ಆರ್‌ಸಿಬಿ ಅಭಿಮಾನಿ ದೀಪಿಕಾಗೆ ಸಾಮಾಜಿಕ ತಾಣದಲ್ಲಿ ಕಿರುಕುಳ! ರಾತ್ರೋರಾತ್ರಿ ಸೆಲೆಬ್ರಿಟಿಯಾಗಿದ್ದ ಯುವತಿ

ನವದೆಹಲಿ[ಮೇ.14]: ಸಾಮಾಜಿಕ ಮಾಧ್ಯಮಗಳು ಯಾರನ್ನು, ಎಷ್ಟುಬೇಗ ಬೇಕಿದ್ದರೂ ಸೆಲಬ್ರಿಟಿ ಮಾಡುತ್ತವೆ, ಅಷ್ಟೇ ಬೇಗ ಸಮಸ್ಯೆಯನ್ನೂ ತಂದೊಡ್ಡುತ್ತವೆ. ಇತ್ತೀಚೆಗಷ್ಟೆಐಪಿಎಲ್‌ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿದ್ದ ಯುವತಿ, ಮಾಡೆಲ್‌ ದೀಪಿಕಾ ಘೋಷ್‌ರನ್ನು ಟೀವಿ ಪರದೆ ಮೇಲೆ ಪದೇ ಪದೇ ತೋರಿಸಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

RCB ಪಂದ್ಯದ ವೇಳೆ ಹೃದಯ ಕದ್ದ ಸ್ಟೇಟ್ ಕ್ರಶ್, ಯಾರೀಕೆ?

ಆಕೆ ರಾತ್ರೋರಾತ್ರಿ ಸೆಲೆಬ್ರಿಟಿಯಾಗಿದ್ದರು. ಅವರ ಇನ್‌ಸ್ಟಾಗ್ರಾಂ ಖಾತೆ ಅಧಿಕೃತಗೊಂಡಿತ್ತು. ಹಲವು ವರ್ಷಗಳಿಂದ ಕ್ರೀಡಾಂಗಣಕ್ಕೆ ತೆರಳಿ ಆರ್‌ಸಿಬಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದ ದೀಪಿಕಾ ಪಾಲಿಗೆ ಆರ್‌ಸಿಬಿ-ಸನ್‌ರೈಸರ್ಸ್ ನಡುವಿನ ಪಂದ್ಯ, ಮತ್ತೊಂದು ಪಂದ್ಯವಾಗಿತ್ತು ಅಷ್ಟೆ. ಆದರೆ ಟೀವಿಯಲ್ಲಿ ಬಂದಿದ್ದೇ ಬಂದಿದ್ದು, ಆಕೆಯ ಜೀವನ ಬದಲಾಗಿದೆ.

View post on Instagram

ಸಾಮಾಜಿಕ ತಾಣಗಳಿಂದ ಪಡೆದ ಜನಪ್ರಿಯತೆಯೇ ಆಕೆಗೀಗ ಮುಳುವಾಗಿದೆ. ಐಪಿಎಲ್‌ನಿಂದ ಸೆಲೆಬ್ರಿಟಿ ಪಟ್ಟಪಡೆದ ಬಳಿಕ ತಾನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ದೀಪಿಕಾ ವಿವರವಾಗಿ ಬರೆದುಕೊಂಡಿದ್ದಾರೆ. ‘ನನ್ನ ಹೆಸರು ದೀಪಕಾ ಘೋಷ್‌. ನನ್ನ ಬಗ್ಗೆ ಹೇಳಲಾಗುತ್ತಿರುವ ವಿಚಾರಗಳ ಪೈಕಿ ಬಹುಶಃ ಇದೊಂದೇ 100ರಷ್ಟುಸತ್ಯ. ನನಗೆ ಯಾವ ಜನಪ್ರಿಯತೆಯೂ ಬೇಕಿರಲಿಲ್ಲ. ನಾನು ಸೆಲೆಬ್ರಿಟಿ ಅಲ್ಲ, ಸಾಮಾನ್ಯ ಅಭಿಮಾನಿಯಷ್ಟೆ. ಸಾಮಾಜಿಕ ತಾಣಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಪ್ರಚಾರವಾಗುತ್ತಿದೆ. ಮಾನಸಿಕ ಒತ್ತಡಕ್ಕೆ ಸಿಲುಕಿದ್ದೇನೆ. ಪುರುಷರು ನನಗೆ ಕೀಳು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಮಹಿಳೆಯರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ನಾನು ಅವರೊಬ್ಬಳು ಎನ್ನುವುದನ್ನು ಮರೆತಿದ್ದಾರೆ’ ಎಂದು ಬರೆದಿದ್ದಾರೆ.