ಈಜು: ರಾಜ್ಯದ ಲಿನೈಶಾ, ನೀನಾ ರಾಷ್ಟ್ರೀಯ ದಾಖಲೆ..!

* ಹೈದರಾಬಾದ್‌ನಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌
* ಮೊದಲ ದಿನವೇ 4 ರಾಷ್ಟ್ರೀಯ ದಾಖಲೆಗಳೂ ನಿರ್ಮಾಣ
* ಮೊದಲ ದಿನವೇ ಕರ್ನಾಟಕ 3 ಚಿನ್ನ ಸೇರಿದಂತೆ 9 ಪದಕಗಳನ್ನು ಬಾಚಿಕೊಂಡಿವೆ

Swimming Linaisha AK and Neena Venkatesh set National record in National Swimming Championships kvn

ಹೈದರಾಬಾದ್‌(ಜು.03): ಇಲ್ಲಿ ಭಾನುವಾರ ಆರಂಭಗೊಂಡ 76ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಮೊದಲ ದಿನವೇ ಕರ್ನಾಟಕ 3 ಚಿನ್ನ ಸೇರಿದಂತೆ 9 ಪದಕಗಳನ್ನು ಬಾಚಿಕೊಂಡಿದೆ. ಅಲ್ಲದೇ 4 ರಾಷ್ಟ್ರೀಯ ದಾಖಲೆಗಳೂ ನಿರ್ಮಾಣವಾಗಿದೆ. ಮಹಿಳೆಯರ 200 ಮೀಟರ್‌ ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ರಾಜ್ಯದ ಲಿನೈಶಾ ಎ.ಕೆ. 2 ನಿಮಿಷ37.35 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿದ್ದಲ್ಲದೇ, ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಉತ್ತಮಗೊಳಿಸಿದರು. ಇನ್ನು ಲಕ್ಷ್ಮಿ ಬೆಳ್ಳಿ ಪಡೆದರು.

ಮಹಿಳೆಯರ 50 ಮೀಟರ್‌ ಬಟರ್‌ಪ್ಲೈನಲ್ಲಿನೀನಾ ವೆಂಕಟೇಶ್ 27.74 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಜಯಿಸಿ, ರಾಷ್ಟ್ರೀಯ ದಾಖಲೆ ಬರೆದರೆ, ಮಾನವಿ ವರ್ಮಾಗೆ ಕಂಚು ಲಭಿಸಿತು. ಇನ್ನು ಪುರುಷರ 4*200 ಮೀಟರ್ ಫ್ರೀಸ್ಟೈಲ್‌ನಲ್ಲೂ ಕರ್ನಾಟಕ ಚಿನ್ನ ಗೆದ್ದಿತು. ಪುರುಷರ 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಉತ್ಕರ್ಷ್‌ ಪಾಟೀಲ್ ಬೆಳ್ಳಿ ಜಯಿಸಿದರು. ಮಹಿಳೆಯರ 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಸುವನಾ ಬಾಸ್ಕರ್, ಪುರುಷರ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ, ಮಣಿಕಾಂತ್‌ 400 ಮೀಟರ್‌ ಫ್ರಿಸ್ಟೈಲ್‌ನಲ್ಲಿ ಆನೀಶ್‌ ಗೌಡ ಕಂಚು ಗೆದ್ದರು.

2024ರಲ್ಲಿ ಮತ್ತೆ ಹಾಕಿ ಇಂಡಿಯಾ ಲೀಗ್‌ ಶುರು?

ನವದೆಹಲಿ: 7 ವರ್ಷಗಳ ಬಳಿಕ ಮತ್ತೊಮ್ಮೆ ಹಾಕಿ ಇಂಡಿಯಾ ಲೀಗ್‌(ಎಚ್‌ಐಎಲ್) ಟೂರ್ನಿಯನ್ನು ಮುಂದಿನ ವರ್ಷ ಅಥವಾ 2025ರ ಆರಂಭದಲ್ಲಿ ನಡೆಸಲು ಹಾಕಿ ಇಂಡಿಯಾ ಚಿಂತನೆ ನಡೆಸುತ್ತಿದೆ. 2013ರಲ್ಲಿ ಆರಂಭಗೊಂಡಿದ್ದ ಟೂರ್ನಿ 5 ಆವೃತ್ತಿಗಳ ಬಳಿಕ ಅಂದರೆ 2017ರಲ್ಲಿ ಆರ್ಥಿಕ ಸಮಸ್ಯೆ ಹಾಗೂ ತಂಡಗಳ ಮಾಲಿಕರ ನಿರಾಸಕ್ತಿಯಿಂದಾಗಿ ಸ್ಥಗಿತಗೊಂಡಿತ್ತು.

