Asianet Suvarna News Asianet Suvarna News

‘ಡ​ಬಲ್‌ ಟಿ20 ವಿಶ್ವ​ಕಪ್‌’ಗೆ ಟೀಂ ಇಂಡಿಯಾ ಸಿದ್ಧ​ತೆ

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ರೆಡಿಯಾಗುವುದರ ಜತೆ ಜತೆಗೆ ಮುಂಬರುವ ಎರಡೆರಡು ಟಿ20 ವಿಶ್ವಕಪ್‌ ಮೇಲೆ ಕಣ್ಣಿಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

Team India Cricket Team Prepare for Double T20 World Cup
Author
New Delhi, First Published Sep 14, 2019, 10:14 AM IST

ನವ​ದೆ​ಹ​ಲಿ[ಸೆ.14]: ಬಹು ನಿರೀ​ಕ್ಷಿ​ತ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರ​ಣಿಗೆ ಇನ್ನೊಂದೇ ದಿನ ಬಾಕಿ ಇದೆ. 3 ಪಂದ್ಯ​ಗಳ ಸರ​ಣಿ ಭಾನುವಾರ ಆರಂಭ​ಗೊ​ಳ್ಳ​ಲಿದ್ದು, ಎರ​ಡೆ​ರೆಡು ವಿಶ್ವ​ಕಪ್‌ನ ಸಿದ್ಧತೆಗೂ ಚಾಲ​ನೆ ಸಿಗ​ಲಿದೆ. 2020, 2021ರಲ್ಲಿ ಐಸಿಸಿ ಟಿ20 ವಿಶ್ವ​ಕಪ್‌ ನಡೆ​ಯ​ಲಿದ್ದು, ಉದ್ಘಾ​ಟನಾ ಆವೃ​ತ್ತಿಯ ಚಾಂಪಿ​ಯನ್‌ ತಂಡ ಮತ್ತೊಮ್ಮೆ ಪ್ರಶಸ್ತಿ ಎತ್ತಿ​ಹಿ​ಡಿ​ಯುವ ಗುರಿ ಹೊಂದಿದೆ.

ಟಿ20 ಮಾದ​ರಿಗೆ ಬಲಿಷ್ಠ ತಂಡ ಕಟ್ಟುವುದು ಕಷ್ಟದ ಕೆಲಸ. ಈ ಮಾದ​ರಿ​ಯಲ್ಲಿ ಆಟ​ಗಾ​ರ​ರಿಗೆ ಲಯದ ಸಮಸ್ಯೆ ಎದು​ರಾ​ದರೆ ಪರಿ​ಹಾರ ಕಂಡು​ಕೊ​ಳ್ಳಲು ಹೆಚ್ಚಿನ ಸಮಯ ಸಿಗು​ವು​ದಿಲ್ಲ. ವಿರಾಟ್‌ ಕೊಹ್ಲಿ ಪಡೆಗೆ ಇರುವ ಮತ್ತೊಂದು ಸವಾಲು, ಎರ​ಡು ವಿಭಿ​ನ್ನ ವಾತಾ​ವ​ರಣಕ್ಕೆ ಸರಿ​ಹೊಂದುವ ತಂಡವನ್ನು ಸಿದ್ಧ​ಪ​ಡಿ​ಸು​ವುದು. 2020ರ ಅಕ್ಟೋ​ಬರ್‌-ನವೆಂಬರ್‌ನಲ್ಲಿ ಟಿ20 ವಿಶ್ವ​ಕಪ್‌ ಆಸ್ಪ್ರೇ​ಲಿ​ಯಾ​ದಲ್ಲಿ ನಡೆ​ದರೆ, 2021ರ ಅಕ್ಟೋ​ಬರ್‌-ನವೆಂಬರ್‌ನಲ್ಲಿ ಟಿ20 ವಿಶ್ವ​ಕಪ್‌ ಭಾರ​ತ​ದಲ್ಲಿ ನಿಗದಿಯಾ​ಗಿದೆ. ಎರಡೂ ದೇಶಗಳಲ್ಲಿನ ಪಿಚ್‌, ಸ್ಥಳೀಯ ವಾತಾ​ವ​ರ​ಣದಲ್ಲಿ ಸಂಪೂರ್ಣ ವ್ಯತ್ಯಾಸವಿರ​ಲಿದ್ದು, ಮೀಸಲು ಪಡೆಯೂ ಬಲಿ​ಷ್ಠ​ವಾ​ಗಿ​ರ​ಬೇ​ಕಿದೆ.

