ಎಲ್ಲಾ ತಂಡದ ಆಟಗಾರರು ಚೆಂಡಿಗೆ ಹೊಳಪು ನೀಡುವುದಕ್ಕಾಗಿ ಇಂತಹ ಕಾರ್ಯದಲ್ಲಿ ತೊಡಗುವುದು ಸಾಮಾನ್ಯ, ಡುಪ್ಲೆಸಿಸ್ ಮಾಡಿದ್ದರಲ್ಲಿ ಯಾವುದೆ ತಪ್ಪಿಲ್ಲ- ಸ್ಟೀವ್ ಸ್ಮಿತ್

ಅಡಿಲೇಡ್(ನ.23): ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್, ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸಿದ ಪ್ರಕರಣವನ್ನು ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಸಮರ್ಥಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್ಲಾ ತಂಡದ ಆಟಗಾರರು ಚೆಂಡಿಗೆ ಹೊಳಪು ನೀಡುವುದಕ್ಕಾಗಿ ಇಂತಹ ಕಾರ್ಯದಲ್ಲಿ ತೊಡಗುವುದು ಸಾಮಾನ್ಯ, ಡುಪ್ಲೆಸಿಸ್ ಮಾಡಿದ್ದರಲ್ಲಿ ಯಾವುದೆ ತಪ್ಪಿಲ್ಲ ಎಂದು ಸ್ಮಿತ್, ಪ್ಲೆಸಿಸ್ ಪರ ಬ್ಯಾಟ್ ಬೀಸಿದ್ದಾರೆ.

ಆದರೆ ಐಸಿಸಿ ಡುಪ್ಲೆಸಿಸ್ ಕ್ರಮವನ್ನು ವಿರೋಧಿಸಿದ್ದು, ಪಂದ್ಯದ ಪೂರ್ಣ ಪ್ರಮಾಣದ ಹಣವನ್ನು ದಂಡದ ರೂಪದಲ್ಲಿ ವಿಧಿಸಿದೆ. ಹಾಗೆ ಕೆಲ ಪಂದ್ಯಗಳಿಂದ ಡುಪ್ಲೆಸಿಸ್ ಅವರನ್ನು ದೂರ ಇಡುವ ಬಗ್ಗೆಯೂ ಚಿಂತನೆ ನಡೆಸಿದೆ.