ಸೀನಿಯರ್ ಕೋಚ್ ಪತ್ನಿಯಿಂದ ಅಥ್ಲೀಟ್ ಬಿಂದು ರಾಣಿ ಮೇಲೆ ದೌರ್ಜನ್ಯ..! ಈ ಬಗ್ಗೆ ಸೀನಿಯರ್ ಕೋಚ್ ಹೇಳಿದ್ದೇನು?

ಈ ಬಾರಿ ಮತ್ತೆ ಟೂರ್ನಿ ಆಯೋಜನೆಗೆ ಸಿದ್ಧತೆ ಆರಂಭಿಸಿರುವ ಹಾಕಿ ಇಂಡಿಯಾ, ಟೂರ್ನಿಗೆ ಬೇಕಾದ ಸಮಯಾವಕಾಶವನ್ನು ಮೀಸಲಿಡಲು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌)ಗೆ ಮನವಿಯನ್ನೂ ಸಲ್ಲಿಸಿದೆ. ಈ ಬಾರಿ ಪುರುಷರ ಜೊತೆ ಮಹಿಳೆಯರ ಟೂರ್ನಿಯನ್ನೂ ನಡೆಸಲು ಹಾಕಿ ಇಂಡಿಯಾ ಚಿಂತಿಸುತ್ತಿದ್ದು, ಎಫ್‌ಐಎಚ್‌ ಪ್ರತಿಕ್ರಿಯೆಗಾಗಿ ಕಾಯುತ್ತಿದೆ.

ರ್‍ಯಾಲಿ ಸ್ಪ್ರಿಂಟ್‌ ಗೆದ್ದ ಬೆಂಗಳೂರಿನ ರಾಜೇಂದ್ರ

ಬೆಂಗಳೂರು: ಭಾರತದ ಅಗ್ರ ಬೈಕರ್‌ಗಳಲ್ಲಿ ಒಬ್ಬರೆನಿಸಿರುವ ಬೆಂಗಳೂರಿನ ರಾಜೇಂದ್ರ ಆರ್., ಭಾನುವಾರ ಇಲ್ಲಿ ನಡೆದ ಭಾರತೀಯ ರಾಷ್ಟ್ರಿಯ ರ್‍ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್(ಐಎನ್‌ಆರ್‌ಎಸ್‌ಸಿ) ದಕ್ಷಿಣ ವಲಯ ಸುತ್ತಿನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. 550 ಸಿಸಿ ಮುಕ್ತ ವಿಭಾಗದಲ್ಲಿ ರಾಜೇಂದ್ರ 10 ಕಿ.ಮೀ. ದೂರವನ್ನು ಕೇವಲ 7 ನಿಮಿಷ 33.59 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ಮೊದಲ ಸ್ಥಾನ ಪಡೆದರು. ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಉತ್ತರ, ಪೂರ್ವ, ಪಶ್ಚಿಮ ವಲಯಗಳ ಸ್ಪರ್ಧೆ ಬಳಿಕ ಗೋವಾದಲ್ಲಿ ಫೈನಲ್‌ ನಡೆಯಲಿದೆ.

ಬೆಂಗಳೂರು ತಂಡಕ್ಕೆ ಬಾಸ್ಕೆಟ್‌ಬಾಲ್‌ ಪ್ರಶಸ್ತಿ

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ 3*3 ಪುರುಷರ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ಸ್ಪೇಸ್‌ ಜಾಮ್‌ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಜೇತರಿಗೆ ಫಿಬಾ ಏಷ್ಯಾ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ಕ್ರೀಡಾ ಸಚಿವ ಬಿ.ನಾಗೇಂದ್ರ ಟ್ರೋಫಿ ಹಾಗೂ 1.50 ಲಕ್ಷ ರು. ನಗದು ಬಹುಮಾನ ವಿತರಿಸಿದರು.

Latest Videos
Follow Us:
Download App:
  • android
  • ios