- Home
- Sports
- Cricket
- ಮದುವೆ ಮುಂದೂಡಿಕೆ ಬಳಿಕ ಸ್ಮೃತಿ ಮಂಧನಾ ಮೊದಲ ಪೋಸ್ಟ್: ನಿಶ್ಚಿತಾರ್ಥ ಉಂಗುರ ನಾಪತ್ತೆ! ಏನಾಯ್ತು ಎಂದ ಫ್ಯಾನ್ಸ್
ಮದುವೆ ಮುಂದೂಡಿಕೆ ಬಳಿಕ ಸ್ಮೃತಿ ಮಂಧನಾ ಮೊದಲ ಪೋಸ್ಟ್: ನಿಶ್ಚಿತಾರ್ಥ ಉಂಗುರ ನಾಪತ್ತೆ! ಏನಾಯ್ತು ಎಂದ ಫ್ಯಾನ್ಸ್
ನವದೆಹಲಿ: ಮದುವೆ ಮುಂದೂಡಿಕೆ ಬಳಿಕ ಭಾರತ ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧನಾ ಇದೇ ಮೊದಲ ಸಲ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಆಕೆಯ ಎಂಗೇಜ್‌ಮೆಂಟ್ ರಿಂಗ್ ನಾಪತ್ತೆಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಸ್ಮೃತಿ ಮಂಧನಾ ಮದುವೆ ಪೋಸ್ಟ್‌ಪೋನ್
ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜತೆ ಕಳೆದ ನ.23ರಂದು ನಡೆಯಬೇಕಿದ್ದ ತಮ್ಮ ಮದುವೆ ಮುಂದೂಡಿಕೆ ಬಳಿಕ ತಾರಾ ಕ್ರಿಕೆಟರ್ ಸ್ಮೃತಿ ಮಂಧನಾ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿ ಕೊಂಡಿದ್ದಾರೆ
ಜಾಹಿರಾತಿನ ವಿಡಿಯೋದಲ್ಲಿ ರಿಂಗ್ ಇಲ್ಲ!
ಭಾರತ ಮಹಿಳಾ ವಿಶ್ವಕಪ್ ಚಾಂಪಿಯನ್ ಆಟಗಾರ್ತಿ ಇನ್‌ಸ್ಟಾಗ್ರಾಂನಲ್ಲಿ ಜಾಹೀರಾತಿಗೆ ಸಂಬಂಧಿಸಿದ ತಮ್ಮ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಎಂಗೇಜ್‌ಮೆಂಟ್ ರಿಂಗ್ ನಾಪತ್ತೆ?
ಆದರೆ ಈ ವೇಳೆ ಅವರ ಕೈಯಲ್ಲಿ ನಿಶ್ಚಿತಾರ್ಥದ ಉಂಗುರ ಕಾಣೆಯಾಗಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಇದು ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ಲವ್ ಪ್ರಪೋಸ್ ಮಾಡಿದ್ದ ಪಲಾಶ್
ಮುಂಬೈ ಡಿವೈ ಪಾಟೀಲ್ ಮೈದಾನದಲ್ಲಿ ಸ್ಮೃತಿ ಮಂಧನಾ ಅವರಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಂದು, ಸ್ಟೇಡಿಯಂ ಮಧ್ಯದಲ್ಲಿ ಪಲಾಶ್ ಮುಚ್ಚಲ್ ಮಂಡಿಯೂರಿ ಸ್ಮೃತಿಗೆ ಪ್ರಪೋಸ್ ಮಾಡಿದ್ದರು. ಇದಾದ ಬಳಿಕ ಕೈಗೆ ಉಂಗುರ ತೊಡಿಸಿದ್ದರು.
ಸ್ಮೃತಿ ಪ್ರಶ್ನಿಸಿದ ಫ್ಯಾನ್ಸ್
ಇದೀಗ ಸ್ಮೃತಿ ಮಂಧನಾ ಅವರಿಗೆ ಅವರ ಫ್ಯಾನ್ಸ್, ನಿಮ್ಮ ಎಂಗೇಜ್‌ಮೆಂಟ್ ರಿಂಗ್ ಎಲ್ಲಿ ಎಂದು ಅವರ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ.
ವಿಡಿಯೋ ಬಗ್ಗೆ ಯಾವುದೇ ಕ್ಲಾರಿಟಿಯಿಲ್ಲ
ಆದರೆ ಇದು ನಿಶ್ಚಿತಾರ್ಥಕ್ಕೂ ಮುನ್ನ ಚಿತ್ರೀಕರಿಸಿರುವ ವಿಡಿಯೋವೋ ಅಥವಾ ಆ ಬಳಿಕ ತೆಗೆದಿರುವುದೋ ಎನ್ನುವುದು ಸ್ಪಷ್ಟವಾಗಿಲ್ಲ.
ಪಲಾಶ್ ಅನ್‌ಫಾಲೋ ಮಾಡಿದ ಸ್ಮೃತಿ ಫ್ರೆಂಡ್ಸ್
ಇದೀಗ ಸ್ಮೃತಿ ಮಂಧನಾ ಗೆಳತಿಯರಾದ ಜೆಮಿಯಾ ಸೇರಿದಂತೆ ಹಲವು ಆಟಗಾರ್ತಿಯರು ಪಲಾಶ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿದ್ದು, ಸ್ಮೃತಿ-ಪಲಾಶ್ ಮದುವೆ ಮುಗಿದುಹೋದ ಅಧ್ಯಾಯ ಎನ್ನಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

