ದೇಶ ಪ್ರತಿನಿಧಿಸುವ ಕನಸು ನನಸು ಮಾಡಿಕೊಂಡ ಕಾಶ್ಮೀರಿ ಅಥ್ಲೀಟ್ ಡ್ಯಾನಿಶ್ ಮಂಜೂರ್
ಒಲಂಪಿಕ್ ಶ್ರೇಯಾಂಕದ ಸ್ಪರ್ಧೆಗಾಗಿ ನೆರವು ಪಡೆದುಕೊಂಡ ಟೇಕ್ವಾಂಡೋ ಸ್ಪರ್ಧಿ ಡ್ಯಾನಿಶ್ ಮಂಜೂರ್
ಸಾಮಾಜಿಕ ಜಾಲತಾಣ ಕೂ ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮೂಲಕ ಮನವಿ ಮಾಡಿದ್ದ ಡ್ಯಾನಿಶ್
ಭಾರತವನ್ನು ಪ್ರತಿನಿಧಿಸಲು ಹಣದ ಕೊರತೆ ಎದುರಿಸುತ್ತಿದ್ದ ಕಾಶ್ಮೀರಿ ಮೂಲದ ಅಥ್ಲೀಟ್
ನವದೆಹಲಿ(ಆ.16): ಕಾಶ್ಮೀರಿ ಮೂಲದ ಟೇಕ್ವಾಂಡೋ ಸ್ಪರ್ಧಿ ಡ್ಯಾನಿಶ್ ಮಂಜೂರ್ ಅವರು ಅಂತರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜಾಲತಾಣವಾದ 'ಕೂ' ಆ್ಯಪ್ ಮೂಲಕ ಮನವಿ ಮಾಡಿಕೊಂಡಿದ್ದರು. ಅದರಂತೆ ಇದೀಗ ಡ್ಯಾನಿಶ್ ಮಂಜೂರ್‌ಗೆ ನೆರವು ಸಿಕ್ಕಿದೆ
ಹೌದು, ಅಥ್ಲೀಟ್ ಡ್ಯಾನಿಶ್ ಮಂಜೂರ್ ಅವರ ಕನಸು ನನಸಾಗಲು ಕಾರಣವಾಗಿದ್ದು 'ಕೂ' ಆ್ಯಪ್ ಎನ್ನುವ ಸಾಮಾಜಿಕ ಜಾಲತಾಣ. ಕೆಲ ದಿನಗಳ ಹಿಂದೆ ತನಗೆ ಅಂತರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ 58 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಹಣದ ಕೊರತೆ ಇದ್ದು ತಮಗೆ ಪ್ರಾಯೋಜಕತ್ವದ ಅಗತ್ಯವಿದೆ ಎಂದು ಮನವಿ ಮಾಡಿಕೊಂಡಿದ್ದರು.
ನಾನು ಜಮ್ಮು ಕಾಶ್ಮೀರದ ಡ್ಯಾನಿಶ್ ಮಂಜೂರ್. ನಾನು ಅಂತರಾಷ್ಟ್ರೀಯ ಟೇಕ್ವಾಂಡೋ ಅಥ್ಲೀಟ್. ಇಸ್ರೇಲ್ ನ ರಾಮ್ಲಾದಲ್ಲಿ ಆ.12 ರಿಂದ 15ರವರೆಗೆ ನಡೆಯುವ ಒಲಿಂಪಿಕ್ ಶ್ರೇಯಾಂಕದಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಆದರೆ ದುರದೃಷ್ಟಾವಶಾತ್ ನನಗೆ ಇನ್ನು ಯಾವುದೇ ಪ್ರಾಯೋಜಕತ್ವ ಸಿಕ್ಕಿಲ್ಲ. ವಿರಾಟ್ ಕೊಹ್ಲಿ, ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು, ಅಭಿನವ್ ಬಿಂದ್ರಾ, ಆಸಿಫ್ ಕಮಲ್ ಫೌಂಡೇಶನ್, ಸಂಜನಾ ಫೌಂಡೇಶನ್ ದಯಮಾಡಿ ಸಹಾಯ ಮಾಡುವ ಮೂಲಕ ಬೆಂಬಲಿಸಬೇಕೆಂದು ವಿನಂತಿಸುತ್ತೇನೆ" ಎಂದು ಡ್ಯಾನಿಶ್ ಮಂಜೂರ್ ಕೂ ನಲ್ಲಿ ಮನವಿ ಮಾಡಿಕೊಂಡಿದ್ದರು.
