ಅಸಭ್ಯ ಹೇಳಿಕೆಯಿಂದ ತಂಡದಿಂದ ಅಮಾನತಾಗಿರುವ ಹಾರ್ದಿಕ್ ಪಾಂಡ್ಯ ಅಲಭ್ಯತೆ ಕುರಿತು ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಪಾಂಡ್ಯ ಎಷ್ಟು ಮುಖ್ಯ ಅನ್ನೋದನ್ನ ಕೊಹ್ಲಿ ಹೇಳಿದ್ದಾರೆ.  

ನೇಪಿಯರ್(ಜ.22): ತಂಡ ಆಲ್ರೌಂಡರ್ ಸಮಸ್ಯೆ ಎದುರಿಸಿದರೆ ಟೀಂ ಕಾಂಬಿನೇಷನ್ ಜಟಿಲವಾಗಲಿದೆ. ಇದನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಒಪ್ಪಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಅಲಭ್ಯತೆಯಿಂದ 3ನೇ ವೇಗಿಯನ್ನ ಕಣಕ್ಕಿಳಿಸುವುದು ಅನಿವಾರ್ಯವಾಗಲಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಐಸಿಸಿ ಪ್ರಕಟಿಸಿದ ಬೆಸ್ಟ್ ಟೆಸ್ಟ್ ಮತ್ತು ಒನ್’ಡೇ ತಂಡವಿದು..!

ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆಯಿಂದ ಹಾರ್ದಿಕ್ ಪಾಂಡ್ಯ ಅಮಾನತಾಗಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ತಂಡ 3ನೇ ವೇಗಿಯನ್ನ ಅನಿವಾರ್ಯವಾಗಿ ಕಣಕ್ಕಿಳಿಸಬೇಕಿದೆ. ಹಾರ್ದಿಕ್ ಈ ಸ್ಥಾನ ತುಂಬುತ್ತಿದ್ದರು ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಕಷ್ಟದಲ್ಲಿರೋ ಮಾಜಿ ಕ್ರಿಕೆಟಿಗನಿಗೆ ಪಾಂಡ್ಯ ಬ್ಲ್ಯಾಂಕ್ ಚೆಕ್: ಆದ್ರೆ ಕಂಡೀಶನ್ ಅಪ್ಲೈ!

ಫಾಸ್ಟ್ ಆಲ್ರೌಂಡರ್ ತಂಡದಲ್ಲಿದ್ದರೆ, ಬ್ಯಾಟಿಂಗ್ ವಿಭಾಗದ ಜೊತಗೆ ಬೌಲಿಂಗ್ ಕೂಡ ಬಲಿಷ್ಠಗೊಳ್ಳಲಿದೆ. ಆದರೆ 3 ವೇಗಿಗಳನ್ನ ಕಣಕ್ಕಿಳಿಸಿದರೆ ಮಧ್ಯಮ ಕ್ರಮಾಂಕದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ತಂಡದಲ್ಲಿ ಅತ್ಯುತ್ತಮ ಆಲ್ರೌಂಡರ್ ಇದ್ದರೆ, 3ನೇ ವೇಗಿ ಕಣಕ್ಕಿಳಿಸುವ ಅನಿವಾರ್ಯತೆ ಎದುರಾಗಲ್ಲ ಎಂದಿದ್ದಾರೆ.