ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಇನ್ನುಳಿದ 4 ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ಗೆದ್ದರೂ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ದುಬೈ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಸೋಲನುಭವಿಸುವುದರೊಂದಿಗೆ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ನ್ಯೂಜಿಲೆಂಡ್ ಸೋಲಿನೊಂದಿಗೆ ಭಾರತ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದ ಹಾದಿ ಸುಗಮಗೊಂಡಿದೆ.
ಸದ್ಯ ಅಂಕಪಟ್ಟಿಯಲ್ಲಿ ಭಾರತ(ಶೇ.61.11 ಗೆಲುವಿನ ಪ್ರತಿಶತ) ಅಗ್ರಸ್ಥಾನದಲ್ಲಿದ್ದರೆ, ದ.ಆಫ್ರಿಕಾ(ಶೇ.59.26 ) 2ನೇ, ಆಸ್ಟ್ರೇಲಿಯಾ(57.69)3ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಲಾ ಶೇ.50 ಅಂಕದೊಂದಿಗೆ ಕ್ರಮವಾಗಿ 4, 5ನೇ ಸ್ಥಾನಗಳಲ್ಲಿವೆ.
ಭಾರತಕ್ಕಿನ್ನು ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳಿದ್ದು, ಈ ಪೈಕಿ 2ರಲ್ಲಿ ಗೆದ್ದು, 1 ಪಂದ್ಯ ಡ್ರಾ ಮಾಡಿಕೊಂಡರೂ ಫೈನಲ್‌ಗೇರುವ ಸಾಧ್ಯತೆಯಿದೆ. ಅತ್ತ ದ.ಆಫ್ರಿಕಾಕ್ಕೆ 3 ಪಂದ್ಯಗಳ ಪೈಕಿ 2ರಲ್ಲಿ ಗೆಲ್ಲಬೇಕಿದ್ದು, ಆಸೀಸ್‌ಗೆ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಅಗತ್ಯ. ಆಸೀಸ್ ತಂಡ ಭಾರತ ವಿರುದ್ಧ 4, ಲಂಕಾ ವಿರುದ್ಧ 2 ಪಂದ್ಯ ಆಡಬೇಕಿದೆ. ಶ್ರೀಲಂಕಾ ಉಳಿದಿರುವ ಮೂರೂ ಪಂದ್ಯಗಳಲ್ಲಿ ಗೆದ್ದರಷ್ಟೇ ಫೈನಲ್‌ಗೇರಬಹುದು.
ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಕೆ ಎಲ್ ರಾಹುಲ್ ಅಲ್ಲ, ಕನ್ನಡಿಗನಿಗೆ ಶಾಕ್?
ಪಿಂಕ್ ಬಾಲ್ ಪಂದ್ಯ ಗೆದ್ದ ಭಾರತ
ಕ್ಯಾನ್‌ಬೆರಾ: ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ತಂಡದ ವಿರುದ್ಧದ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ಸಾಧಿಸಿದೆ. ಇತ್ತಂಡಗಳ ನಡುವೆ 2 ದಿನಗಳ ಪಂದ್ಯ ನಿಗದಿಯಾಗಿತ್ತು. ಶನಿವಾರ ಮಳೆಯಿಂದಾಗಿ ದಿನದಾಟ ರದ್ದುಗೊಂಡಿತ್ತು. ಭಾನುವಾರವೂ ಮಳೆ ಅಡ್ಡಿಪಡಿಸಿದ ಕಾರಣ ತಲಾ 46 ಓವರ್‌ಪಂದ್ಯ ನಡೆಸಲಾಯಿತು.
ಮೊದಲು ಬ್ಯಾಟ್ ಮಾಡಿದ ಪ್ರೈಮ್ ಮಿನಿಸ್ಟರ್ಸ್ ತಂಡ 43.2 ಓವರಲ್ಲಿ 240ಕ್ಕೆ ಆಲೌಟ್ ಆಯಿತು. ಸ್ಯಾಮ್ ಕೊನ್ಸ್‌ಟಸ್ 107 ರನ್ ಗಳಿಸಿದರು. ಹರ್ಷಿತ್ ರಾಣಾ 4, ಆಕಾಶದೀಪ್ 2 ವಿಕೆಟ್ ಪಡೆದರು. ಗುರಿ ಬೆನ್ನತ್ತಿದ ಭಾರತ ಪೂರ್ತಿ 46 ಓವರ್ ಬ್ಯಾಟ್ ಮಾಡಿ 5 ವಿಕೆಟ್‌ಗೆ 257 ರನ್ ಗಳಿಸಿತು. ಫಿಟೈಸ್ ಸಾಬೀತುಪಡಿಸಿದ ಶುಭಮನ್ ಗಿಲ್ 50 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ 45, ನಿತೀಶ್ ರೆಡ್ಡಿ 42, ವಾಷಿಂಗ್ಟನ್ ಸುಂದರ್ 42, ಕೆ.ಎಲ್.ರಾಹುಲ್ 27, ಜಡೇಜಾ ರನ್ ಬಾರಿಸಿದರು.
5.4 ಓವರ್‌ಗಳಲ್ಲೇ 86 ರನ್ ಚೇಸ್ ಮಾಡಿ ಗೆದ್ದ ಕರ್ನಾಟಕ
5 ವಿಕೆಟ್ ಕಳಕೊಂಡ್ರು 6 ವಿಕೆಟ್ ಜಯ ಯಾಕೆ?
ಪಂದ್ಯದಲ್ಲಿ ಭಾರತ 5 ವಿಕೆಟ್ ಕಳೆದುಕೊಂಡಿತು. ಆದರೆ ಸಿಕ್ಕಿದ್ದು 6 ವಿಕೆಟ್ ಜಯ. ಯಾಕೆಂದರೆ, ಭಾರತ 42.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲೇ 241 ರನ್ ಗುರಿ ತಲುಪಿತ್ತು. ಆದರೆ ಅಭ್ಯಾಸ ಪಂದ್ಯವಾದ ಕಾರಣ ಭಾರತ ಪೂರ್ಣ 46 ಓವರ್ ಬ್ಯಾಟ್ ಮಾಡಿ 5 ವಿಕೆಟ್ ಗೆ 257 ರನ್ ಗಳಿಸಿತು. ನಿಗದಿತ ಗುರಿ ತಲುಪಿದಾಗ 4 ವಿಕೆಟ್ ಮಾತ್ರ ಕಳೆದುಕೊಂಡಿದ್ದ ಕಾರಣ ಭಾರತಕ್ಕೆ 6 ವಿಕೆಟ್ ಜಯ ಎಂದು ಘೋಷಿಸಲಾಯಿತು.
