ಧೋನಿ ನಾಯಕತ್ವದ ರೆಕಾರ್ಡ್ ಮುರಿಯಲು ಸಜ್ಜಾದ ಕೊಹ್ಲಿ..!

ಟೀಂ ಇಂಡಿಯಾದ ಯಶಸ್ವಿ ನಾಯಕ ಎಂದು ಗುರುತಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳಲು ವಿರಾಟ್ ಕೊಹ್ಲಿ ತುದಿಗಾಲಿನಲ್ಲಿ ನಿಂತಿದ್ದಾರೆ. ಅಷ್ಟಕ್ಕೂ ಏನದು ದಾಖಲೆ? ನೀವೇ ನೋಡಿ...

Team India Captain Virat Kohli close to BreakMS Dhoni Test captaincy record

ಆ್ಯಂಟಿಗಾ(ಆ.21): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಬ್ಯಾಟಿಂಗ್ ನಲ್ಲಿ ಹಲವಾರು ದಾಖಲೆಯಗಳ ಒಡೆಯನಾಗಿ ಹೊರಹೊಮ್ಮಿದ್ದಾರೆ. ವೈಯುಕ್ತಿಕವಾಗಿ ಮಾತ್ರವಲ್ಲದೇ ಆಕ್ರಮಣಕಾರಿ ನಾಯಕತ್ವದಲ್ಲೂ ಕಿಂಗ್ ಕೊಹ್ಲಿ ಯಶಸ್ಸನ್ನು ಗಳಿಸಿದ್ದಾರೆ. ಇದೀಗ ನಾಯಕನಾಗಿಯೂ ಅಪರೂಪದ ದಾಖಲೆ ಬರೆಯಲು ಡೆಲ್ಲಿ ಕ್ರಿಕೆಟಿಗ ತುದಿಗಾಲಿನಲ್ಲಿ ನಿಂತಿದ್ದಾರೆ.

ವಿಂಡೀಸ್‌ ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲಾ ಚಾನ್ಸ್..?

ಹೌದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಯಶಸ್ವಿ ನಾಯಕ ಎನಿಸಿಕೊಳ್ಳಲು ವಿರಾಟ್‌ ಕೊಹ್ಲಿಗೆ ಕೇವಲ 2 ಗೆಲುವು ಅಗತ್ಯವಿದ್ದು, ವಿಂಡೀಸ್‌ ವಿರುದ್ಧ 2 ಪಂದ್ಯಗಳ ಸರಣಿಯನ್ನು ಭಾರತ ತಂಡ ಕ್ಲೀನ್‌ ಸ್ವೀಪ್‌ ಮಾಡಿದರೆ, ಕೊಹ್ಲಿ ಹೊಸ ದಾಖಲೆ ಬರೆಯಲಿದ್ದಾರೆ. ಭಾರತ ತಂಡವನ್ನು ಮೊದಲ ಬಾರಿಗೆ ಐಸಿಸಿ ವಿಶ್ವ ರ‍್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿಸಿದ್ದ ಎಂ.ಎಸ್‌.ಧೋನಿ, 60 ಪಂದ್ಯಗಳಲ್ಲಿ 27 ಗೆಲುವುಗಳನ್ನು ಸಾಧಿಸಿ ಭಾರತಕ್ಕೆ ಅತಿಹೆಚ್ಚು ಟೆಸ್ಟ್‌ ಗೆಲ್ಲಿಸಿ ಕೊಟ್ಟ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 

ಸಿಕ್ಸರ್‌ನಲ್ಲಿ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ ಕಿವೀಸ್ ವೇಗಿ..!

2015ರಲ್ಲಿ ವಿರಾಟ್ ಕೊಹ್ಲಿ ಪೂರ್ಣಾವಧಿ ಟೆಸ್ಟ್ ನಾಯಕನಾಗಿ ನೇಮಕವಾದ ಬಳಿಕ 46 ಪಂದ್ಯಗಳಲ್ಲಿ 26 ಗೆಲುವುಗಳನ್ನು ಸಾಧಿಸಿ 2ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ನಾಯಕನಾದ ಬಳಿಕ ಟೀಂ ಇಂಡಿಯಾ ತವರಿನಲ್ಲಿ ಹಾಗೂ ತವರಿನಾಚೆ ಹಲವಾರು ಸ್ಮರಣೀಯ ಟೆಸ್ಟ್ ಗೆಲುವನ್ನು ದಾಖಲಿಸಿದೆ. 2019ರ ವರ್ಷಾರಂಭದಲ್ಲೇ ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು ಅವರ ನೆಲದಲ್ಲೇ 2-1 ಅಂತರದಲ್ಲಿ ಚೊಚ್ಚಲ ಬಾರಿಗೆ ಟೆಸ್ಟ್ ಸರಣಿ ಜಯಿಸಿತ್ತು. 

ಟೆಸ್ಟ್ ಕ್ರಿಕೆಟ್’ನಲ್ಲಿ ಭಾರತಕ್ಕೆ ಹೆಚ್ಚು ಗೆಲುವು ತಂದುಕೊಟ್ಟವರ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಧೋನಿ[27], ವಿರಾಟ್ ಕೊಹ್ಲಿ[26] ಇದ್ದರೆ, ಮೂರನೇ ಸ್ಥಾನದಲ್ಲಿ ಸೌರವ್ ಗಂಗೂಲಿ[21], ಆ ಬಳಿಕ ಮೊಹಮ್ಮದ್ ಅಜರುದ್ಧೀನ್[14] ಇದ್ದಾರೆ. ಇನ್ನು ಒಟ್ಟಾರೆ ವಿಶ್ವ ಕ್ರಿಕೆಟ್’ನಲ್ಲಿ ಗರಿಷ್ಠ ಬಾರಿ ತಂಡವನ್ನು ಗೆಲ್ಲಿಸಿದ ಸಾಧನೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಹೆಸರಿನಲ್ಲಿದೆ. ಸ್ಮಿತ್ ನಾಯಕತ್ವದಲ್ಲಿ ಹರಿಣಗಳ ಪಡೆ 53 ಬಾರಿ ಗೆಲುವಿನ ಕೇಕೆ ಹಾಕಿದೆ. ಇನ್ನು ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್[48] ಎರಡನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.   
 

Latest Videos
Follow Us:
Download App:
  • android
  • ios