ಸಿಎ ಸಿಇಒ ಜೇಮ್ಸ್ ಸುದರ್‌ಲ್ಯಾಂಡ್ ಸಹ ಈ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಬಾಲ್ ಟ್ಯಾಂಪರಿಂಗ್ ಕುರಿತು ಬ್ಯಾಂಕ್ರಾಫ್ಟ್ ಹಾಗೂ ವಾರ್ನರ್‌ರನ್ನು ಮೊದಲು ವಿಚಾರಣೆ ನಡೆಸಲು ಸಿಎ ತೀರ್ಮಾನಿಸಿದೆ.
ಚೆಂಡು ವಿರೂಪ ಪ್ರಕರಣದಡಿ ಒಂದು ಟೆಸ್ಟ್'ನಿಂದ ನಿಷೇಧಗೊಂಡಿರುವ ಸ್ಟಿವ್ ಸ್ಮಿತ್ಗೆ ಮತ್ತಷ್ಟು ಸಂಕಷ್ಟ ಕಾದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಈಗಾಗಲೇ ತನಿಖೆ ಆರಂಭಿಸಿದ್ದು, ಇಯಾನ್ ರಾಯ್ ಹಾಗೂ ಪ್ಯಾಟ್ ಹೌವಾರ್ಡ್ ಆಫ್ರಿಕಾ ತಲುಪಿದ್ದಾರೆ.
ಸಿಎ ಸಿಇಒ ಜೇಮ್ಸ್ ಸುದರ್ಲ್ಯಾಂಡ್ ಸಹ ಈ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಬಾಲ್ ಟ್ಯಾಂಪರಿಂಗ್ ಕುರಿತು ಬ್ಯಾಂಕ್ರಾಫ್ಟ್ ಹಾಗೂ ವಾರ್ನರ್ರನ್ನು ಮೊದಲು ವಿಚಾರಣೆ ನಡೆಸಲು ಸಿಎ ತೀರ್ಮಾನಿಸಿದೆ. ಇವರು ನೀಡುವ ಹೇಳಿಕೆ ಮೇಲೆ ಸ್ಮಿತ್ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗಿದೆ. ಒಂದೊಮ್ಮೆ ಇಡೀ ಪ್ರಕರಣದ ರೂವಾರಿ ಸ್ಮಿತ್ ಎಂಬುದು ಸಾಬೀತಾದರೆ, ಅವರು ನಾಯಕತ್ವನ್ನು ಶಾಶತ್ವವಾಗಿ ಕಳೆದುಕೊಳ್ಳಲಿದ್ದಾರೆ. ಇದರ ಜತೆಗೆ ಒಂದು ವರ್ಷ ಅಥವಾ ಆಜೀವ ನಿಷೇಧದ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳು ದಟ್ಟವಾಗಿದೆ. ವಾರ್ನರ್, ಬ್ಯಾಂಕ್ರಾಫ್ಟ್ ಸಹ ನಿಷೇಧದ ಭೀತಿಯಲ್ಲಿದ್ದಾರೆ.
