ನವದೆಹಲಿ(ಫೆ.19): ನ್ಯೂಜಿಲೆಂಡ್ ಸರಣಿ ಬಳಿಕ ವಿಶ್ರಾಂತಿ ಜಾರಿರುವ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇದೀಗ ತವರಿನ ಆಸ್ಟ್ರೇಲಿಯಾ ಸರಣಿಗೆ ತಾಲೀಮು ಆರಂಭಿಸಿದ್ದಾರೆ. ಅಭ್ಯಾಸಕ್ಕೂ ಮೊದಲು ಶಿಖರ್ ಧವನ್ ಕುದುರೆ ಸವಾರಿ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

 

 

ಇದನ್ನೂ ಓದಿ: ಆಸಿಸ್ ಸರಣಿಗೂ ಮುನ್ನ ಮುಂಬೈನಲ್ಲಿ ಫುಟ್ಬಾಲ್ ಆಡಿದ ಧೋನಿ!

ಅಭ್ಯಾಸದ ನಡುವೆ ಶಿಖರ್ ಧವನ್ ಕುದುರೆ ಸವಾರಿ ಮಾಡಿದ್ದಾರೆ. ಕುದುರೆ ಏರಿ ಒಂದು ಸುತ್ತು ಹೊಡೆದಿರುವ ಧವನ್, ಬಳಿಕ ಅಭ್ಯಾಸ ಮುಂದುವರಿಸಿದ್ದಾರೆ. ಫೆ.24 ರಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಗೊಳ್ಳಲಿದೆ. 2 ಟಿ20 ಹಾಗೂ 5 ಏಕದಿನ ಪಂದ್ಯದ ಟೀಂ ಇಂಡಿಯಾ ಪಾಲಿಗೆ ಮುಖ್ಯವಾಗಿದೆ.

ಇದನ್ನೂ ಓದಿ: ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡ ಯಾವುದು?- ಹರ್ಷಲ್ ಗಿಬ್ಸ್ ಹೇಳಿದ್ರು ಭವಿಷ್ಯ!

2019ರ ವಿಶ್ವಕಪ್ ತಂಡದ ಆಯ್ಕೆಗೆ ಆಸಿಸ್ ವಿರುದ್ದದ ಸರಣಿ ಪ್ರದರ್ಶನ ಪರಿಗಣಿಸಲಾಗುತ್ತೆ.  ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಧವನ್, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.