ಆಡಿಲೇಡ್(ಜ.14): ಆಸ್ಟ್ರೇಲಿಯಾ ವಿರುದ್ದದ ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಬಿಡುವಿನ ಸಮಯದಲ್ಲಿ ಟಿ ಕುಡಿದ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದೆ. ಎಂ.ಎಸ್.ಧೋನಿ, ಶಿಖರ್ ಧವನ್ ಹಾಗೂ ಕೇದಾರ್ ಜಾದವ್ ಟಿ ಕುಡಿಯುತ್ತಿರುವ ಫೋಟೋ ಅಪ್‌ಲೋಡ್ ಮಾಡಿದ್ದಾರೆ. ಈ ಫೋಟೋಗೆ ಹಾರ್ದಿಕ್ ಪಾಂಡ್ಯ ಟ್ರೋಲ್ ಆಗಿದ್ದಾರೆ.

 

 

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಾಗೆ ಮುಂಬೈ ಪೊಲೀಸರಿಂದ ಗೂಗ್ಲಿ!

ಕೇದಾರ್ ಜಾದವ್ ಟ್ವಿಟರ್ ಮೂಲಕ ಈ ಫೋಟೋ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಒಂದು ಕಪ್ ಟಿ ಎಲ್ಲವನ್ನೂ ಉತ್ತಮಪಡಿಸುತ್ತೆ ಎಂದು ಟ್ವೀಟ್ ಮಾಡಿದ್ದಾರೆ. ಜಾದವ್ ಟ್ವೀಟ್ ಮಾಡಿದ್ದೇ ತಡ, ಹಾರ್ಧಿಕ್ ಪಾಂಡ್ಯ ಟಾಂಗ್ ನೀಡಲು ಸೂಕ್ತ ಟ್ವೀಟ್ ಎಂದು ಟ್ವಿಟರಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯಾ ಕಾಫಿ ವಿಥ್ ಕರಣ್ ಶೋ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ಟೀಂ ಇಂಡಿಯಾದಿಂದ ಅಮಾನತಾಗಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರ ಕಪ್ ಆಫ್ ಟಿಗೆ ಪಾಂಡ್ಯ ಗುರಿಯಾಗಿದ್ದಾರೆ.