ನಿವೃತ್ತಿ ಖಚಿತಪಡಿಸಿದ ಮಾಲಿಂಗ..! ಆದರೆ..?

ಶ್ರೀಲಂಕಾ ಅನುಭವಿ ಕ್ರಿಕೆಟಿಗ ಲಸಿತ್ ಮಾಲಿಂಗ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದ ಬಳಿಕ ಒನ್ ಡೇ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ಆದರೆ 2020ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ತಂಡವನ್ನು ಪ್ರತಿನಿಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Sri Lankan Cricketer Lasith Malinga to play T20s after quitting ODIs

ಕೊಲೊಂಬೊ[ಜು.24]: ಶುಕ್ರವಾರ (ಜು.26) ದಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಏಕದಿನಕ್ಕೆ ನಿವೃತ್ತಿ ಹೇಳುವುದು ಖಚಿತ ಎಂದು ಲಂಕಾ ವೇಗಿ ಲಸಿತ್‌ ಮಾಲಿಂಗ ಹೇಳಿದ್ದಾರೆ. 

ಕಟ್ಟಕಡೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾದ ಮಾಲಿಂಗ

ಆದರೆ ಮುಂದಿನ ವರ್ಷ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ವಿಶ್ವಾಸದಲ್ಲಿ ಲಸಿತ್ ಮಾಲಿಂಗ ಇದ್ದಾರೆ. ಕಳೆದ ಸೋಮವಾರವಷ್ಟೇ ಶ್ರೀಲಂಕಾ ನಾಯಕ ದಿಮುತ್‌ ಕರುಣರತ್ನೆ ಪತ್ರಿಕಾಗೋಷ್ಠಿ ವೇಳೆ, ಮಾಲಿಂಗ ಬಾಂಗ್ಲಾದೇಶ ವಿರುದ್ಧದ ಏಕದಿನಕ್ಕೆ ನಿವೃತ್ತಿ ಹೇಳಲಿದ್ದಾರೆ ಎಂದಿದ್ದರು. 2011ರಲ್ಲಿ ಮಾಲಿಂಗ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

2020ರ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದ್ದು, ಮಾಲಿಂಗ ಶ್ರೀಲಂಕಾ ಟಿ20 ತಂಡದಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.  ಕಳೆದೆರಡು ವರ್ಷಗಳಿಂದ ಆಯ್ಕೆ ಸಮಿತಿಯ ಅವಕೃಪೆಗೆ ಒಳಗಾಗಿದ್ದ ಮಾಲಿಂಗ, ವಿಶ್ವಕಪ್ ಟೂರ್ನಿಯಲ್ಲಿ ತಾವೆಷ್ಟು ಉಪಯುಕ್ತ ಬೌಲರ್ ಎನ್ನುವುದನ್ನು ಸಾಬೀತು ಮಾಡಿದ್ದರು. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 7 ಇನ್ನಿಂಗ್ಸ್’ಗಳಲ್ಲಿ 13 ವಿಕೆಟ್ ಪಡೆಯುವ ಮೂಲಕ ಲಂಕಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. 
 

Latest Videos
Follow Us:
Download App:
  • android
  • ios