ಹೈದರಾಬಾದ್(ಏ.17): ಐಪಿಎಲ್ ಟೂರ್ನಿಯಲ್ಲಿ ಮತ್ತೆ ಗೆಲುವಿನ ಹಳಿಗೆ ಮರಳಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಇದೀಗ ರಿಲಾಕ್ಸ್ ಮೂಡ್‌ಗೆ ಜಾರಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗೆಲುವು ಸಾಧಿಸಿರುವ ಹೈದರಾಬಾದ್ ಇದೀಗ ಗಲ್ಲಿ ಕ್ರಿಕೆಟ್ ಆಡೋ ಮೂಲಕ ಗಮನಸೆಳೆದಿದ್ದಾರೆ. ಮಕ್ಕಳೊಂದಿಗೆ ಕ್ರಿಕೆಟ್ ಆಡಿ ರಿಲಾಕ್ಸ್ ಆಗಿದ್ದಾರೆ.

ಇದನ್ನೂ ಓದಿ: IPL 2019: ಧೋನಿ ಇಲ್ಲದ CSK ಮೇಲೆ ಸವಾರಿ ಮಾಡಿದ SRH

ಸನ್‌ರೈಸರ್ಸ್ ಹೈದರಾಬಾದ್ ತಂಡದ ರಶೀದ್ ಖಾನ್ ಹಾಗೂ ವಿಜಯ್ ಶಂಕರ್ ಮಕ್ಕಳ ಜೊತೆ ಕ್ರಿಕೆಟ್ ಆಡಿದ್ದಾರೆ. ದಿಢೀರ್ ಆಗಿ ಐಪಿಎಲ್ ಸ್ಟಾರ್ ಆಟಗಾರರನ್ನು ನೋಡಿದ  ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ. ಟೆನಿಸ್ ಬಾಲ್ ಕ್ರಿಕೆಟ್ ಆಡಿದ ವಿಜಯ್ ಶಂಕರ್ ಹಾಗೂ ರಶೀದ್ ಖಾನ್, ಮಕ್ಕಳಿಗೆ ಕ್ರಿಕೆಟ್ ಟಿಪ್ಸ್ ನೀಡಿದರು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕುರಿತು ಮಾಹಿತಿ ನೀಡಿದರು.

 

 

ಇದನ್ನೂ ಓದಿ: ಭಾರತ-ಶ್ರೀಲಂಕಾ ಓಡಾಡಿದ್ದೇ ಬಂತು- ವಿಶ್ವಕಪ್‌ನಲ್ಲಿ ಮಲಿಂಗಾಗಿಲ್ಲ ನಾಯಕತ್ವ!

ಸನ್ ರೈಸರ್ಸ್ ಹೈದರಾಬಾದ್ ತಂಡ 8 ಪಂದ್ಯದಲ್ಲಿ 4ರಲ್ಲಿ ಗೆಲುವು 4ರಲ್ಲಿ ಸೋಲು ಕಂಡಿದೆ. ಈ ಮೂಲಕ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಏಪ್ರಿಲ್ 21ಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡ, ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.