ಆಸ್ಟ್ರೇಲಿಯಾ ವಿರುದ್ದದ ಸರಣಿಗೂ ಮುನ್ನ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಚಾರಿಟಿ ಫುಟ್ಬಾಲ್ ಆಡಿದ್ದಾರೆ. ಧೋನಿಯನ್ನ ನೋಡಲು ಅಭಿಮಾನಿಗಳು ಮುಗಿ ಬಿದ್ದರು. ಧೋನಿ ಹಾಗೂ ಬಾಲಿವುಡ್ ಸೆಲೆಬ್ರೆಟಿಗಳು ಫುಟ್ಬಾಲ್ ಪಂದ್ಯ ಹೇಗಿತ್ತು? ಇಲ್ಲಿದೆ ವಿವರ.
ಮುಂಬೈ(ಫೆ.19): ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಇದೀಗ ಮುಂಬೈನಲ್ಲಿ ಫುಟ್ಬಾಲ್ ಆಡಿ ಗಮನಸೆಳೆದಿದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಳು ಹಾಗೂ ಫುಟ್ಬಾಲ್ ಪಟುಗಳ ಜೊತೆ ಚಾರಿಟಿ ಫುಟ್ಬಾಲ್ ಪಂದ್ಯ ಆಡಿದ ಧೋನಿ, ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿದರು.
ಇದನ್ನೂ ಓದಿ: ರಾಂಚಿ ಕ್ರೀಡಾಂಗಣದಲ್ಲಿ ಧೋನಿ ಸ್ಟ್ಯಾಂಡ್?
ದಿನು ಮೊರಿಯಾ, ಅಪರಶಕ್ತಿ ಖುರಾನ, ಮಾರ್ಕ್ ರೊಬಿನ್ಸನ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಕೂಡ ಧೋನಿ ಜೊತೆಗೆ ಫುಟ್ಬಾಲ್ ಆಡಿದರು. ಧೋನಿ ಆಗಮನ ತಿಳಿಯುತ್ತಿದ್ದಂತೆ ಅಭಿಮಾನಿಗಳು ಜಮಾಯಿಸಿದ್ದರು. ಧೋನಿ ಜೊತೆ ಫೋಟೋ ಕ್ಲಿಕ್ಕಿಸಲು ಅಭಿಮಾನಿಗಳು ಮುಗಿ ಬಿದ್ದರು.
ಇದನ್ನೂ ಓದಿ: ಮತ್ತೆ ಘರ್ಜಿಸಿದ ಯುವರಾಜ್- ರಿವರ್ಸ್ ಸ್ವೀಪ್ ಮೂಲಕ ಸಿಕ್ಸರ್ ವಿಡಿಯೋ ವೈರಲ್!
ಕ್ರಿಕೆಟ್‌ನಿಂದ ಬಿಡುವಿನ ವೇಳೆ ಎಂ.ಎಸ್.ಧೋನಿ ಫುಟ್ಬಾಲ್ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜಾರ್ಖಂಡ್‌ನ ಸ್ಥಳೀಯ ಫುಟ್ಬಾಲ್ ಟೂರ್ನಿಗಳಲ್ಲಿ ಧೋನಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 24 ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಧೋನಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ.
