ಅಹಮ್ಮದಾಬಾದ್(ಜು.08): ತಜಕಿಸ್ತಾನ ವಿರುದ್ಧದ ಇಂಟರ್‌ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಭಾರತ ಮುಗ್ಗರಿಸಿದೆ. ಆದರೆ ನಾಯಕ ಸುನಿಲ್ ಚೆಟ್ರಿ ದಾಖಲೆ ಬರೆದಿದ್ದಾರೆ. 2-4 ಅಂತರದಿಂದ ಸೋಲು ಕಂಡ  ಭಾರತಕ್ಕೆ ಸುನಿಲ್ ಚೆಟ್ರಿ ಐತಿಹಾಸಿಕ ಸಾಧನೆ ಸಮಾಧಾನ ತಂದಿದೆ. ತಜಿಕಸ್ತಾನ ವಿರುದ್ಧ 2 ಗೋಲು ಸಿಡಿಸಿದ ಚೆಟ್ರಿ, ಅರ್ಜೆಂಟೀನಾದ ದಿಗ್ಗಜ ಲಿಯೊನಲ್ ಮೆಸ್ಸಿ ದಾಖಲೆ ಪುಡಿ ಮಾಡಿದ್ದಾರೆ.

 

ಇದನ್ನೂ ಓದಿ: ಟೀಂ ಇಂಡಿಯಾಗೆ ಶುಭಹಾರೈಸಿದ ಫುಟ್ಬಾಲ್ ತಂಡ!

ತಜಕಿಸ್ತಾನ ವಿರುದ್ಧದ ಗೋಲಿನ ಮೂಲಕ ಸುನಿಲ್ ಚೆಟ್ರಿ ಒಟ್ಟು 70 ಗೋಲು ಸಿಡಿಸಿದರು. ಈ ಮೂಲಕ  ಮೆಸ್ಸಿ ಹಿಂದಿಕ್ಕಿ ಗರಿಷ್ಠ ಗೋಲು  ಸಿಡಿಸಿದ ಸಕ್ರೀಯ ಫುಟ್ಬಾಲಿಗರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಪೊರ್ಚುಗಲ್‌ನ ಕ್ರಿಸ್ಟಿಯನೊ ರೋನಾಲ್ಡೋ 88 ಗೋಲಿನ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.