Asianet Suvarna News Asianet Suvarna News

ಮೆಟ್ರೊ ನಿಲ್ದಾಣಕ್ಕೆ ಗಂಗೂಲಿ ಹೆಸರಿಡಲು ಒತ್ತಾಯ

ಇದೇ ವೇಳೆ ಅವರ ನಿವಾಸದ ಸಮೀಪ ನೂತನವಾಗಿ ನಿರ್ಮಾಣವಾಗುತ್ತಿರುವ ಮೆಟ್ರೊ ನಿಲ್ದಾಣಕ್ಕೆ ಅವರ ಹೆಸರಿಡಬೇಕೆಂದು ದಾದಾ ಅಭಿಮಾನಿಗಳು ಒತ್ತಾಯಿಸಿದ್ದಾರೆ.

Sourav Ganguly Fans Want Metro Station in His Name
  • Facebook
  • Twitter
  • Whatsapp

ಕೋಲ್ಕತಾ(ಜು.08): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇಂದು 46ನೇ ವಸಂತಕ್ಕೆ ಕಾಲಿರಿಸಿದ್ದು, ಕೋಲ್ಕತಾ ಸೇರಿದಂತೆ ದೇಶದ ಹಲವೆಡೆ ಅವರ ಅಭಿಮಾನಿಗಳು ಸಿಹಿ ಹಂಚುವುದರ ಮೂಲಕ ಸಂತಸದಿಂದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.

ಇದೇ ವೇಳೆ ಅವರ ನಿವಾಸದ ಸಮೀಪ ನೂತನವಾಗಿ ನಿರ್ಮಾಣವಾಗುತ್ತಿರುವ ಮೆಟ್ರೊ ನಿಲ್ದಾಣಕ್ಕೆ ಅವರ ಹೆಸರಿಡಬೇಕೆಂದು ದಾದಾ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಈ ಕುರಿತು ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗುವುದು ಹಾಗೂ ಸ್ಥಳೀಯ ಸಂಸದರ ಮೇಲೆ ಒತ್ತಡ ಹೇರಲಾಗುವುದು ಎಂದು ಗಂಗೂಲಿ ಅಭಿಮಾನಿಗಳು ತಿಳಿಸಿದ್ದಾರೆ.

ಕೆಲಸದ ನಿಮಿತ್ತ ಗಂಗೂಲಿ ಮುಂಬೈನಲ್ಲಿದ್ದು, ಅವರು ಆಗಮಿಸುವ ತನಕ ಅವರ ನಿವಾಸದ ಬಳಿ ಕಾಯುತ್ತೇವೆ ಎಂದಿದ್ದಾರೆ.

ಗಂಗೂಲಿ ಅವರು ಇಲ್ಲದಿದ್ದರು ಇಲ್ಲಿನ ಅವರ ನಿವಾಸದ ಮುಂದೆ ಅಭಿಮಾನಿಗಳು ಮುಂಜಾನೆಯಿಂದಲೂ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

 

Follow Us:
Download App:
  • android
  • ios