ATP Tennis Ranking: ಅಗ್ರ 100ರಂದ ಸುಮಿತ್ ನಗಾಲ್ ಔಟ್
16 ಎಟಿಪಿ ಅಂಕಗಳನ್ನು ಕಳೆದುಕೊಂಡಿರುವ ನಗಾಲ್ ಸದ್ಯ 101 ಸ್ಥಾನದಲ್ಲಿದ್ದಾರೆ. ಚೆನ್ನೈ ಓಪನ್ ಗೆದ್ದ ಬಳಿಕ ಅಗ್ರ 100ರೊಳಗೆ ಸ್ಥಾನ ಪಡೆದಿದ್ದ ನಗಾಲ್, ಕಳೆದ ವಾರ ಬೆಂಗಳೂರು ಓಪನ್ ಸೆಮಿಫೈನಲ್‌ನಲ್ಲಿ ಸೋತ ಕಾರಣ, ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುಸಿದಿದ್ದಾರೆ.
ನವದೆಹಲಿ(ಫೆ.22): ಎಟಿಪಿ ರ‍್ಯಾಂಕಿಂಗ್‌ನಲ್ಲಿ 3 ಸ್ಥಾನ ಕುಸಿತ ಕಂಡಿರುವ ಭಾರತದ ತಾರಾ ಟೆನಿಸ್ ಆಟಗಾರ ಸುಮಿತ್ ನಗಾಲ್ ಸಿಂಗಲ್ಸ್ ಅಗ್ರ 100ರಿಂದ ಹೊರಬಿದ್ದಿದ್ದು, ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ.
16 ಎಟಿಪಿ ಅಂಕಗಳನ್ನು ಕಳೆದುಕೊಂಡಿರುವ ನಗಾಲ್ ಸದ್ಯ 101 ಸ್ಥಾನದಲ್ಲಿದ್ದಾರೆ. ಚೆನ್ನೈ ಓಪನ್ ಗೆದ್ದ ಬಳಿಕ ಅಗ್ರ 100ರೊಳಗೆ ಸ್ಥಾನ ಪಡೆದಿದ್ದ ನಗಾಲ್, ಕಳೆದ ವಾರ ಬೆಂಗಳೂರು ಓಪನ್ ಸೆಮಿಫೈನಲ್‌ನಲ್ಲಿ ಸೋತ ಕಾರಣ, ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುಸಿದಿದ್ದಾರೆ.
ರಣಜಿ ಟ್ರೋಫಿ ಗೆಲ್ಲಿ, BMW ಪಡೀರಿ: ಆಟಗಾರರಿಗೆ ಹೈದರಾಬಾದ್ ಬಂಪರ್ ಆಫರ್!
ಹಾಕಿ: ಭಾರತಕ್ಕೆ ಸೋಲು
ರೂರ್ಕೆಲಾ: 2023-24ರ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಪುರುಷರ ತಂಡಕ್ಕೆ 2ನೇ ಸೋಲು ಎದುರಾಗಿದೆ. ಬುಧವಾರ ನೆದರ್‌ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನೆದರ್‌ಲೆಂಡ್ಸ್ ವಿರುದ್ಧ ಭಾರತ ಶೂಟೌಟಲ್ಲಿ 4-2 ಗೋಲುಗಳ ಅಂತರದಲ್ಲಿ ಸೋಲುಂಡಿತು. ನಿಗದಿತ 60 ನಿಮಿಷಗಳ ಆಟದ ಮುಕ್ತಾಯಕ್ಕೆ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದವು. ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು. ಭಾರತ 6 ಪಂದ್ಯಗಳಲ್ಲಿ 4 ಜಯ, 2 ಸೋಲುಗಳೊಂದಿಗೆ 11 ಅಂಕ ಪಡೆದು ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಸಂತೋಷ್ ಟ್ರೋಫಿ: ಇಂದು ಕರ್ನಾಟಕ vs ದೆಹಲಿ
ಯೂಪಿಯಾ(ಅರುಣಾಚಲಪ್ರದೇಶ): 77ನೇ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್ ಸುತ್ತಿನ ಮೊದಲ ಪಂದ್ಯದಲ್ಲಿ ಗುರುವಾರ ಹಾಲಿ ಚಾಂಪಿಯನ್ ಕರ್ನಾಟಕ ತಂಡ ದೆಹಲಿ ಸವಾಲನ್ನು ಎದುರಿಸಲಿದೆ. ಕಳೆದ ಬಾರಿ ಚಾಂಪಿಯನ್ ಆದ ಕಾರಣ ಈ ಸಲ ನೇರವಾಗಿ ಫೈನಲ್ ಹಂತಕ್ಕೆ ಅರ್ಹತೆ ಪಡೆದಿದ್ದ ರಾಜ್ಯ ತಂಡವು ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಇನ್ನು ಬುಧವಾರ ನಡೆದ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಸರ್ವೀಸಸ್ 1-0 ಗೆಲುವು ಸಾಧಿಸಿದರೆ, ಅಸ್ಸಾಂ ವಿರುದ್ಧ ಕೇರಳ 3-1ರಲ್ಲಿ ಜಯಿಸಿತು.
ಸಚ್ಚಿನ್.... ಸಚ್ಚಿನ್..! ವಿಮಾನ ಏರಿದ ತೆಂಡುಲ್ಕರ್ ಸ್ವಾಗತಿಸಿದ ಫ್ಯಾನ್ಸ್..! ವಿಡಿಯೋ ವೈರಲ್
ಟಿಟಿ ವಿಶ್ವ ಕೂಟ: ಭಾರತ ತಂಡಗಳಿಗೆ ಸೋಲು
ಬುಸಾನ್ (ದ.ಕೊರಿಯಾ): ವಿಶ್ವ ಟೇಬಲ್ ಟೆನಿಸ್ ಟೀಂ ಚಾಂಪಿಯನ್‌ಶಿಪ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಸೋಲುಂಡಿವೆ. ಆದರೆ ಟೂರ್ನಿಯಲ್ಲಿ ತೋರಿದ ಪ್ರದರ್ಶನದಿಂದಾಗಿ ರ್‍ಯಾಂಕಿಂಗ್ ಆಧಾರದಲ್ಲಿ ಭಾರತ ತಂಡಗಳಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಪ್ರವೇಶ ಸಿಗುವುದು ಬಹುತೇಕ ಖಚಿತ ಎನಿಸಿದೆ. ಮನಿಕಾ ಬಾತ್ರಾ ನೇತೃತ್ವದ ಮಹಿಳಾ ತಂಡ ಚೈನೀಸ್ ತೈಪೆ ವಿರುದ್ಧ 1-3 ಅಂತರದಲ್ಲಿ ಸೋಲುಂಡರೆ, ಪುರುಷರ ತಂಡ ದಕ್ಷಿಣ ಕೊರಿಯಾ ವಿರುದ್ಧ 0-3ರಲ್ಲಿ ಪರಾಭವಗೊಂಡಿತು. ಟೂರ್ನಿಯಲ್ಲಿ ಕ್ವಾರ್ಟರ್ ಪ್ರವೇಶಿಸುವ ತಂಡಗಳಿಗೆ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಸಿಗಲಿದೆ. ಮಾ.5ರಂದು ಒಲಿಂಪಿಕ್ಸ್‌ಗೆ ಪ್ರವೇಶಿಸಿದ ತಂಡಗಳ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ.