Watch: ಬ್ಯಾಡ್ಮಿಂಟನ್ ಆಡುವಾಗಲೇ ಹಾರ್ಟ್‌ಅಟ್ಯಾಕ್, ಕೋರ್ಟ್‌ನಲ್ಲಿಯೇ ಸಿಪಿಆರ್ ಕೊಟ್ರೂ ಪ್ರಯೋಜನವಾಗ್ಲಿಲ್ಲ!
ಬ್ಯಾಡ್ಮಿಂಟನ್ ಆಡುವಾಗಲೇ 52 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ.
ನವದೆಹಲಿ (ಜೂ.10): ಮತ್ತೊಮ್ಮೆ ಹಠಾತ್ ಸಾವಿನ ಪ್ರಕರಣ ಉತ್ತರ ಪ್ರದೇಶದ ನೋಯ್ಡಾದಿಂದ ವರದಿಯಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ಆಟಗಾರನೊಬ್ಬ ಹೃದಯಾಘಾತದಿಂದಾಗಿ ಹಠಾತ್ ಸಾವು ಕಂಡಿದ್ದಾರೆ. ಒಟ್ಟಿಗೆ ಆಡುತ್ತಿದ್ದ ತಂಡದ ಇತರ ಸದಸ್ಯರು ಸ್ಥಳದಲ್ಲೇ ಸಿಪಿಆರ್ ನೀಡಲು ಪ್ರಯತ್ನಿಸಿದರು, ಆದರೆ ಆಟಗಾರನನ್ನು ಉಳಿಸಲಾಗಲಿಲ್ಲ. ಹೃದಯಾಘಾತಕ್ಕೆ ಒಳಗಾಗದ ವ್ಯಕ್ತಿಗೆ ಸಿಪಿಆರ್ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ನೋಯ್ಡಾದ ಸೆಕ್ಟರ್ 21ಎ ಅಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ.. ನೋಯ್ಡಾದ ಸೆಕ್ಟರ್ 21ಎ ಒಳಾಂಗಣ ಕ್ರೀಡಾಂಗಣದಲ್ಲಿ 52 ವರ್ಷದ ಆಟಗಾರ ಮಹೇಂದ್ರ ಅವರು ತಮ್ಮ ಸಹ ಆಟಗಾರರೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದರು. ಫಿಟ್ ಆಗಿ ಆಟವಾಡುತ್ತಿದ್ದ ಮಹೇಂದ್ರ ಎದೆನೋವಿನಿಂದ ಹಠಾತ್ತನೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಜೊತೆಯಲ್ಲಿ ಆಟವಾಡುತ್ತಿದ್ದ ಸ್ನೇಹಿತರು ಮಹೇಂದ್ರನಿಗೆ ಅವಸರದಲ್ಲಿ ಸಿಪಿಆರ್ ನೀಡಿದರು. ಆದರೆ, ಪ್ರಜ್ಞೆ ತಪ್ಪಿ ಬಿದ್ದಿದ್ದ ಮಹೇಂದ್ರನಿಗೆ ಎಚ್ಚರವಾಗಿರಲಿಲ್ಲ. ಬಳಿಕ ಸಹ ಆಟಗಾರರು ಆತನನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಮಹೇಂದ್ರ ಚಿಕಿತ್ಸೆಯ ವೇಳೆ ಸಾವನ್ನಪ್ಪಿದರು. ಫಿಟ್ ಆಗಿರುವ ಆಟಗಾರನೊಬ್ಬ ಆಡುವಾಗ ಹೃದಯಾಘಾತದಿಂದ ಹಠಾತ್ ಸಾವನ್ನಪ್ಪಿರುವುದು ಚರ್ಚೆಗೆ ಗ್ರಾಸವಾಗಿದೆ.
ಮತ್ತೊಂದೆಡೆ, ನೋಯ್ಡಾ ಪೊಲೀಸ್ ಮೀಡಿಯಾ ಸೆಲ್ ಮಾಹಿತಿ ನೀಡಿದ್ದು, ಸೆಕ್ಟರ್ 21 ಎ, ನೋಯ್ಡಾ ಒಳಾಂಗಣ ಕ್ರೀಡಾಂಗಣದ ಬ್ಯಾಡ್ಮಿಂಟನ್ ಅಂಕಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ 52 ವರ್ಷದ ಮಹೇಂದ್ರ ಶರ್ಮಾ ಅವರಿಗೆ ಆಡುವಾಗ ಹಠಾತ್ ಹೃದಯಾಘಾತವಾಗಿದೆ ಎಂದು ಖಚಿತ ಪಡಿಸಿದ್ದಾರೆ. ಸಹ ಆಟಗಾರರು ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಪೊಲೀಸ್ ಠಾಣೆ ಸೆಕ್ಟರ್ 24 ರಲ್ಲಿ ಮೃತರ ಸಂಬಂಧಿಕರಿಂದ ಇದುವರೆಗೆ ಯಾವುದೇ ಮಾಹಿತಿ ಮತ್ತು ಮಾಹಿತಿ ಲಭ್ಯವಾಗಿಲ್ಲ.
ಅರ್ಧ ಗಂಟೆಗೂ ಹೆಚ್ಚು ಮೊಬೈಲ್‌ನಲ್ಲಿ ಮಾತನಾಡ್ತೀರಾ, ಹಾರ್ಟ್‌ಅಟ್ಯಾಕ್ ಆಗೋದು ಖಂಡಿತ!
ಮಕ್ಕಳನ್ನೂ ಬಿಡ್ತಿಲ್ಲ ಹಾರ್ಟ್‌ಅಟ್ಯಾಕ್! ಆಟವಾಡಿ ಬಂದು ಮಲಗಿದ್ದ ಬಾಲಕಿ ಹೃದಯಾಘಾತದಿಂದ ಸಾವು