ಕಾರ್ಡಿಫ್[ಮೇ.29]: 12ನೇ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕಂಡ ಯಶಸ್ವಿ ಜೋಡಿಯಾದ ಮಾಜಿ ಕೋಚ್ ಜಾನ್ ರೈಟ್ ಹಾಗೂ ಸೌರವ್ ಗಂಗೂಲಿ ಜತೆಯಾಗಿದ್ದಾರೆ. ಕಾಮೆಂಟರಿ ಬಾಕ್ಸ್ ನಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ನೋಡಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

2000ದಿಂದ 2005ರವರೆಗೆ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಜಾನ್ ರೈಟ್ ಭಾರತಕ್ಕೆ ಹೊಸ ದಿಕ್ಕನ್ನು ತೋರಿಸಿದ್ದರು. ಸೌರವ್ ಗಂಗೂಲಿ ನಾಯಕತ್ವದಲ್ಲಿ, ರೈಟ್ ಮಾರ್ಗದರ್ಶನದಲ್ಲಿ ಭಾರತ ತಂಡ ಹಲವಾರು ಸ್ಮರಣೀಯ ಗೆಲುವುಗಳನ್ನು ದಾಖಲಿಸಿತ್ತು. ಗಂಗೂಲಿ ನಾಯಕತ್ವದಲ್ಲಿ 2003ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ಕಪ್ ಕೈಚೆಲ್ಲಿತ್ತು. 

ಆ ದಿನಗಳನ್ನು ಮೆಲುಕು ಹಾಕಿದ ಸೌರವ್ ಗಂಗೂಲಿ, ನಾನು ನಾಯಕನಾಗಿದ್ದಾಗ ಬಹುತೇಕ ಎಲ್ಲಾ ನಿರ್ಧಾರಗಳನ್ನು ಜಾನ್ ರೈಟ್ ಅವರೇ ತೆಗೆದುಕೊಳ್ಳುತ್ತಿದ್ದರು. ನಾನು ಅವರು ತೆಗೆದುಕೊಂಡ ನಿರ್ಧಾರಗಳನ್ನು ವಿಧೇಯ ವಿದ್ಯಾರ್ಥಿಗಳಂತೆ ಪಾಲಿಸುತ್ತಿದ್ದೆ ಎಂದು ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮಧುರ & ಕರಾಳ ಕ್ಷಣಗಳಿವು..!

ಗಂಗೂಲಿ ಮಾತಿಗೆ ಪ್ರತಿಕ್ರಿಯಿಸಿದ ರೈಟ್, ನನಗೆ ನೆನಪಿದ್ದಂತೆ ನೀವು ನಾಯಕರಾಗಿದ್ರಿ. ನಾನು ಸುಮ್ಮನೆ ಅವರಿಗೆ ಬೆಂಬಲವಾಗಿದ್ದೆ ಎಂದು ಹೇಳಿದ್ದಾರೆ.

ಈ ಗುರು-ಶಿಷ್ಯರ ಜೋಡಿ ಕಂಡ ಟ್ವಿಟರಿಗರು ಏನಂದ್ರು ನೀವೇ ನೋಡಿ...