ಭಾರತ-ಸೌತ್ ಆಫ್ರಿಕಾ ಸರಣಿ; ಯಾರು ಮರೆತಿಲ್ಲ 4 ಅತಿ ದೊಡ್ಡ ವಿವಾದ!

ಕಠಿಣ ಅಭ್ಯಾಸ: ತಂಡದ ನಿಯಂತ್ರಣದಲ್ಲಿ​ರು​ವುದು ಅಭ್ಯಾಸ ಮಾತ್ರ. ಈ ನಿಟ್ಟಿ​ನಲ್ಲಿ ವಿರಾಟ್‌ ಕೊಹ್ಲಿ ಪಡೆ ಕಠಿಣ ಪರಿ​ಶ್ರಮ ವಹಿ​ಸು​ತ್ತಿದೆ. ಮುಂದಿನ ವರ್ಷ ಐಪಿ​ಎಲ್‌ಗೂ ಮುನ್ನ ಭಾರತ ತಂಡ 17 ಟಿ20 ಪಂದ್ಯಗಳನ್ನು ಆಡ​ಲಿದೆ. 2019ರಲ್ಲೇ 9 ಪಂದ್ಯ​ಗ​ಳು ಇವೆ. ಇತ್ತೀ​ಚೆಗೆ ವೆಸ್ಟ್‌ಇಂಡೀಸ್‌ ವಿರುದ್ಧ 3-0 ಅಂತ​ರ​ದಲ್ಲಿ ಸರಣಿ ಕ್ಲೀನ್‌ ಸ್ವೀಪ್‌ ಮಾಡಿ, ಭರ್ಜರಿ ಆರಂಭ ಪಡೆ​ದಿ​ರುವ ಭಾರತ, ದಕ್ಷಿಣ ಆಫ್ರಿ​ಕಾ​ದಂತಹ ಬಲಿ​ಷ್ಠ ತಂಡದ ಸವಾಲು ಸ್ವೀಕ​ರಿ​ಸಲು ಸಜ್ಜಾ​ಗಿದೆ.

ಹೊಸ ಹೊಸ ಪ್ರಯೋಗ!: ವಿಶ್ವ​ಕಪ್‌ಗೆ ಯುವ ಆಟ​ಗಾ​ರರನ್ನು ಬೆಳೆಸುವುದು ನಮ್ಮ ತಕ್ಷಣದ ಯೋಜನೆ ಎಂದು ಪ್ರಧಾನ ಕೋಚ್‌ ರವಿ​ಶಾಸ್ತ್ರಿ ಈಗಾ​ಗಲೇ ಸ್ಪಷ್ಟ​ಪ​ಡಿ​ಸಿ​ದ್ದಾರೆ. ಭಾರತ ತಂಡ​ದಲ್ಲಿ ಈಗಾ​ಗಲೇ ಹಲವು ಪ್ರಯೋಗಗಳು ಶುರು​ವಾ​ಗಿದೆ. ಬ್ಯಾಟಿಂಗ್‌ಗಿಂತಲೂ ಬೌಲಿಂಗ್‌ ವಿಭಾಗದಲ್ಲಿ ಹಲವು ಹೊಸ ಮುಖಗಳಿಗೆ ಅವ​ಕಾಶ ನೀಡ​ಲಾ​ಗು​ತ್ತಿದೆ. ಸತತ 2ನೇ ಸರ​ಣಿಗೆ ಮುಂಚೂಣಿ ವೇಗಿ ಜಸ್ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡ​ಲಾ​ಗಿದೆ. ಇದ​ರಿಂದ ಹೊಸಬರಿಗೆ ಮತ್ತೊಂದು ಅವ​ಕಾಶ ಸಿಗ​ಲಿದೆ. ಬುಮ್ರಾ ಯಾವತ್ತು ಬೇಕಿ​ದ್ದರೂ ತಂಡ ಕೂಡಿ​ಕೊಂಡ ಪರಿ​ಣಾ​ಮ​ಕಾರಿ ಪ್ರದ​ರ್ಶನ ತೋರ​ಬಲ್ಲ ಆಟ​ಗಾರ.

