ಬೆಂಗಳೂರು ಎಂ ಚಿನ್ನಸ್ವಾಮಿ ಸ್ಟೇಡಿಯಂನ ಸ್ಟ್ಯಾಂಡ್‌ಗೆ ಕರ್ನಾಟಕದ 10 ದಿಗ್ಗಜ ಕ್ರಿಕೆಟಿಗರ ಹೆಸರನ್ನು ಇಡಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಎ)ಯು ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ರಾಜ್ಯದ 10 ದಿಗ್ಗಜ ಕ್ರಿಕೆಟಿಗ ಹೆಸರಿಡಲು ನಿರ್ಧರಿಸಿದೆ. ಈಗಾಗಲೇ ಕೆಎಸ್ ಸ್ಟಾಂಡ್‌ಗಳ ಹೆಸರನ್ನೂ ಅಂತಿಮಗೊಳಿಸಿದೆ ಎಂದು ಹೇಳಲಾಗುತ್ತಿದೆ. ವಿವಿಧ ಸ್ಟ್ಯಾಂಡ್‌ಗಳಿಗೆ ಇಡಲಾಗಿರುವ 10 ಕ್ರಿಕೆಟಿಗರ ಪಟ್ಟಿ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ ಇದನ್ನು ಕೆಎಸ್‌ಎ ಅಧಿಕಾರಿಗಳು ಖಚಿತಪಡಿಸಿಲ್ಲ. ಯಾವ ಸ್ಟ್ಯಾಂಡ್‌ಗೆ ಯಾವ ಹೆಸರು ಎಂಬುದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಪಿ1 ಸ್ಟಾಂಡ್‌ಗೆ ಎರಪಳ್ಳಿ ಪ್ರಸನ್ನ, ಪಿ2 ಸ್ಟ್ಯಾಂಡ್‌ಗೆ ಜಿ.ಆರ್ .ವಿಶ್ವನಾಥ್, ಪಿ ಟೆರೇಸ್‌ಗೆ ಬಿಎಸ್ ಚಂದ್ರಶೇಖರ್, ಪಿಕಾರ್ಪೊರೇಟ್ ಗೆ ಸಯ್ಯದ್ ಕೀರ್ಮಾನಿ, ಎಮ್1 ಸ್ಟ್ಯಾಂಡ್‌ಗೆ ಬ್ರಿಜೇಶ್ ಪಟೇಲ್, ಎಮ್2 ಸ್ಟ್ಯಾಂಡ್‌ಗೆ ರೋಜರ್ ಬಿನ್ನಿ ಹೆಸರಿಡಲಾಗಿದೆ. ಡೈಮಂಡ್ ಬಾಕ್ಸ್ ಅನಿಲ್ ಕುಂಬ್ಳೆ, ಎನ್ ಸ್ಟ್ಯಾಂಡ್‌ಗೆ ರಾಹುಲ್ ದ್ರಾವಿಡ್, ಪಿ1 ಎ ಸ್ಟ್ಯಾಂಡ್‌ಗೆ ಜಾವಗಲ್ ಶ್ರೀನಾಥ್, ಪಿ4 ಸ್ಟ್ಯಾಂಡ್‌ಗೆ ವೆಂಕಟೇಶ್ ಪ್ರಸಾದ್ ಹೆಸರನ್ನು ಇಡಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು 4ರಲ್ಲಿ 2 ಪಂದ್ಯ ಗೆದ್ರೂ ಭಾರತ ತಂಡ ವಿಶ್ವ ಟೆಸ್ಟ್ ಫೈನಲ್‌ಗೆ?
ಆದರೆ ರಾಜ್ಯದ ಮಹಿಳಾ ಕ್ರಿಕೆಟ್ ದಂತಕಥೆ ಶಾಂತಾ ರಂಗಸ್ವಾಮಿ ಹೆಸರನ್ನು ಕೆಎಸ್‌ಎ ಯಾವುದೇ ಸ್ಟ್ಯಾಂಡ್‌ಗೆ ಇಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕ್ರಿಕೆಟ್ ಅಭಿಮಾನಿಗಳು, ಮಾಜಿ ಕ್ರಿಕೆಟಿಗರಿಂದಲೂ ಟೀಕೆ ವ್ಯಕ್ತವಾಗುತ್ತಿದೆ.
ಐಸಿಸಿಗೆ ಇನ್ನು ಜಯ್ ಶಾ ಬಾಸ್! ಅಧ್ಯಕ್ಷ ಹುದ್ದೆಗೆ ಏರಿದ ವಿಶ್ವದ ಅತ್ಯಂತ ಕಿರಿಯ ವ್ಯಕ್ತಿ
ದುಬೈ: ಕಳೆದ 5 ವರ್ಷಗಳಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿಯಾಗಿದ್ದ ಜಯ್ ಶಾ ಭಾನುವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸ ಮಿತಿ (ಐಸಿಸಿ) ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. 36 ವರ್ಷದ ಶಾ ಐಸಿಸಿ ಅಧ್ಯಕ್ಷ ಗದ್ದುಗೆ ಏರಿದ ಭಾರತದ 5ನೇ ಮತ್ತು ವಿಶ್ವದ ಅತಿ ಕಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಒಂದೇ ಟೀಮ್‌ನಲ್ಲಿ ಶ್ರೇಯಸ್ ಅಯ್ಯರ್-ಯುಜುವೇಂದ್ರ ಚಹಲ್! ಧನಶ್ರೀ ವರ್ಮಾ ಫುಲ್ ಟ್ರೋಲ್
ಈವರೆಗೂ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್‌ಲೇ ಅಧ್ಯಕ್ಷರಾಗಿದ್ದರು. ಅವರ ಸ್ಥಾನಕ್ಕೆ ಇತ್ತೀಚೆಗಷ್ಟೇ ಜಯ್ ಶಾ ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಜಯ್ ಶಾಗೂ ಮೊದಲು ಭಾರತದಿಂದ ಶರದ್ ಪವಾರ್, ಎನ್. ಶ್ರೀನಿವಾಸನ್, ಶಶಾಂಕ್ ಮನೋಹರ್‌ಮತ್ತು ಜಗನಮೋಹನ್ ದಾಲ್ಮೀಯಾ ಐಸಿಸಿ ಅಧ್ಯಕ್ಷರಾಗಿದ್ದರು.
ಚಾಂಪಿಯನ್ಸ್ ಟ್ರೋಫಿ ಶಾಗೆ ಮುಖ್ಯ ಸವಾಲು!
ಭಾರತ ಮತ್ತು ಪಾಕಿಸ್ತಾನದ ನಡುವೆ 2025 ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರವಾಗಿ ಎದ್ದಿರುವ ಗೊಂದಲ ನಿವಾರಣೆ ಸದ್ಯ ಜಯ್‌ಶಾ ಮುಂದಿರುವ ಪ್ರಮುಖ ಸವಾಲು. ಇದನ್ನು ಬಗೆಹರಿಸಿಕೊಳ್ಳುವುದರ ಜೊತೆಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್‌ಗೆ ಕ್ರಿಕೆಟ್ ಸೇರ್ಪಡೆ ಕುರಿತು ಕೆಲಸ ಮಾಡುವುದಾಗಿ ಶಾ ಹೇಳಿದ್ದಾರೆ.
