ಟಿ20 ಮುಂಬೈ ಲೀಗ್ ಯುವಕರಿಗೆ ಉತ್ತಮ ವೇದಿಕೆಯಾಗಲಿದೆ: ಸಚಿನ್

First Published 23, Feb 2018, 1:53 PM IST
T20 Mumbai League is a good platform for youngsters says Sachin Tendulkar
Highlights

ಟಿ20 ಮುಂಬೈ ಲೀಗ್ ಟೂರ್ನಿಗೆ ಮುಂಬೈ ಕ್ರಿಕೆಟ್ ಅಸೋಶಿಯೇಷನ್ ಅನುಮತಿ ನೀಡಿದ್ದು, ಮಾರ್ಚ್ 11ರಿಂದ 21ರವರೆಗೆ ವಾಂಖೆಡೆ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿವೆ.

ಮುಂಬೈ(ಫೆ.23): ಮುಂಬರುವ ಟಿ20 ಮುಂಬೈ ಲೀಗ್ ಯುವಕರ ಕ್ರಿಕೆಟ್ ಪ್ರತಿಭೆ ಅನಾವರಣ ಮಾಡಲು ಉತ್ತಮ ವೇದಿಕೆಯಾಗಲಿದೆ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

ಮುಂಬೈ ಕ್ರಿಕೆಟ್'ಗೆ ಇಂಥಹದ್ದೊಂದು ಟೂರ್ನಿ ಅವಶ್ಯಕತೆಯಿತ್ತು. ಭಾರತ ತಂಡದಲ್ಲೂ ಮುಂಬೈ ಕ್ರಿಕೆಟಿಗರು ಪ್ರಾಬಲ್ಯ ಮೆರೆದಿದ್ದಾರೆ. ಇದಕ್ಕೆ ಸಾಕಷ್ಟು ಅಂಕಿ-ಸಂಖ್ಯೆಗಳೇ ಸಾಕ್ಷಿ. ಈ ಲೀಗ್'ನ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ಟೂರ್ನಿಯ ಅಂಬಾಸಿಡರ್ ಆಗಿರುವ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ. ಮುಂಬೈ 41 ವರ್ಷ ರಣಜಿ ಟ್ರೋಫಿ ಜಯಿಸಿದ ಅನನ್ಯ ಇತಿಹಾಸವಿದೆ. ನನಗಿನ್ನೂ ನೆನಪಿದೆ, ನಾನು ತುಂಬಾ ಚಿಕ್ಕವನಿದ್ದಾಗ ಶಿವಾಜಿ ಪಾರ್ಕ್'ನಲ್ಲಿ ಪ್ಯಾಡಿ ಸರ್(ಪದ್ಮಾಕರ್ ಶಿವಾಲ್ಕರ್) ನನಗೆ ಬೌಲಿಂಗ್ ಮಾಡುತ್ತಿದ್ದರು. ನನಗಾಗ ಮೂರು ವರ್ಷವಿರಬಹುದು. ಇಂತಹ ದೃಶ್ಯ ಮುಂಬೈನಲ್ಲಿ ಮಾತ್ರ ಕಾಣಬಹುದು ಎಂದು ಹೇಳಿದ್ದಾರೆ.

ಟಿ20 ಮುಂಬೈ ಲೀಗ್ ಟೂರ್ನಿಗೆ ಮುಂಬೈ ಕ್ರಿಕೆಟ್ ಅಸೋಶಿಯೇಷನ್ ಅನುಮತಿ ನೀಡಿದ್ದು, ಮಾರ್ಚ್ 11ರಿಂದ 21ರವರೆಗೆ ವಾಂಖೆಡೆ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿವೆ.

loader