ದಕ್ಷಿಣ ಆಫ್ರಿಕಾ ವಿರುದ್ಧ ಸರ​ಣಿಗೆ ಭುವ​ನೇ​ಶ್ವರ್‌ ಕುಮಾರ್‌ ಸಹ ಇಲ್ಲ. ಇದ​ರರ್ಥ ನವ್‌ದೀಪ್‌ ಸೈನಿ, ದೀಪಕ್‌ ಚಾಹರ್‌ ಹಾಗೂ ಖಲೀಲ್‌ ಅಹ್ಮದ್‌ಗೆ ಹೆಚ್ಚಿನ ಅವ​ಕಾಶಗಳು ಸಿಗ​ಲಿವೆ. ವಿಂಡೀಸ್‌ ಪ್ರವಾಸದಲ್ಲಿ ಈ ಮೂವರು ಗಮ​ನಾರ್ಹ ಪ್ರದ​ರ್ಶನ ನೀಡಿ​ದ್ದರು.
ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!

ಸ್ಪಿನ್‌ ವಿಭಾಗದ​ಲ್ಲೂ ಹೊಸತನ ಕಾಣು​ತ್ತಿದೆ. ಯಜು​ವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಯಾದವ್‌ರನ್ನು ಸರದಿ ಮೇಲೆ ಆಡಿ​ಸ​ಲಾ​ಗು​ತ್ತಿದೆ. ಹೀಗಾಗಿ ರಾಹುಲ್‌ ಚಹಾರ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಜತೆ ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ಕೃನಾಲ್‌ ಪಾಂಡ್ಯ ಸಹ ಅವ​ಕಾಶಗಳನ್ನು ಪಡೆ​ಯು​ತ್ತಿ​ದ್ದಾರೆ. ರಾಹುಲ್‌ ಚಹಾರ್‌ ಐಪಿ​ಎಲ್‌ನಲ್ಲಿ ಅತ್ಯಾ​ಕ​ರ್ಷಕ ಪ್ರದ​ರ್ಶನ ತೋರಿದ ಬಳಿಕ, ವಿಂಡೀಸ್‌ನಲ್ಲಿ ಅಂತಾ​ರಾ​ಷ್ಟ್ರೀ​ಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ​ದರು. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ತಮ್ಮ ಮೇಲೆ ತಂಡಕ್ಕೆ ವಿಶ್ವಾಸ ಹೆಚ್ಚು​ವಂತೆ ಮಾಡಲು ರಾಹುಲ್‌ ಎದುರು ನೋಡು​ತ್ತಿ​ದ್ದಾರೆ. ಶ್ರೇಯಸ್‌ ಗೋಪಾಲ್‌, ಮಯಾಂಕ್‌ ಮಾರ್ಕಂಡೆ ಸಹ ಪೈಪೋಟಿಯಲ್ಲಿದ್ದು, ಟೀಂ ಇಂಡಿ​ಯಾ​ದಲ್ಲಿ ಸ್ಪಿನ್ನರ್‌ಗಳ ಸ್ಥಾನಕ್ಕೆ ಭಾರೀ ಪೈಪೋಟಿ ಇದೆ.

ಬ್ಯಾಟಿಂಗ್‌ ಸಮಸ್ಯೆಗೆ ಪರಿ​ಹಾ​ರ​ವೇ​ನು?: ಬ್ಯಾಟಿಂಗ್‌ ವಿಭಾಗ ತಂಡದ ಆಡ​ಳಿತದ ತಲೆನೋವಿಗೆ ಕಾರ​ಣ​ವಾ​ಗಿದೆ. ಬ್ಯಾಟಿಂಗ್‌ ಕ್ರಮಾಂಕದಲ್ಲಿ ಸಮ​ತೋ​ಲನವಿಲ್ಲ. ರೋಹಿತ್‌ ಶರ್ಮಾ, ಕೆ.ಎಲ್‌.ರಾ​ಹುಲ್‌ ಹಾಗೂ ಶಿಖರ್‌ ಧವನ್‌ ಆರಂಭಿ​ಕರ ಸ್ಥಾನಕ್ಕೆ ಸ್ಪರ್ಧೆ​ಯ​ಲ್ಲಿದ್ದು, ಯಾವ ಸಂಯೋ​ಜನೆಯೊಂದಿಗೆ ಕಣ​ಕ್ಕಿ​ಳಿ​ಯ​ಬೇಕು ಎನ್ನುವ ಗೊಂದಲ ತಂಡ​ಕ್ಕಿದೆ. ಮೂರೂ ಆಟ​ಗಾ​ರರು ಸ್ಥಿರ ಪ್ರದ​ರ್ಶನ ತೋರು​ವಲ್ಲಿ ವಿಫ​ಲ​ರಾ​ಗು​ತ್ತಿ​ರುವ ಕಾರಣ, ತಂಡದ ಮೇಲೆ ಒತ್ತಡ ಹೆಚ್ಚು​ತ್ತಿದೆ.

