ಫುಟ್ಬಾಲ್, ಬೇಸ್ ಬಾಲ್, ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿದ್ದ ಕಿಸ್ ಕ್ಯಾಮ್ ಇದೀಗ ಕ್ರಿಕೆಟ್ ಕ್ರೀಡಾಂಗಣಕ್ಕೂ ಎಂಟ್ರಿ ಕೊಟ್ಟಿದೆ. ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿನ ಕಿಸ್ ಕ್ಯಾಮ್ ಇದೀಗ ಭಾರಿ ವೈರಲ್ ಆಗುತ್ತಿದೆ. ಇಲ್ಲಿದೆ ಕಿಸ್ ಕ್ಯಾಮ್ ವೀಡಿಯೋ.

ಮೆಲ್ಬರ್ನ್(ಡಿ.28): ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೆಲ್ಬರ್ನ್ ಟೆಸ್ಟ್ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಭಾರತ ತಂಡ ದಾಖಲೆ ಬರೆದಿದೆ. ಫುಟ್ಬಾಲ್ ಪಂದ್ಯದಲ್ಲಿದ್ದ ಕಿಸ್ ಕ್ಯಾಮ್ ಇದೀಗ ಮೆಲ್ಬರ್ನ್ ಟೆಸ್ಟ್ ಪಂದ್ಯದ ಮೂಲಕ ಕ್ರಿಕೆಟ್‌ಗೂ ಕಾಲಿಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಬುಮ್ರಾ & ಟೀಂ ಟಾಪ್ ಕ್ಲಾಸ್ ಬೌಲಿಂಗ್-ಆದ್ರೆ ಶ್ರೇಷ್ಠವಲ್ಲ: ವೆಂಕಟೇಶ್ ಪ್ರಸಾದ್

ಕಿಸ್ ಕ್ಯಾಮ್ ಯಾರನ್ನ ಫೋಕಸ್ ಮಾಡುತ್ತಾರೋ ಅವರು ಕಿಸ್ ನೀಡೋ ಮೂಲಕ ಈ ಅಭಿಯಾನ ಶುರುವಾಗುತ್ತೆ. ಇದು ಮೈದಾನದಲ್ಲಿ ಹಾಕಿರುವ ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತೆ. ಫುಟ್ಬಾಲ್ ಕ್ರೀಡಾಂಗಣದಲ್ಲಿ ಪ್ರತಿ ಪಂದ್ಯದಲ್ಲೂ ಕಿಸ್ ಕ್ಯಾಮ್ ಇದ್ದೇ ಇರುತ್ತೆ. ಇದೀಗ ಕ್ರಿಕೆಟ್‌ನಲ್ಲೂ ರಾರಾಜಿಸುತ್ತಿದೆ.

Scroll to load tweet…

ಇದನ್ನೂ ಓದಿ: ಮೆಲ್ಬರ್ನ್‌ನಲ್ಲಿ ಬುಮ್ರಾ ಮ್ಯಾಜಿಕ್- 346 ರನ್ ಮುನ್ನಡೆಯಲ್ಲಿ ಕೊಹ್ಲಿ ಬಾಯ್ಸ್!

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕಿಸ್ ಕ್ಯಾಮ್ ತೋರಿಸುತ್ತಿದ್ದಂತೆ ಹಲವು ಜೋಡಿಗಳು ಕಿಸ್ ನೀಡೋ ಮೂಲಕ ಸಂಭ್ರಮ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ವೀಡಿಯೋ ವೈರಲ್ ಆಗಿದೆ.