ಮುಂಬೈ[ಜು.25]: ವಿದೇಶಿ ಕ್ರಿಕೆಟ್ ಲೀಗ್ ಪಂದ್ಯವೊಂದರಲ್ಲಿ ಬೌಲರ್ ಎಸೆದ ಚೆಂಡು ವಿಕೆಟ್ ಗೆ ಬಡಿದರೂ ಬೇಲ್ಸ್ ಬೀಳದ ಕಾರಣ ಅಂಪೈರ್ ಔಟ್ ನೀಡಿಲ್ಲ. ವಿಕೆಟ್ ಮೇಲೆ ನಿಂತ ಬೇಲ್ಸ್’ನ್ನು ಸರಿಯಾಗಿ ನಿಲ್ಲಿಸಿ ಪಂದ್ಯ ಆಡಲು ಅಂಪೈರ್ ಅನುಮತಿ ನೀಡುತ್ತಾರೆ.

ಸಚಿನ್ ತೆಂಡುಲ್ಕರ್‌ಗೆ ಐಸಿಸಿ ಹಾಲ್ ಆಫ್ ಫೇಮ್

31 ಸೆಕೆಂಡ್’ಗಳ ಈ ವಿಡಿಯೋವನ್ನು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಒಬ್ಬ ಸ್ನೇಹಿತ ನನಗೆ ಈ ವಿಡಿಯೋ ಕಳಿಸಿದ್ದಾರೆ. ನೋಡುವುದಕ್ಕೆ ವಿಚಿತ್ರವಾಗಿದೆ. ಒಂದು ವೇಳೆ ನೀವೇ ಅಂಪೈರ್ ಆಗಿದ್ದರೆ ಯಾವ ನಿರ್ಣಯ ನೀಡುತ್ತೀರಾ ಎಂದು ಮಾಸ್ಟರ್ ಬ್ಲಾಸ್ಟರ್ ಪ್ರಶ್ನಿಸಿದ್ದಾರೆ.

ಸಚಿನ್ ಅವರ ಟ್ವೀಟ್’ಗೆ ಹಲವಾರು ಮಂದಿ ಕ್ರಿಕೆಟ್ ಅಭಿಮಾನಿಗಳು ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ರಮೇಶ್ ಶ್ರೀವಸ್ತ್ ಎನ್ನುವವರು ಬ್ಯಾಟ್ಸ್’ಮನ್ ಆರೆಸ್ಟ್, ಆದರೆ ಬೇಲ್ ಮೂಲಕ ರಿಲೀಸ್ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು ಟ್ವೀಟ್ ಮಾಡಿದ್ದು, ಇದು ಏನೇನು ಅಲ್ಲ. ನನ್ನ ಒಬ್ಬ ಸ್ನೇಹಿತ ಔಟ್ ಆಗಿದ್ದರು ಅಂಪೈರ್ ಔಟ್ ನೀಡಲಿಲ್ಲ. ಯಾಕೆಂದರೆ, ಬ್ಯಾಟ್ ಅವನದ್ದಾಗಿತ್ತು ಎಂದು ಹಾಸ್ಯಮಯವಾಗಿ ಟ್ವೀಟ್ ಮಾಡಿದ್ದಾರೆ.