ಜೋಹಾನ್ಸ್‌ಬರ್ಗ್(ಫೆ.19): ವಿಶ್ವಕಪ್ ಟೂರ್ನಿಗೆ ತಂಡಗಳು ಸಿದ್ಧತೆ ಆರಂಭಿಸಿದೆ. ಇದರ ಬೆನ್ನಲ್ಲೇ, ಈ ಭಾರಿ ವಿಶ್ವಕಪ್ ಗೆಲ್ಲೋ ತಂಡ ಯಾವುದು ಅನ್ನೋದು ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದೀಗ ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್, 2019ರ ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡ ಯಾವುದು ಅನ್ನೋ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಮತ್ತೆ ಘರ್ಜಿಸಿದ ಯುವರಾಜ್- ರಿವರ್ಸ್ ಸ್ವೀಪ್ ಮೂಲಕ ಸಿಕ್ಸರ್ ವಿಡಿಯೋ ವೈರಲ್!

ಈ ಭಾರಿ ಟೀಂ ಇಂಡಿಯಾ ಹಾಗೂ ಆತಿಥೇಯ ಇಂಗ್ಲೆಂಡ್ ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡ ಎಂದು ಗಿಬ್ಸ್ ಹೇಳಿದ್ದಾರೆ. ಎರಡೂ ತಂಡ ವಿಶ್ವಕಪ್ ಗೆಲ್ಲಲು ಶಕ್ತವಾಗಿದೆ. ಟೀಂ ಇಂಡಿಯಾ ಯಾವುದೇ ಕಂಡೀಷನ್, ಯಾವುದೇ ಪಿಚ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ವಿಶ್ವ ದರ್ಜೆ ವೇಗಿಗಳು ಟೀಂ ಇಂಡಿಯಾದಲ್ಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ನೇತೃತ್ವದ  ಭಾರತ ತಂಡಕ್ಕೆ ಅತ್ಯುತ್ತಮ ಅವಕಾಶವಿದೆ ಎಂದಿದ್ದಾರೆ.

ಇದನ್ನೂ ಓದಿ: 2019ರ ವಿಶ್ವಕಪ್‌ಗೆ 18 ಟೀಂ ಇಂಡಿಯಾ ಕ್ರಿಕೆಟಿಗರ ಪಟ್ಟಿ ರೆಡಿ!

ಆತಿಥೇಯ ಇಂಗ್ಲೆಂಡ್‌ಗೆ ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ಜೊತೆಗೆ ತವರಿನ ಕಂಡೀಷನ್‌ ಕೂಡ ಇಂಗ್ಲೆಂಡ್ ತಂಡಕ್ಕೆ ನೆರವಾಗಲಿದೆ ಎಂದು ಗಿಬ್ಸ್ ಹೇಳಿದ್ದಾರೆ. ಸೌತ್ಆಫ್ರಿಕಾ ತಂಡಕ್ಕೆ ಎಬಿ ಡಿವಿಲಿಯರ್ಸ್ ಅನುಪಸ್ಥಿತಿ ಒಂದೆ ಕಾರಣವಲ್ಲ.  ಉತ್ತಮ ಆಲ್ರೌಂಡರ್ ಕೊರತೆ ಕಾಡುತ್ತಿದೆ ಎಂದಿದ್ದಾರೆ.