ಕೊಲೊಂಬೊ[ಜು.23]: ಶ್ರೀಲಂಕಾದ ತಾರಾ ವೇಗದ ಬೌಲರ್‌ ಲಸಿತ್‌ ಮಾಲಿಂಗ, ಜು. 26 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಲಂಕಾ ನಾಯಕ ದಿಮುತ್‌ ಕರುಣರತ್ನೆ ಸೋಮವಾರ ಹೇಳಿದ್ದಾರೆ. 

ಮಾಲಿಂಗ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿ

2011ರಲ್ಲಿ ಮಾಲಿಂಗ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಟಿ20 ಕ್ರಿಕೆಟ್‌ ಆಡುವ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿಲ್ಲ. ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಮಾಲಿಂಗ ಕೇವಲ 1 ಪಂದ್ಯದಲ್ಲಿ ಮಾತ್ರ ಆಡಲಿದ್ದಾರೆ. ‘ನಿವೃತ್ತಿ ವಿಚಾರದ ಬಗ್ಗೆ ಆಯ್ಕೆ ಸಮಿತಿ ಬಳಿ ಮಾಲಿಂಗ ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ನನ್ನ ಬಳಿ ಮೊದಲ ಪಂದ್ಯದ ನಂತರ ನಿವೃತ್ತಿ ಹೇಳುವುದಾಗಿ ಮಾಲಿಂಗ ತಿಳಿಸಿರುವುದಾಗಿ’ ದಿಮುತ್‌ ಹೇಳಿದ್ದಾರೆ.

IPL Final: ಮತ್ತೆ ಮತ್ತೆ ನೋಡಬೇಕಿನಿಸುವ ಆ ಒಂದು ಓವರ್...!

ಏಕದಿನ ಕ್ರಿಕೆಟ್‌ನಲ್ಲಿ ಮಾಲಿಂಗ 219 ಇನ್ನಿಂಗ್ಸ್‌ ಗಳಿಂದ 335 ವಿಕೆಟ್‌ ಪಡೆದಿದ್ದಾರೆ. ಶ್ರೀಲಂಕಾ ಪರ ಅತ್ಯಧಿಕ ವಿಕೆಟ್‌ ಪಡೆದ 3ನೇ ಬೌಲರ್‌ ಎನಿಸಿದ್ದಾರೆ. 35 ವರ್ಷ ವಯಸ್ಸಿನ ಮಾಲಿಂಗ, 2019ರ ಏಕದಿನ ವಿಶ್ವಕಪ್‌ ಟೂರ್ನಿಯ 7 ಇನ್ನಿಂಗ್ಸ್‌ ಗಳಲ್ಲಿ ಮಾಲಿಂಗ 13 ವಿಕೆಟ್‌ ಪಡೆದಿದ್ದರು.