳನ್ನು ಕಂಡಿದೆ. ಇವರ ಪಡೆಯುತ್ತಿದ್ದ  ಸ್ಯಾಲರಿ ವಿವರ ಇಲ್ಲಿದೆ.

Five Team india head coaches salary from 2007 to present
Author
Bengaluru, First Published Sep 15, 2019, 7:25 PM IST

ಮುಂಬೈ(ಸೆ.15): ಕ್ರಿಕೆಟ್ ಜಗತ್ತಿನಲ್ಲಿ ಬಿಸಿಸಿಐ ಗರಿಷ್ಠ ಆದಾಯಗಳಿಸುತ್ತಿದೆ. ಹೀಗಾಗಿಯೇ ವಿಶ್ವದ ಶ್ರೀಮಂತ ಹಾಗೂ ಶಕ್ತಿಶಾಲಿ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿದೆ. ಕೋಟಿ ಕೋಟಿ ಆದಾಯಗಳಿಸುತ್ತಿರುವ ಬಿಸಿಸಿಐ ಕ್ರಿಕೆಟಿಗರಿಗೆ ಕೋಚ್, ಸಹಾಯ ಸಿಬ್ಬಂಧಿ ಸೇರಿದಂತೆ ಬಿಸಿಸಿಐ ಉದ್ಯೋಗಿಗಳಿಗೆ ಅದೇ ರೀತಿ ಸಂಭಾವನೆಯನ್ನು ನೀಡುತ್ತಿದೆ. ಕೋಟಿಂಗ್ ವಿಚಾರದಲ್ಲಿ ಬಿಸಿಸಿಐ ಇತರ ಎಲ್ಲಾ ಕ್ರಿಕೆಟ್ ರಾಷ್ಟ್ರಗಳಿಗಿಂತ ಗರಿಷ್ಠ ವೇತನ ನೀಡುತ್ತಿದೆ. ಇದೀಗ 2007 ರಿಂದ ಇಲ್ಲೀವರೆಗೆ ಟೀಂ ಇಂಡಿಯಾ ಕೋಚ್ ಪಡೆದ ಸಂಭಾವನೆ ವಿವರ ಪಟ್ಟಿ ಮಾಡಲಾಗಿದೆ.

ಇದನ್ನೂ ಓದಿ: ಕೋಚ್ ಹುದ್ದೆಯಿಂದ ಗೇಟ್‌ಪಾಸ್: ಮೌನ ಮುರಿದ ಬಾಂಗರ್

1) ಗ್ರೆಗ್ ಚಾಪೆಲ್
2005 ರಿಂದ 2007ರ ವರೆಗೆ ಟೀಂ ಇಂಡಿಯಾ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್‌ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದರು. ಚಾಪೆಲ್‌ಗೆ ಪ್ರತಿ ವರ್ಷ ಬಿಸಿಸಿಐ 1.24 ಕೋಟಿ ರೂಪಾಯಿ ಸ್ಯಾಲರಿ ನೀಡುತ್ತಿತ್ತು. 

2) ಗ್ಯಾರಿ ಕರ್ಸ್ಟನ್
2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಟೀಂ ಇಂಡಿಯಾ ಕೋಚ್ ಗ್ಯಾರಿ ಕರ್ಸ್ಟನ್ ಭಾರತೀಯರ ಅಚ್ಚು ಮೆಚ್ಚು. 2007 ರಿಂದ 2011ರ ವರೆಗೆ ಭಾರತ ತಂಡದ ಕೋಚಿಂಗ್ ಜವಾಬ್ದಾರಿ ವಹಿಸಿದ್ದ ಗ್ಯಾರಿಗೆ 2.5 ಕೋಟಿ ರೂಪಾಯಿ ವಾರ್ಷಿಕ  ವೇತನ ನೀಡಲಾಗುತ್ತಿತ್ತು.

ಇದನ್ನೂ ಓದಿ: ಕುಂಬ್ಳೆ, ದ್ರಾವಿಡ್‌ಗಿಂತ ಗ್ರೇಟಾ ರವಿ ಶಾಸ್ತ್ರಿ?ಸಂಬಳದಲ್ಲೂ ಅನ್ಯಾಯ!

