ಫಿಕ್ಸಿಂಗ್: ಪಾಕ್ ಮೂಲದ 3 ಅಂತಾರಾಷ್ಟ್ರೀಯ ಕ್ರಿಕೆಟಿಗರು ಬ್ಯಾನ್!
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿರುವುದು ಸಾಬೀತಾಗಿರುವ ಹಿನ್ನಲೆಯಲ್ಲಿ ಪಾಕ್ ಮೂಲದ ಹಾಂಕಾಂಗ್ ಇಬ್ಬರು ಕ್ರಿಕೆಟಿಗರು ಆಜೀವ ನಿಷೇಧಕ್ಕೆ ಗುರಿಯಾಗಿದ್ದಾರೆ. ಇನ್ನೊಬ್ಬ ಕ್ರಿಕೆಟಿಗನನ್ನು 5 ವರ್ಷ ಕ್ರಿಕೆಟ್’ನಿಂದ ದೂರವಿಡಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ....
ದುಬೈ[ಆ.27]: ಮ್ಯಾಚ್ ಫಿಕ್ಸಿಂಗ್ ನಡೆಸಿ ಸಿಕ್ಕಿಬಿದ್ದಿರುವ ಪಾಕಿಸ್ತಾನ ಮೂಲದ ಹಾಂಕಾಂಗ್ ಕ್ರಿಕೆಟಿಗರಾದ ಇರ್ಫಾನ್ ಅಹ್ಮದ್ ಹಾಗೂ ನದೀಂ ಅಹಮದ್ ಮೇಲೆ ಐಸಿಸಿ ಆಜೀವ ನಿಷೇಧ ಹೇರಿದೆ.
ನೆಟ್ಟಗೆ ನಿಂತ ನಾಣ್ಯ: ಟಾಸ್ ವೇಳೆ ಅಚ್ಚರಿ!
ಈ ಆಟಗಾರರಿಬ್ಬರು ಯಾವುದೇ ರೀತಿಯ ಕ್ರಿಕೆಟ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಮತ್ತೊಬ್ಬ ಆಟಗಾರ ಹಸೀಬ್ ಅಮ್ಜದ್‌ಗೆ 5 ವರ್ಷ ನಿಷೇಧ ಹೇರಲಾಗಿದೆ. ಈ ಮೂವರು ಕಳೆದ 2 ವರ್ಷಗಳಲ್ಲಿ ಆಡಿದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಫಿಕ್ಸಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಯತ್ನ ನಡೆಸಿದ್ದಾಗಿ ಐಸಿಸಿ ಭ್ರಷ್ಟಾಚಾರ ನಿಯಂತ್ರಣ ಅಧಿಕಾರಿಗಳು ನಡೆಸಿದ ವಿಚಾರಣೆ ವೇಳೆ ತಿಳಿದು ಬಂದಿದೆ.
ಮತ್ತೆ ಭುಗಿಲೆದ್ದಿದೆ ಫಿಕ್ಸಿಂಗ್; ಲಿಸ್ಟ್‌ನಲ್ಲಿ ಪಾಕ್ ಕ್ರಿಕೆಟಿಗರ ಹೆಸರು!
ಪ್ರಮುಖವಾಗಿ ಹಾಂಕಾಂಗ್ ತಂಡದ ಸ್ಕಾಟ್ಲೆಂಡ್ ಹಾಗೂ ಕೆನಡಾ ವಿರುದ್ಧದ ಪಂದ್ಯಗಳಲ್ಲಿ ಅಹ್ಮದ್ ಸಹೋದರರು ಫಿಕ್ಸಿಂಗ್ ನಡೆಸಿದ್ದಲ್ಲದೆ ಇತರ ಆಟಗಾರರನ್ನೂ ಫಿಕ್ಸಿಂಗ್ ಕೂಪಕ್ಕೆ ತಳ್ಳುವ ಯತ್ನ ನಡೆಸಿದ್ದರು ಎಂದು ಐಸಿಸಿ ಭ್ರಷ್ಟಚಾರ ನಿಯಂತ್ರಣ ಘಟಕದ ಮುಖ್ಯಸ್ಥ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.
ಆಲ್ರೌಂಡರ್ ಇರ್ಫಾನ್ ಅಹಮ್ಮದ್ ಹಾಂಕಾಂಗ್ ಪರ 6 ಏಕದಿನ, 8 ಟಿ20 ಪಂದ್ಯಗಳನ್ನಾಡಿದರೆ, ಸ್ಪಿನ್ನರ್ ನದೀಮ್ ಅಹಮ್ಮದ್ 25 ಏಕದಿನ ಹಾಗೂ 24 ಟಿ20 ಪಂದ್ಯಗಳಲ್ಲಿ ಹಾಂಕಾಂಗ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇನ್ನು ಮಧ್ಯಮ ವೇಗಿ ಹಸೀಬ್ ಅಮ್ಜದ್ ಒಟ್ಟು 25 ಪಂದ್ಯಗಳನ್ನಾಡಿದ್ದಾರೆ.