ಚೆನ್ನೈ(ಮಾ.12): 12ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ಇನ್ನೆರಡು ವಾರ ಮಾತ್ರ ಬಾಕಿ. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿಡಿಯೋ ಬಿಡುಗಡೆ ಮಾಡಿದೆ. ತಂಡದ ಚಿನ್ನ ತಲಾ ಎಂದೇ ಗುರುತಿಸಿಕೊಂಡಿರುವ ಸುರೇಶ್ ರೈನಾ ಹಾಡಿರುವ ವಿಸಿಲ್ ಪೋಡು ಸಾಂಗ್ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ: ಧೋನಿಯ ರೋರ್ ಆಫ್ ಲಯನ್ ಟ್ರೇಲರ್ ರಿಲೀಸ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆ್ಯಂಥಮ್ ಹಾಡಿಗೆ ರೈನಾ ಧನಿಗೂಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ಕ್ ಪೆರಿಯ ವಿಸಿಲ್ ಅಡಿಂಗ ಎಂದು ಹಾಡೋ ಮೂಲಕ ರೈನಾ, CSK ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಶೀಘ್ರದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಆ್ಯಂಥಮ್ ಹಾಡನ್ನು ಬಿಡುಗಡೆ ಮಾಡಲಿದೆ.

 

 

ಇದನ್ನೂ ಓದಿ: ಅಮೇರಿಕಾದ ಕಾರಿನ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರು!

ಮಾರ್ಚ್ 23 ರಿಂದ 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ.