ನವದೆಹಲಿ(ಆ.29): ಶ್ರೀಲಂಕಾದ ಸ್ಪಿನ್ನರ್‌ ಅಜಂತಾ ಮೆಂಡಿಸ್‌ ಬುಧವಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃ​ತ್ತಿ ಘೋಷಿ​ಸಿ​ದ್ದಾರೆ. ಕೇರಂ ಬಾಲ್‌ನಿಂದ ಪ್ರಸಿದ್ಧಿ ಪಡೆ​ದಿದ್ದ ಅವರು, ಶಂಕಾ​ಸ್ಪದ ಬೌಲಿಂಗ್‌ ಶೈಲಿ ಸುಳಿ​ಯಲ್ಲೂ ಸಿಲು​ಕಿ​ದ್ದರು. 

ಕೊನೆಗೂ ನಿವೃತ್ತಿ ಹೇಳಿದ 85ರ ಹರೆಯದ ವಿಂಡೀಸ್ ವೇಗಿ!

34 ವರ್ಷದ ಮೆಂಡಿಸ್‌, 2008ರ ಏಷ್ಯಾ ಕಪ್‌ ಫೈನಲ್‌ನಲ್ಲಿ ಭಾರತ ವಿರುದ್ಧ 13 ರನ್‌ಗೆ 6 ವಿಕೆಟ್‌ ಕಬ​ಳಿಸಿ ಜನ​ಪ್ರಿ​ಯ​ಗೊಂಡಿ​ದ್ದರು. ಏಕದಿನದಲ್ಲಿ ಅತಿವೇಗದ 50 ವಿಕೆಟ್‌, ಅಂತಾ​ರಾ​ಷ್ಟ್ರೀಯ ಟಿ20ಯಲ್ಲಿ 2 ಬಾರಿ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಕಬ​ಳಿ​ಸಿದ ದಾಖಲೆ ಬರೆ​ದಿ​ದ್ದರು. ಅಲ್ಲದೇ ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್’ನಲ್ಲಿ 6 ವಿಕೆಟ್ ಪಡೆದ ಏಕೈಕ ಬೌಲರ್ ಎನ್ನುವ ದಾಖಲೆಯೂ ಮೆಂಡಿಸ್ ಹೆಸರಿನಲ್ಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ ಹಾಶೀಂ ಆಮ್ಲಾ

ಲಂಕಾ ಪರ 19 ಟೆಸ್ಟ್‌ಗಳಲ್ಲಿ 70 ವಿಕೆಟ್‌ ಪಡೆ​ದಿದ್ದ ಅವರು, 87 ಏಕದಿನ​ಗ​ಳಲ್ಲಿ 152 ವಿಕೆಟ್‌ ಕಿತ್ತಿ​ದ್ದರು. 39 ಅಂತಾ​ರಾ​ಷ್ಟ್ರೀಯ ಟಿ20 ಪಂದ್ಯ​ಗ​ಳ​ನ್ನಾ​ಡಿದ್ದ ಅವರು 66 ವಿಕೆಟ್‌ ಉರು​ಳಿ​ಸಿ​ದ್ದರು. ಐಪಿ​ಎಲ್‌ನಲ್ಲಿ ಕೆಕೆ​ಆರ್‌ ತಂಡದ ಪರ ಅವರು ಆಡಿ​ದ್ದರು.