ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ: ಪ್ರಶಸ್ತಿ ಬರ ನೀಗಿಸಿಕೊಂಡ ಪಿ.ವಿ.ಸಿಂಧು, ಲಕ್ಷ ಸೇನ್!

ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕದ ತಾರಾ ಬ್ಯಾಡ್ಮಿಂಟನ್‌ ಪಟುಗಳಾದ ಪಿ.ವಿ.ಸಿಂಧು ಹಾಗೂ ಲಕ್ಷ ಸೇನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. 

Syed Modi International badminton 2024 PV Sindhu Lakshya Sen end title drought kvn

ಲಖನೌ: 2 ಬಾರಿ ಒಲಿಂಪಿಕ್ ಪದಕ ವಿಜೇತೆ, ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಹಾಗೂ ಲಕ್ಷ ಸೇನ್ ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ತಮ್ಮ ಪ್ರಶಸ್ತಿ ಬರ ನೀಗಿಸಿಕೊಂಡಿದ್ದಾರೆ.

ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ವು ಲೊವೊ ಯು ವಿರುದ್ಧ ಸಿಂಧು 21-14, 21-16 ನೇರ ಗೇಮ್ಸ್‌ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ 2 ವರ್ಷ 4 ತಿಂಗಳ ಬಳಿಕ ಸಿಂಧು ಟೂರ್ನಿವೊಂದರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 3ನೇ ಬಾರಿಗೆ ಸಿಂಧು ಸಯ್ಯದ್ ಮೋದಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಮೊದಲು 2017, 2022ರಲ್ಲಿ ಚಾಂಪಿಯನ್ ಆಗಿದ್ದರು.

ಇನ್ನು, ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸೇನ್ ಸಿಂಗಾಪುರದ ಜಿಯಾ ಹೆಂಗ್ ಜೇಸನ್ ವಿರುದ್ಧ 21-6, 21-1ರಲ್ಲಿ ಗೆದ್ದರು. ಇದು ಕಳೆದ ವರ್ಷ ಜುಲೈನಲ್ಲಿ ಕೆನಡಾ ಓಪನ್ ಗೆದ್ದ ಬಳಿಕ ಸೇನ್‌ಗೆ ಸಿಕ್ಕ ಮೊದಲ ಟ್ರೋಫಿ. ಅಲ್ಲದೆ, ತಾರಾ ಡಬಲ್ಸ್ ಜೋಡಿ ಗಾಯತ್ರಿ ಗೋಪಿಚಂದ್ ಹಾಗೂ ಶ್ರೀಸಾ ಜಾಲಿ ಮಹಿಳಾ ಡಬಲ್ಸ್‌ನಲ್ಲಿ ಚೊಚ್ಚಲ ಸೂಪರ್ 300 ಪ್ರಶಸ್ತಿ ಜಯಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿಯ ಸ್ಟಾಂಡ್‌ಗೆ 10 ದಿಗ್ಗಜ ಕ್ರಿಕೆಟರ್ ಹೆಸರು!

ಪುರುಷರ, ಮಿಶ್ರ ಡಬಲ್ಸ್‌ನಲ್ಲಿ ನಿರಾಸೆ: ಪುರುಷರ ಡಬಲ್ಸ್‌ನಲ್ಲಿ ಪೃಥ್ವಿ ರಾಯ್ ಹಾಗೂ ಕರ್ನಾಟಕದ ಸಾಯಿ ಪ್ರತೀಕ್, ಮಿಶ್ರ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೋ ಹಾಗೂ ಧೃವ್ ಕಪಿಲಾ ರನ್ನರ್-ಅಪ್ ಆದರು.

ಪ್ರೊ ಕಬಡ್ಡಿ: ಪುಣೆ ಚರಣದ ಪಂದ್ಯ ನಾಳೆಯಿಂದ ಶುರು

ಪುಣೆ: 11ನೇ ಆವೃತ್ತಿ ಪ್ರೊ ಕಬಡ್ಡಿಯ ಪುಣೆ ಚರಣದ ಪಂದ್ಯಗಳು ಮಂಗಳವಾರದಿಂದ ಆರಂಭಗೊಳ್ಳಲಿದೆ. ಈ ಬಾರಿ ಟೂರ್ನಿ ಹೈದರಾಬಾದ್‌ನಲ್ಲಿ ಶುರುವಾಗಿತ್ತು. ಬಳಿಕ ಕೆಲ ಪಂದ್ಯಗಳಿಗೆ ನೋಯ್ಡಾ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಸೋಮವಾರ ವಿಶ್ರಾಂತಿ ದಿನವಾಗಿದ್ದು, ಡಿ.3ರಿಂದ ಡಿ.29ರ ವರೆಗೂ ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ. ನಾಕೌಟ್‌, ಫೈನಲ್‌ ಪಂದ್ಯಕ್ಕೂ ಪುಣೆ ಆತಿಥ್ಯ ವಹಿಸಲಿದೆ.

ಇನ್ನು 4ರಲ್ಲಿ 2 ಪಂದ್ಯ ಗೆದ್ರೂ ಭಾರತ ತಂಡ ವಿಶ್ವ ಟೆಸ್ಟ್‌ ಫೈನಲ್‌ಗೆ?

ವಿಶ್ವ ಚೆಸ್‌ ಚಾಂಪಿಯನ್‌ಶಿಪ್: ಗುಕೇಶ್-ಲಿರೆನ್ 6ನೇ ಸುತ್ತು ಡ್ರಾ 

ಸಿಂಗಾಪುರ: ಭಾರತದ ಗ್ಯಾಂಡ್ ಮಾಸ್ಟರ್ ಡಿ. ಗುಕೇಶ್ ಹಾಗೂ ಹಾಲಿ ಚಾಂಪಿಯನ್, ಚೀನಾದ ಡಿಂಗ್ ಲಿರೆನ್ ನಡುವಿನ ವಿಶ್ವಚೆಸ್ ಚಾಂಪಿಯನ್‌ಶಿಪ್‌ನ 6ನೇ ಸುತ್ತಿನ ಪಂದ್ಯವೂ ಡ್ರಾಗೊಂಡಿದೆ. ಭಾನುವಾರ 46 ನಡೆಗಳ ಬಳಿಕ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಉಭಯ ಆಟಗಾರರು ನಿರ್ಧರಿಸಿದರು. ಇಬ್ಬರು ತಲಾ 1 ಗೇಮ್‌ನಲ್ಲಿ ಗೆದ್ದಿದ್ದರೆ, 4 ಪಂದ್ಯಗಳು ಡ್ರಾಗೊಂಡಿವೆ. ಇದ ರೊಂದಿಗೆ ಅಂಕ 3-3ರಲ್ಲಿ ಸಮಬಲಗೊಂಡಿವೆ. ಇನ್ನೂ 8 ಸುತ್ತಿನ ಪಂದ್ಯಗಳು ನಡೆಯಬೇಕಿವೆ.
 

Latest Videos
Follow Us:
Download App:
  • android
  • ios