ಮಧ್ಯಮ ಕ್ರಮಾ​ಂಕದ ಸಮಸ್ಯೆಯೂ ಬಹು​ವಾಗಿ ಕಾಡು​ತ್ತಿದೆ. ರಿಷಭ್‌ ಪಂತ್‌ ನಿರೀಕ್ಷೆ ಉಳಿ​ಸಿ​ಕೊ​ಳ್ಳು​ತ್ತಿಲ್ಲ. ಹಾರ್ದಿಕ್‌ ಪಾಂಡ್ಯ ಮೇಲೆ ಜವಾ​ಬ್ದಾರಿ ಹೆಚ್ಚು​ತ್ತಿದ್ದು, ಪ್ರತಿ ಪಂದ್ಯ​ದಲ್ಲೂ ಸ್ಫೋಟಕ ಇನ್ನಿಂಗ್ಸ್‌ ಆಡುವ ಅನಿ​ವಾ​ರ್ಯತೆಗೆ ಸಿಲು​ಕು​ತ್ತಿ​ದ್ದಾರೆ. 5ನೇ ಕ್ರಮಾಂಕಕ್ಕೆ ಮನೀಶ್‌ ಪಾಂಡೆ ಹಾಗೂ ಶ್ರೇಯಸ್‌ ಅಯ್ಯರ್‌ ನಡುವೆ ಪೈಪೋ​ಟಿ ಹೆಚ್ಚು​ತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರ​ಣಿ​ಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗದಿದ್ದರೂ, ತಂಡದ ಸಿದ್ಧತೆ ಬಗ್ಗೆ ಸುಳಿವು ಸಿಗ​ಲಿದೆ.

ಧೋನಿ 2021ರ ವರೆಗೂ ಆಡ್ತಾ​ರಾ?

ಎಂ.ಎಸ್‌.ಧೋನಿ ನಿವೃತ್ತಿ ವದಂತಿ ಇದೆಯಾದರೂ, ಕೆಲ ಮೂಲ​ಗಳ ಪ್ರಕಾರ ಅವರು 2020ರ ಟಿ20 ವಿಶ್ವ​ಕಪ್‌ ವರೆಗೂ ಮುಂದು​ವ​ರಿ​ಯ​ಲಿ​ದ್ದಾರೆ ಎನ್ನ​ಲಾ​ಗಿದೆ. ಆದರೆ ಧೋನಿ ವಿಶ್ವ​ಕಪ್‌ ಆಡಲು ಇಚ್ಛಿ​ಸಿ​ದರೆ 2020ರ ವಿಶ್ವ​ಕಪ್‌ ಮಾತ್ರವಲ್ಲ, 2021ರ ವಿಶ್ವ​ಕಪ್‌ ವರೆಗೂ ತಂಡ​ದಲ್ಲಿರಬೇ​ಕಿದೆ. 2020 ಹಾಗೂ 2021ರ ವಿಶ್ವ​ಕಪ್‌ ನಡುವೆ ಕೇವಲ 11 ತಿಂಗಳು ಮಾತ್ರ ಅಂತರವಿರ​ಲಿದೆ. 2021ರಲ್ಲಿ ನಡೆ​ಯ​ಬೇ​ಕಿದ್ದ ಚಾಂಪಿ​ಯನ್ಸ್‌ ಟ್ರೋಫಿ ಕಿತ್ತು ಹಾಕಿ ಆ ಜಾಗದಲ್ಲಿ ಟಿ20 ವಿಶ್ವ​ಕಪ್‌ ನಡೆ​ಸ​ಲಾ​ಗು​ತ್ತಿದೆ. ಅಲ್ಲದೇ 2023ರಲ್ಲಿ ವಿಶ್ವ​ಕಪ್‌ ಭಾರತದಲ್ಲೇ ನಡೆ​ಯ​ಲಿ​ರುವ ಕಾರಣ, ಧೋನಿ ಅಷ್ಟು ಸುಲ​ಭ​ವಾಗಿ ತಂಡ ಬಿಡಲು ಸಾಧ್ಯ​ವಾ​ಗು​ವು​ದಿಲ್ಲ.
 

Follow Us:
Download App:
  • android
  • ios