ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಹಾಶೀಂ ಆಮ್ಲಾ
ದಕ್ಷಿಣ ಆಫ್ರಿಕಾ ತಂಡದ ಅನುಭವಿ ಕ್ರಿಕೆಟಿಗ, ಹಲವಾರು ದಾಖಲೆಗಳ ಒಡೆಯ ಹಾಶೀಂ ಆಮ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಆದರೆ ದೇಸಿ ಟೂರ್ನಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಮ್ಲಾ ನಿವೃತ್ತಿ ಬಗೆಗಿನ ವರದಿ ಇಲ್ಲಿದೆ ನೋಡಿ...
ಕೇಪ್‌ಟೌನ್[ಆ.09]: ದಕ್ಷಿಣ ಆಫ್ರಿಕಾದ ತಾರಾ ಬ್ಯಾಟ್ಸ್‌ಮನ್, ಮಾಜಿ ನಾಯಕ ಹಾಶೀಂ ಆಮ್ಲಾ ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದರು. ದೇಸಿ ಟೂರ್ನಿಗಳಲ್ಲಿ ಅವರು ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ತಮ್ಮ ನಿವೃತ್ತಿಗೆ ನಿರ್ದಿಷ್ಟ ಕಾರಣವನ್ನು ಅವರು ನೀಡಿಲ್ಲ.
ಟೆಸ್ಟ್ ಕ್ರಿಕೆಟ್‌ಗೆ ಡೇಲ್ ಸ್ಟೇನ್ ದಿಢೀರ್ ವಿದಾಯ!
15 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದ ಆಮ್ಲಾ, 124 ಟೆಸ್ಟ್, 181 ಏಕದಿನ ಹಾಗೂ 44 ಟಿ20 ಪಂದ್ಯಗಳನ್ನು ಆಡಿದ್ದಾರೆ. 2004ರಲ್ಲಿ ಅವರು ದಕ್ಷಿಣ ಆಫ್ರಿಕಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಟೆಸ್ಟ್‌ನಲ್ಲಿ 9,282 ರನ್ ಕಲೆಹಾಕಿರುವ ಆಮ್ಲಾ, ದ.ಆಫ್ರಿಕಾ ಪರ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಏಕದಿನದಲ್ಲಿ ವೇಗದ 2000, 3000, 4000, 5000, 6000, 7000 ರನ್ ಬಾರಿಸಿದ ದಾಖಲೆ ಆಮ್ಲಾ ಹೆಸರಿನಲ್ಲಿದೆ.
‘ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. 15 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಸಾಕಷ್ಟು ಪಾಠಗಳನ್ನು ಕಲಿತಿದ್ದೇನೆ. ಹಲವು ಸ್ನೇಹಿತರನ್ನು ಗಳಿಸಿದ್ದೇನೆ. ನನ್ನನ್ನು ಬೆಂಬಲಿಸಿದ ನನ್ನ ಪೋಷಕರು, ಕುಟುಂಬ ಸದಸ್ಯರು, ಕ್ರಿಕೆಟ್ ಮಂಡಳಿ, ಸಹ ಆಟಗಾರರು, ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತೇನೆ’ ಎಂದು ಆಮ್ಲಾ ಹೇಳಿದ್ದಾರೆ.
ಅಂ.ರಾ.ಕ್ರಿಕೆಟ್‌ನಲ್ಲಿ ಆಮ್ಲಾ
ಮಾದರಿ ಪಂದ್ಯ ರನ್ 100/50
ಟೆಸ್ಟ್ 124 9,282 28/41
ಏಕದಿನ 181 8,113 27/39
ಟಿ20 44 1,277 0/8
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