3) ಡಂಕನ್ ಫ್ಲೆಚರ್
2011ರಲ್ಲಿ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾಗಿ ಡಂಕನ್ ಫ್ಲೆಚರ್ ಹಲವು ಏಳು ಬೀಳು ಕಂಡಿದ್ದಾರೆ. ಫ್ಲೆಚರ್ ಅವಧಿಯಲ್ಲಿ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷಣ್ ಹಾಗೂ ಸಚಿನ್ ತೆಂಡುಲ್ಕರ್ ವಿದಾಯ ಹೇಳಿದ್ದರು. ಹೀಗಾಗಿ ಹಿರಿಯ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸುವುದು ಕಠಿಣ ಸವಾಲಾಗಿತ್ತು. ಆದರೆ 2013ರಲ್ಲಿ ಫ್ಲೆಚರ್ ಅವಧಿಯಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದ ಐತಿಹಾಸಿಕ ಸಾಧನೆ ಮಾಡಿತ್ತು. 2011ರಿಂದ 2015ರ ವರೆಗೆ ಭಾರತ ತಂಡದ  ಕೋಚ್ ಆಗಿದ್ದ ಫ್ಲೆಚರ್ ಪ್ರತಿ ವರ್ಷ 4.2 ಕೋಟಿ ರೂಪಾಯಿ ಸ್ಯಾಲರಿ ಪಡೆಯುತ್ತಿದ್ದರು.

ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಶಾಸ್ತ್ರಿ ಸ್ಯಾಲರಿ ; ಬೆಚ್ಚಿ ಬೀಳಬೇಡಿ ಸ್ಲಿಪ್ ನೋಡಿ!

4)ಅನಿಲ್ ಕುಂಬ್ಳೆ
ಕನ್ನಡಿಗ ಅನಿಲ್ ಕುಂಬ್ಳೆ 2016ರಲ್ಲಿ ಟೀಂ ಇಂಡಿಯಾ ಕೋಚ್ ಆಗಿ ನೇಮಕ ಗೊಂಡರು. ಕುಂಬ್ಳೆ ಅವಧಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಆದರೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿತ್ತು. ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಮನಸ್ತಾಪದಲ್ಲಿ ಕುಂಬ್ಳೆ ಒಂದೇ ವರ್ಷಕ್ಕೆ ಕೋಚ್ ಹುದ್ದೆಗೆ ಗುಡ್ ಬೈ ಹೇಳಿದರು. ಕುಂಬ್ಳೆ ವಾರ್ಷಿಕ ಸ್ಯಾಲರಿ 6.25 ಕೋಟಿ ರೂಪಾಯಿ.

5) ರವಿ ಶಾಸ್ತ್ರಿ
ಕುಂಬ್ಳೆ ಕೋಚ್ ಹುದ್ದೆಯಿಂದ ಕೆಳಗಿಳದ ಬಳಿಕ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ರವಿ ಶಾಸ್ತ್ರಿ 2017ರಲ್ಲಿ ಭಾರತ ತಂಡದ ಕೋಚ್ ಆಗಿ ನೇಮಕಗೊಂಡರು ಮೊದಲ 2 ವರ್ಷದ ಅವಧಿಯಲ್ಲಿ ಶಾಸ್ತ್ರಿ ಪ್ರತಿ ವರ್ಷ 8 ಕೋಟಿ ರೂಪಾಯಿ ಸ್ಯಾಲರಿ ಪಡೆದಿದ್ದರು. ಇದೀಗ 2ನೇ ಬಾರಿಗೆ ಕೋಚ್ ಆಗಿ ಮುಂದುವರಿದಿರುವ ಶಾಸ್ತ್ರಿ ಸ್ಯಾಲರಿ ಬರೋಬ್ಬರಿ 10 ಕೋಟಿ ರೂಪಾಯಿ.

Follow Us:
Download App:
  • android
  • ios