ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಪಂತ್, ಗುರುವಾರ ತಮ್ಮ ಪ್ರೇಯಸಿಯನ್ನು ಸಾಮಾಜಿಕ ತಾಣ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದರು.

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಕರ್ಷಕ ಪ್ರದರ್ಶನ ತೋರಿ ಗಮನ ಸೆಳೆದಿದ್ದ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಧೋನಿಗಿಂತ ಹೆಚ್ಚು ಸೆಂಚುರಿ ಸಿಡಿಸಲಿದ್ದಾರೆ ಪಂತ್: ಪಾಂಟಿಂಗ್ ಭವಿಷ್ಯ!

ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಪಂತ್, ಗುರುವಾರ ತಮ್ಮ ಪ್ರೇಯಸಿಯನ್ನು ಸಾಮಾಜಿಕ ತಾಣ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದರು. ಪಂತ್ ಪ್ರೇಯಸಿಯ ಹೆಸರು ಇಶಾ ನೇಗಿ ಎಂದು ತಿಳಿದುಬಂದಿದೆ. ಸಾಮಾಜಿಕ ತಾಣಗಳಲ್ಲಿ ರಿಷಭ್ ಪಂತ್ ಹಾಗೂ ಇಶಾರ ಫೋಟೋ ವೈರಲ್ ಆಗಿದೆ.

View post on Instagram

ಸ್ಲೆಡ್ಜಿಂಗ್ ಹಾಗೂ ಸಿಡ್ನಿ ಟೆಸ್ಟ್’ನಲ್ಲಿ ಆಕರ್ಷಕ ಶತಕದ ಮೂಲಕ ಗಮನ ಸೆಳೆದಿದ್ದ ಪಂತ್ ’ಬೇಬಿ ಸಿಟ್ಟರ್’ ಕೂಡಾ ಎನಿಸಿಕೊಂಡಿದ್ದರು. 21 ವರ್ಷದ ಪಂತ್ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್’ಕೀಪರ್ ಎನ್ನುವ ದಾಖಲೆ ಬರೆದಿದ್ದರು. ಅಲ್ಲದೇ ಸರಣಿಯೊಂದರಲ್ಲಿ 300+ ರನ್ ಹಾಗೂ 20+ ಕ್ಯಾಚ್ ಹಿಡಿದ ಉಪಖಂಡದ ಮೊದಲ ವಿಕೆಟ್’ಕೀಪರ್ ಎನ್ನುವ ಕೀರ್ತಿಗೆ ಪಂತ್ ಪಾತ್ರರಾಗಿದ್ದರು.