ಹೊಸ ವರ್ಷ ಆಚರಣೆಗೆ ಸಿದ್ಧತೆ ಪೂರ್ಣಗೊಂಡಿದೆ. ಸದ್ಯ ಹೊಸ ವರ್ಷ ಆಗಮನವನ್ನ ಕಾಯುತ್ತಿದ್ದಾರೆ. ಸಂಭ್ರಮಾಚರಣೆಗೆ ತಯಾರಾಗಿರುವ ಸಮಸ್ತರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ.
ಸಿಡ್ನಿ(ಡಿ.31): ಹೊಸ ವರ್ಷ ಬರಮಾಡಿಕೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ಹೊಸವರ್ಷಾಚರಣೆಯಲ್ಲಿರುವ ಸಮಸ್ತ ಭಾರತೀಯರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಭ ಕೋರಿದ್ದಾರೆ. ಪತ್ನಿ ಅನುಷ್ಕಾ ಜೊತೆಗಿರುವ ವಿರಾಟ್ ಕೊಹ್ಲಿ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಐಸಿಸಿ ಮಹಿಳಾ ಏಕದಿನ, ಟಿ20 ತಂಡ ಪ್ರಕಟ- ಹರ್ಮನ್‌ಪ್ರೀತ್ ನಾಯಕಿ!
ಭಾರತೀಯರು ಹಾಗೂ ವಿಶ್ವದಲ್ಲಿರುವ ಸಮಸ್ತರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಎಲ್ಲರಿಗೂ ಶುಭ ತರಲಿ. ಆಸ್ಟ್ರೇಲಿಯಾದಿಂದ ವಿರಾಟ್ ಕೊಹ್ಲಿ ಎಂದು ಟೀಂ ಇಂಡಿಯಾ ನಾಯಕ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್‌ಗೂ ಕಾಲಿಟ್ಟಿತು ಕಿಸ್ ಕ್ಯಾಮ್- ಮೈದಾನಲ್ಲೇ ಚುಂಬನ-ವೀಡಿಯೋ ವೈರಲ್!
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಾಥ್ ನೀಡಿದ್ದಾರೆ. ಈಗಾಗಲೇ ಮೆಲ್ಬರ್ನ್ ಟೆಸ್ಟ್ ಪಂದ್ಯದ ಗೆಲುವಿನಿಂದ ಟೀಂ ಇಂಡಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಈ ಮೂಲಕ ಹೊಸ ವರ್ಷವನ್ನ ಗೆಲುವಿನೊಂದಿಗೆ ಆಚರಿಸುತ್ತಿದೆ.