ಒಲಿಂಪಿಕ್ಸ್ ಕನಸು ನನಸಾಗಿರಲು ವಿರಾಟ್ ಕೊಹ್ಲಿ ನೆರವು ಯಾಚಿಸಿದ ಟೇಕ್ವಾಂಡೋ ಅಥ್ಲೀಟ್ ಡ್ಯಾನಿಶ್ ಮಂಜೂರ್!
ಇನ್ನು 'ಕೂ' ಆ್ಯಪ್ ನಲ್ಲಿ ಸಕ್ರಿಯವಾಗಿರುವ ಜಮ್ಮು ಮತ್ತು ಕಾಶ್ಮೀರ ಮೂಲದ ಹೆಲ್ಪ್ ಫೌಂಡೇಶನ್ ಅವರ ಪೋಸ್ಟ್ ಅನ್ನು ನೋಡಿ ಅವರಿಗೆ ಪ್ರಾಯೋಜಕತ್ವ ನೀಡಿದ್ದು, ಇದರಿಂದ ಡ್ಯಾನಿಶ್ ಅವರ ಕನಸು ನನಸಾಗಿದೆ. ಇಸ್ರೇಲ್‌ನ ರಮ್ಲಾದಲ್ಲಿ ನಡೆಯಲಿರುವ ಒಲಿಂಪಿಕ್ ಶ್ರೇಯಾಂಕದ (ಜಿ 2) ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಿದೆ.
ಪ್ರಾಯೋಜಕತ್ವ ಸ್ವೀಕರಿಸಿದ ನಂತರ ಕೂ ಮಾಡಿರುವ ಡ್ಯಾನಿಶ್ ಮಂಜೂರ್ ಅವರು ಸಹಾಯ ಒದಗಿಸಿದಕ್ಕಾಗಿ ಎಲ್ಲರಿಗು ಕೃತಜ್ಞತೆ ಸಲ್ಲಿಸಿದ್ದಾರೆ. 'ನಾನು @koosportshindi & @KooOfficial ಗೆ ತುಂಬಾ ಕೃತಜ್ಞನಾಗಿದ್ದೇನೆ, ಈ ಮೂಲಕ ನಾನು ಜಮ್ಮು ಮತ್ತು ಕಾಶ್ಮೀರದ @help_foundation ನಿಂದ ಭಾರತದ ಒಲಿಂಪಿಕ್ ಶ್ರೇಯಾಂಕದ ಟೇಕ್ವಾಂಡೋ ಈವೆಂಟ್ ನಲ್ಲಿ ಭಾಗವಾಗಿಸಲು ಸಾಧ್ಯವಾಗಿದೆ. ಪ್ರತಿನಿಧಿಸಿ, ಮತ್ತು ನನಗೆ ಮಾರ್ಗದರ್ಶನ ನೀಡಿದ ನನ್ನ ತರಬೇತುದಾರ @atul_pangotra ಸರ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಈಗಷ್ಟೇ ಇಸ್ರೇಲ್‌ಗೆ ಬಂದಿದ್ದೇನೆ ಮತ್ತು ನನ್ನ ದೇಶವನ್ನು ಹೆಮ್ಮೆ ಪಡುವಂತೆ ಮಾಡಲು ಪ್ರಯತ್ನಿಸುತ್ತೇನೆ. ದಯವಿಟ್ಟು ಬೆಂಬಲಿಸುತ್ತಲೇ ಇರಿ. ಜೈ ಹಿಂದ್."
ಕಾಶ್ಮೀರದ ಬಾರಾಮುಲ್ಲಾ ನಿವಾಸಿ ಡ್ಯಾನಿಶ್, COVID-19 ಲಾಕ್‌ಡೌನ್ ಸಮಯದಲ್ಲಿ ಮನೆಯಿಂದಲೇ ಟೇಕ್ವಾಂಡೋ ಅಭ್ಯಾಸವನ್ನು ಪ್ರಾರಂಭಿಸಿದರು. ಅವರು 2021 ರ ಟೋಕಿಯೊ ಸ್ಮಾರಕ ಓಪನ್ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ 'ಅತ್ಯುತ್ತಮ ಪುರುಷ ಅಥ್ಲೀಟ್' ಎಂದು ಪ್ರಶಸ್ತಿ ಪಡೆದರು ಮತ್ತು ಬೆಳ್ಳಿ ಪದಕವನ್ನು ಗೆದ್ದರು.
ಇಂದಿನ ಡಿಜಿಟಲ್ ಯುಗದಲ್ಲಿ, ಬಿಕ್ಕಟ್ಟಿನ ಸಮಯದಲ್ಲಿ ಬೆಂಬಲ ಒದಗಿಸುವುದರಲ್ಲಿ ಸಾಮಾಜಿಕ ಮಾಧ್ಯಮವು ಪ್ರಮುಖವಾಗಿದೆ. ಎಲ್ಲರನ್ನೂ ಒಂದುಗೂಡಿಸುವ ಬಹುಭಾಷಾ ವೇದಿಕೆಯಾಗಿರುವುದರಿಂದ, ಭಾರತದಾದ್ಯಂತ ಲಕ್ಷಾಂತರ ಜನರಿಗೆ ಧ್ವನಿ ನೀಡುವಲ್ಲಿ ಕೂ ಪ್ರಮುಖ ಪಾತ್ರ ವಹಿಸಿದೆ. ಮಾತೃಭಾಷೆಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಮತ್ತು ಸೆಲೆಬ್ರಿಟಿಗಳೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಡ್ಯಾನಿಶ್ 1.22 ಲಕ್ಷಕ್ಕೂ ಹೆಚ್ಚು ಫಾಲೊವೆರ್ಸ್ ಹೊಂದಿದ್ದಾರೆ.
ಇದೆ ವೇಳೆ, ಡ್ಯಾನಿಶ್‌ನ ಕೂಗೆ ಪ್ರತಿಕ್ರಿಯಿಸಿರುವ, ಹೆಲ್ಪ್ ಫೌಂಡೇಶನ್ ಎನ್‌ಜಿಒ ತನ್ನ ಪೋಸ್ಟ್‌ನಲ್ಲಿ, "ಭಾರತದಲ್ಲಿ ಉದಯೋನ್ಮುಖ ತಾರೆಯನ್ನು ಬೆಂಬಲಿಸುವುದಕ್ಕಿಂತ ಉತ್ತಮವಾದದ್ದು ನಾವು ಏನು ಮಾಡಬಹುದು" ಎಂದು ಸಂತಸ ವ್ಯಕ್ತಪಡಿಸಿದೆ. ಭಾರತವನ್ನು ಪ್ರತಿನಿಧಿಸಲು @danishtkd_ ಅನ್ನು ಬೆಂಬಲಿಸುವ ಅವಕಾಶವನ್ನು ನಮಗೆ ನೀಡಿದ ಈ ವೇದಿಕೆಗಾಗಿ @Koosportshindi ಮತ್ತು @KooOfficial ಧನ್ಯವಾದಗಳು. ಆಲ್ ದಿ ಬೆಸ್ಟ್, ಡ್ಯಾನಿಶ್."